ಉಡುಪಿ ಜಿಲ್ಲೆ: 4 ಜಿ.ಪಂ. ಕ್ಷೇತ್ರ ಏರಿಕೆ, 9 ತಾ.ಪಂ. ಕ್ಷೇತ್ರ ಇಳಿಕೆ


Team Udayavani, Feb 23, 2021, 5:00 AM IST

ಉಡುಪಿ ಜಿಲ್ಲೆ: 4 ಜಿ.ಪಂ. ಕ್ಷೇತ್ರ ಏರಿಕೆ, 9 ತಾ.ಪಂ. ಕ್ಷೇತ್ರ ಇಳಿಕೆ

ಉಡುಪಿ: ಎಪ್ರಿಲ್‌/ಮೇ ತಿಂಗಳಲ್ಲಿ ನಿರೀಕ್ಷಿಸುತ್ತಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಪೂರಕವಾಗಿ ಕ್ಷೇತ್ರ ಪುನರ್ವಿಂಗಡನೆಗೆ ರಾಜ್ಯ ಚುನಾವಣ ಆಯೋಗ ಮಾರ್ಗದರ್ಶೀ ಸೂತ್ರವನ್ನು ಪ್ರಕಟಿಸಿದ್ದು ಅದರಂತೆ ಉಡುಪಿ ಜಿಲ್ಲೆಯಲ್ಲಿ ಜಿ.ಪಂ. ಕ್ಷೇತ್ರದ ಸಂಖ್ಯೆ ಹೆಚ್ಚಲಿದ್ದು, ತಾ.ಪಂ. ಕ್ಷೇತ್ರಗಳ ಸಂಖ್ಯೆ ಕುಗ್ಗಲಿದೆ.

ಈಗ ಜಿಲ್ಲೆಯಲ್ಲಿ ಒಟ್ಟು 26 ಜಿ.ಪಂ. ಕ್ಷೇತ್ರಗಳು, 95 ತಾ.ಪಂ. ಕ್ಷೇತ್ರಗಳಿವೆ. ಇನ್ನು ಮುಂದೆ 30 ಜಿ.ಪಂ. ಕ್ಷೇತ್ರಗಳು ಮತ್ತು 86 ತಾ.ಪಂ. ಕ್ಷೇತ್ರಗಳಾಗಲಿವೆ.

ಹಿಂದೆ ಜಿ.ಪಂ., ತಾ.ಪಂ. ಚುನಾವಣೆ ಆಗುವಾಗ ತಾಲೂಕು ಪುನರ್ವಿಂಗಡಣೆಗೆ ಪೂರ್ವ ಸ್ಥಿತಿ ಇತ್ತು. ಎರಡು ವರ್ಷಗಳ ಹಿಂದೆ ತಾಲೂಕು ಪುನರ್ವಿಂಗಡಣೆಯಾದ ಬಳಿಕ ಉಡುಪಿ ತಾಲೂಕು ಉಡುಪಿ, ಬ್ರಹ್ಮಾವರ, ಕಾಪು ತಾಲೂಕಾದರೆ, ಕುಂದಾಪುರ ತಾಲೂಕು ಕುಂದಾಪುರ, ಬೈಂದೂರು ತಾಲೂಕುಗಳಾದವು, ಕಾರ್ಕಳ ತಾಲೂಕು ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಾಗಿವೆ.

ತಾಲೂಕುವಾರು ಕ್ಷೇತ್ರಗಳು
ಈಗ ವಿವಿಧ ತಾಲೂಕುಗಳಲ್ಲಿ ಇರುವ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳು: ಉಡುಪಿ ತಾಲೂಕು 3- 13, ಬ್ರಹ್ಮಾವರ ತಾಲೂಕು 4-16, ಕಾಪು ತಾಲೂಕು 4-12, ಕುಂದಾಪುರ ತಾಲೂಕು 7- 23, ಬೈಂದೂರು ತಾಲೂಕು 3- 10, ಕಾರ್ಕಳ ತಾಲೂಕು 4-15, ಹೆಬ್ರಿ ತಾಲೂಕು 1- 6.

ಇನ್ನು ಮುಂದೆ ವಿವಿಧ ತಾಲೂಕುಗಳನ್ನು ಹೊಂದಲಿರುವ ಜಿಲ್ಲಾ ಪಂಚಾಯ ತ್‌ ಮತ್ತು ತಾ.ಪಂ. ಕ್ಷೇತ್ರಗಳು: ಉಡುಪಿ ತಾಲೂಕು 4- 11, ಬ್ರಹ್ಮಾವರ ತಾಲೂಕು 5-13, ಕಾಪು ತಾಲೂಕು 4-10, ಕುಂದಾಪುರ ತಾಲೂಕು 7- 19, ಬೈಂದೂರು ತಾಲೂಕು 3- 9, ಕಾರ್ಕಳ ತಾಲೂಕು 5-13, ಹೆಬ್ರಿ ತಾಲೂಕು 2- 11.

