ಕಾಣೆಯಾದ ಭಾರತೀಯ ಬಾಲಕಿ ಶವವಾಗಿ ಪತ್ತೆ?
Team Udayavani, Oct 24, 2017, 7:25 AM IST
ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್ನ ರಿಚರ್ಡ್ಸನ್ ನಗರದ ಕಾಲುವೆಯೊಂದರಲ್ಲಿ 3 ವರ್ಷ ವಯಸ್ಸಿನ ಬಾಲಕಿಯ ಮೃತದೇಹವೊಂದು ಪತ್ತೆಯಾಗಿದ್ದು, ಇದು 2 ವಾರಗಳ ಹಿಂದೆ ಕಾಣೆಯಾದ ಭಾರತೀಯ ಮೂಲದ ಮಗು ಶೆರಿನ್ ಮ್ಯಾಥ್ಯೂಸ್ಳನ್ನು ಹೋಲುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಕೇರಳ ಮೂಲದ ದಂಪತಿ ಎನ್ಜಿಒವೊಂದರಿಂದ ಶೆರಿನ್ ಎಂಬ ಮಗುವನ್ನು ದತ್ತು ಪಡೆದಿದ್ದರು. ಮಗು ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ಆಕೆಯ ತಂದೆ ಮಗುವನ್ನು ಮನೆಯ ಹೊರಗೆ ನಿಲ್ಲಿಸಿದ್ದರು. ತದನಂತರ ಮಗು ನಾಪತ್ತೆಯಾಗಿತ್ತು. ಶಿರಿನ್ಗೆ ಸಂವಹನ ಹಾಗೂ ಬೆಳವಣಿಗೆ ಸಮಸ್ಯೆ ಇತ್ತು ಎಂದು ಪೊಲೀ ಸರು ಹೇಳಿದ್ದಾರೆ. ಇದೀಗ ಪತ್ತೆಯಾಗಿರುವ ಮೃತದೇಹವು ಶಿರಿನ್ಳದ್ದೇ ಎಂಬುದು ದೃಢವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