ಐತಿಹಾಸಿಕ ಚಿತ್ರದಲ್ಲಿ “ಅಲ್ಲಮ”ನಾಗಿ ಧನಂಜಯ್: ಸೂಪರ್ ಟ್ರೈಲರ್ ವೀಕ್ಷಿಸಿ
Team Udayavani, Jan 25, 2017, 3:18 PM IST
ಟಿ.ಎಸ್.ನಾಗಾಭರಣ ನಿರ್ದೇಶನದ “ಅಲ್ಲಮ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಯಜಮಾನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಹರಿ ಎಲ್ ಖೋಡೆ ಅವರು ನಿರ್ಮಿಸಿದ್ದಾರೆ. ಧನಂಜಯ್ ಮತ್ತು ಮೇಘನಾರಾಜ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅಲ್ಲಮ-ಬಯಲು ಬೆರಗು ಎಂಬ ಶೀರ್ಷಿಕೆಯೇ ಇದೊಂದು ಐತಿಹಾಸಿಕ ಚಿತ್ರ ಎಂಬುದನ್ನು ಸಾರುತ್ತದೆ. ಈ ಚಿತ್ರದಲ್ಲಿ ಧನಂಜಯ್ ಅವರು ಅಲ್ಲಮನಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿಯೇ ಮೃದಂಗ, ಯೋಗಾಸನವನ್ನು ಧನಂಜಯ್ ಕಲಿತುಕೊಂಡಿದ್ದಾರೆ.
ಬಾಪು ಪದ್ಮನಾಭ ಅವರು ಸಂಗೀತ ನೀಡಿರುವ ಈ ಚಿತ್ರಕ್ಕೆ ಜಿ.ಎಸ್.ಭಾಸ್ಕರ್ ಅವರ ಛಾಯಾಗ್ರಹಣವಿದೆ. ಬಿ.ಎಸ್.ಕೆಂಪರಾಜ್ ಸಂಕಲನ, ಪನ್ನಗ ಭರಣ ಸಹ ನಿರ್ದೇಶನ, ನಿರ್ಮಾಣ ವಿನ್ಯಾಸ, ನಾಗಿಣಿ ಭರಣ ವಸ್ತ್ರ ವಿನ್ಯಾಸ, ಮದನ್ – ಹರಿಣಿ, ಚಾಮರಾಜ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಶಶಿಧರ ಅಡಪರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನಂಜಯ್, ಮೇಘನರಾಜ್, ತೌಶಿರ್, ಲಕ್ಷ್ಮೀ ಗೋಪಾಲಸ್ವಾಮಿ, ಸಂಚಾರಿ ವಿಜಯ್, ರಾಮಕೃಷ್ಣ, ಆಶಾಲತ, ಶೃತ ಭರಣ ಮುಂತಾದವರಿದ್ದಾರೆ. (‘Allama’ The Film Official Teaser HD, TS Nagabharana, Dhananjaya, Meghana Raj)