ಜನಸಂಖ್ಯೆಗೆ ಅನ್ವಯ ಕ್ಷೇತ್ರಗಳು
ಈಗಾಗಲೇ ನಡೆದ ಗ್ರಾ.ಪಂ. ಚುನಾವಣೆಯಲ್ಲಿ 400 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರಚಿಸಲಾಗಿತ್ತು. ಈಗ ಜಿ.ಪಂ. ಕ್ಷೇತ್ರವನ್ನು ಪ್ರತಿ 35,000 ಜನಸಂಖ್ಯೆಗೆ ಅನುಗುಣವಾಗಿ ರಚಿಸಲು ಆಯೋಗ ಸೂಚನೆ ನೀಡಿದೆ. ತಾ.ಪಂ. ಕ್ಷೇತ್ರ ರಚನೆಯಲ್ಲಿ ಮಾತ್ರ ಎರಡು ರೀತಿಯ ಸೂತ್ರಗಳಿವೆ. ಒಂದು ತಾಲೂಕಿನಲ್ಲಿ (ತಾ.ಪಂ.) 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೆ ಅಂತಹ ತಾಲೂಕಿನಲ್ಲಿ 11 ಕ್ಷೇತ್ರಗಳನ್ನು ರಚಿಸಬೇಕು, 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ಅಂತಹ ಕಡೆ 12,500 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರೂಪಿಸಬೇಕು. ಉಡುಪಿ ತಾಲೂಕಿನಲ್ಲಿ 1.28 ಲಕ್ಷ, ಬೈಂದೂರಿನಲ್ಲಿ 1 ಲಕ್ಷ, ಕಾಪುವಿನಲ್ಲಿ 1.13 ಲಕ್ಷ, ಬ್ರಹ್ಮಾವರದಲ್ಲಿ 1.5 ಲಕ್ಷ, ಕುಂದಾಪುರದಲ್ಲಿ 2.3 ಲಕ್ಷ, ಕಾರ್ಕಳದಲ್ಲಿ 1.5 ಲಕ್ಷ, ಹೆಬ್ರಿಯಲ್ಲಿ 46,000 ಜನಸಂಖ್ಯೆ ಇದೆ.

ಹೀಗಾಗಿ ಹೆಬ್ರಿ ತಾಲೂಕಿನಲ್ಲಿ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಾರಣ 11 ತಾ.ಪಂ. ಕ್ಷೇತ್ರಗಳು ರಚನೆಯಾಗಲಿವೆ. ಉಳಿದ ಕಡೆ 12,500 ಜನಸಂಖ್ಯೆಗೆ ಒಂದು ಕ್ಷೇತ್ರ ರಚನೆಯಾಗಲಿದೆ. ಹೆಬ್ರಿಯಲ್ಲಿ 35,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಕಾರಣ ಎರಡು ಜಿ.ಪಂ. ಕ್ಷೇತ್ರಗಳು ಸಿಗಲಿವೆ. ಇಲ್ಲಿ ತಾಲೂಕುವಾರು ಜನಸಂಖ್ಯೆ ನಗರ ಪ್ರದೇಶವನ್ನು ಹೊರತುಪಡಿಸಿ ಗ್ರಾಮಾಂತರದ ಜನಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿ ಅತಿ ದೊಡ್ಡ ತಾಲೂಕಾಗಿ ಕುಂದಾಪುರ ಇರಲಿದೆ. ಕುಂದಾಪುರ, ಬೈಂದೂರು ತಾಲೂಕುಗಳಿಗೆ ಹಿಂದೆ ಇದ್ದಷ್ಟೇ ಜಿ.ಪಂ. ಕ್ಷೇತ್ರಗಳು ಸಿಗಲಿವೆ, ಆದರೆ ತಾ.ಪಂ. ಕ್ಷೇತ್ರಗಳು ಕಡಿಮೆಯಾಗಲಿವೆ. ಹೆಬ್ರಿಯಲ್ಲಿ ಮಾತ್ರ ಜಿ.ಪಂ. ಮತ್ತು ತಾ.ಪಂ. ಎರಡರ ಸಂಖ್ಯೆಯೂ ಹೆಚ್ಚಳವಾಗಿದೆ. ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದಲ್ಲಿ ತಲಾ ಒಂದು ಜಿ.ಪಂ. ಕ್ಷೇತ್ರ ಹೆಚ್ಚಿಗೆಯಾಗಲಿದ್ದು ತಾ.ಪಂ. ಕ್ಷೇತ್ರ ಕಡಿಮೆಯಾಗಲಿವೆ.

ಕ್ಷೇತ್ರ ಪುನರ್ವಿಂಗಡಣೆೆ
ತಾಲೂಕುಗಳು ಹೊಸದಾಗಿ ರಚನೆ ಯಾದಲ್ಲಿ ಹಿಂದಿದ್ದ ಜಿ.ಪಂ. ಕ್ಷೇತ್ರಗಳ ಗ್ರಾಮಗಳು ಎರಡು ತಾಲೂಕುಗಳಲ್ಲಿ ಹಂಚಿಹೋಗಿವೆ. ಹೀಗಾಗಿ ಆಯಾ ತಾಲೂಕುಗಳ ಗ್ರಾಮಗಳನ್ನು ಮಾತ್ರ ಆಯಾ ತಾಲೂಕುಗಳ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳಲ್ಲಿ ಹಂಚಿಹಾಕಲಿದ್ದಾರೆ. ಬೈಂದೂರಿನಲ್ಲಿ ಪ.ಪಂ. ರಚನೆಯಾದ ಕಾರಣ ಅಲ್ಲಿಯೂ ಕ್ಷೇತ್ರ ರಚನೆಯಲ್ಲಿ ಗ್ರಾಮಗಳು ವ್ಯತ್ಯಾಸವಾಗಲಿವೆೆ.

ಟಾಪ್ ನ್ಯೂಸ್

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.