“ಸರ್ಕಾರಿ ಕೆಲಸ ದೇವರ ಕೆಲಸ’ ಈ ವಾರ ತೆರೆಗೆ: ಟ್ರೈಲರ್ ವೀಕ್ಷಿಸಿ
Team Udayavani, Jun 1, 2017, 6:15 PM IST
ಈ ವಾರ “ಸರ್ಕಾರಿ ಕೆಲಸ ದೇವರ ಕೆಲಸ’ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರದ ಟ್ಯಾಗ್ ಲೈನ್ ‘ಎಲ್ರೂ__(ಡ್ಯಾಷ್ ಡ್ಯಾಷ್)ನನ್ ಮಕ್ಳು…’ ಜನರಲ್ಲಿ ಕೌತುಕ ಮೂಡಿಸಿದ್ದು, ಚಿತ್ರವನ್ನು ಜೋಗಿ ಚಿತ್ರ ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್ ನಿರ್ಮಿಸಿ, ಆರ್.ರವೀಂದ್ರ ನಿರ್ದೇಶಿಸಿದ್ದಾರೆ. ಅಲ್ಲದೇ ಸಮಕಾಲೀನ ರಾಜಕೀಯ ಪರಿಸ್ಥಿತಿಗೆ ವ್ಯಂಗ್ಯಗನ್ನಡಿ ಹಿಡಿಯುವ ಈ ಚಿತ್ರಕ್ಕೆ ‘ಮಠ’ ಗುರುಪ್ರಸಾದ್ ಸಂಭಾಷಣೆಯಿದೆ. ರವಿಶಂಕರ್ ಗೌಡ, ಸಂಯುಕ್ತಾ ಹೊರನಾಡು, ರಂಗಾಯಣ ರಘು, ಸುಚೇಂದ್ರಪ್ರಸಾದ್, ರಾಜು ತಾಳಿಕೋಟೆ, ನರ್ಸ್ ಜಯಲಕ್ಷ್ಮೀ, ಸೇರಿದಂತೆ ಬಹುತೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ನಾಗೇಂದ್ರಪ್ರಸಾದ್ ಬರೆದಿರುವ ಎರಡು ಗೀತೆಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಮಂಜುನಾಥ್ ನಾಯಕ್ ಅವರ ಕ್ಯಾಮೆರಾ ಕೈ ಚಳಕವಿದೆ ಹಾಗೂ ಕೆ.ಎಂ. ಪ್ರಕಾಶ್ ಕತ್ತರಿ ಪ್ರಯೋಗ ಚಿತ್ರಕ್ಕಿದೆ. (Sarkaari Kelasa Devara Kelasa, Teaser, Ravishankar Gowda, Samyukta Hornad, Rangayana Raghu)