ಚಿಕಿತ್ಸೆಗೆ ಪರದಾಡುವ ಗಡಿಯಂಚಿನ ಗ್ರಾಮಸ್ಥರು

ಪಾಳುಬಿದ್ದ ಆರೋಗ್ಯ ಸಹಾಯಕರ ಕೊಠಡಿ , ವಾಹನ ಸೌಕರ್ಯವಿಲ್ಲದ ಊರಲ್ಲಿ ರೋಗಿಗಳಿಗೆ ಸಂಕಷ್ಟ

Team Udayavani, Feb 27, 2021, 2:05 PM IST

ಚಿಕಿತ್ಸೆಗೆ ಪರದಾಡುವ ಗಡಿಯಂಚಿನ ಗ್ರಾಮಸ್ಥರು

ಕಿಕ್ಕೇರಿ: ವಾಹನ ಸೌಕರ್ಯ ಕಾಣದ ಹೋಬಳಿಯ ಗಡಿಯಂಚಿನ ಗ್ರಾಮವಾದ ಊಗಿನಹಳ್ಳಿ ಗ್ರಾಮದ ಹೃದಯ ಭಾಗದ ಆರೋಗ್ಯ ಸಹಾಯಕರ(ಎಎನ್‌ಎಂ) ಕೊಠಡಿ ಪಾಳುಬಿದ್ದಿದ್ದು ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ವಾಹನ ಸೌಕರ್ಯವಿಲ್ಲದ ಗ್ರಾಮಕ್ಕೆ ತುರ್ತು ಎಎನ್‌ಎಂ ಕೊಠಡಿ ಅವಶ್ಯಕತೆ ಇದೆ.

ಹೆಚ್ಚು ಉಪಯುಕ್ತವಾಗಿತ್ತು: 30ವರ್ಷಗಳ ಹಿಂದೆ ಸಾರಿಗೆ ಸಂಚಾರವಿಲ್ಲದ ಈ ಗ್ರಾಮ ಹಾಗೂಸುತ್ತಮುತ್ತಲ ಜನತೆಗೆ ಅನುಕೂಲವಾಗಲು ಎಎನ್‌ಎಂ ಕ್ವಾಟ್ರಸ್‌ ನಿರ್ಮಿಸಲಾಗಿದೆ. ಉದ್ಧೇಶಿತಆಲೋಚನೆಯಿಂದ ನಿರ್ಮಿತವಾದ ಆರೋಗ್ಯ ಶುಶ್ರೂಷಕರ ಕೊಠಡಿಯಿಂದ ಹಳ್ಳಿಗಾಡಿನ ಜನತೆಗೆ ಹೆಚ್ಚು ಉಪಯುಕ್ತವಾಗಿತ್ತು. ಸಣ್ಣಪುಟ್ಟ ಕಾಯಿಲೆಗಳಿಗಾಗಿ ಗರ್ಭಿಣಿ, ಬಾಣಂತಿಯರಿಗೆ, ವಯೋವೃದ್ಧರಿಗೆ ಬಹಳ ಅನುಕೂಲಕರವಾಗಿತ್ತು. ದೂರದ ಹೋಬಳಿ ಕೇಂದ್ರಕ್ಕೆ ತೆರಳಲು ಕಷ್ಟಕರವಾಗಿದ್ದ ಊಗಿನಹಳ್ಳಿ ಕೊಪ್ಪಲು, ಗೋವಿಂದನಹಳ್ಳಿ, ಉದ್ದಿನಮಲ್ಲನ ಹೊಸೂರು ಸೇರಿದಂತೆ ಹಲವು ಹಳ್ಳಿಗಾಡಿನ ಜನತೆಈ ಎಎನ್‌ಎಂ ಕೇಂದ್ರಕ್ಕೆ ಆಗಮಿಸಿ ಚಿಕಿತ್ಸೆ ಪಡೆದು ಮರಳುತ್ತಿದ್ದರು. ಇದರಿಂದಾಗಿ ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತಿತ್ತು.

ಸಮಸ್ಯೆ: ಗ್ರಾಮದಲ್ಲಿ ಸುಮಾರು 800ಜನಸಂಖ್ಯೆ ಇದ್ದು ಪಾಳುಬಿದ್ದ ಆರೋಗ್ಯ ಕೇಂದ್ರವಾಗಿದ್ದ ಕೊಠಡಿ ಇಲ್ಲದೇ ಆಶಾ ಕಾರ್ಯಕರ್ತೆಯರನ್ನು ಅವಲಂಬಿಸುವಂತಾಗಿದೆ. ಒಂದೆಡೆ ವಾಹನ ಸೌಲಭ್ಯಗಳಿಲ್ಲದೆ ಖಾಸಗಿ ವಾಹನ ಆಶ್ರಯಿಸಲು ಹೇಳಿದಷ್ಟು ಹಣ ನೀಡಿ ಹೋಬಳಿ ಕೇಂದ್ರ, ದೂರದ ತಾಲೂಕು ಕೇಂದ್ರಗಳಿಗೆ ತೆರಳಲು ಬಲು ಕಷ್ಟಕರವಾಗಿದೆ. ಅಲ್ಲದೇ, ಇಲ್ಲಿ ರೈತಾಪಿ ಸಮುದಾಯದವೇ ಹೆಚ್ಚಿದ್ದು ನಿತ್ಯ ಸಮಸ್ಯೆ ಎದುರಾಗುತ್ತಿದೆ.

ಬಾಗಿಲು, ಕಿಟಕಿಗಳು ಕಳ್ಳತನ :

ಗ್ರಾಮದ ಹೃದಯಭಾಗದ ಈ ಕೊಠಡಿ ಸುತ್ತ ಅನೈರ್ಮಲ್ಯತೆ ಆವರಿಸಿ ಹೊಲಸು ನಾರುವಂತಿದೆ. ದನದ ಕೊಟ್ಟಿಗೆಯಂತಾಗಿ ಕೊಠಡಿಯ ಚಾವಣಿ ಮೇಲೆ ಗಿಡಗಂಟಿ ಬೆಳೆದು ನಿಂತಿವೆ. ಕೊಠಡಿ ಬಾಗಿಲು, ಕಿಟಕಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಹತ್ತಿರದಲ್ಲಿ ನೀರಿನ ತೊಂಬೆ ಇದ್ದು ತ್ಯಾಜ್ಯ ನೀರು ಸುತ್ತಲ ಪರಿಸರವನ್ನು ಆವರಿಸಿ ಮತ್ತಷ್ಟು ಹೊಲಸು ನಾರುತ್ತಿದೆ. ಸೊಳ್ಳೆಗಳ ಕಾಟ ಹಗಲಿನಲ್ಲಿಯೇ ಹೆಚ್ಚಿದೆ. ಕೊರೊನಾದಲ್ಲಿ ಮಕ್ಕಳು ಶಾಲೆಗೆ ಬಾರದಿರುವುದೊಂದೇ ಪುಣ್ಯ. ಶಾಲಾ ಮಕ್ಕಳು ಇತ್ತ ಓಡಾಡುವ ಮುನ್ನ ಹಾವು ಚೇಳುಗಳಂತಹ ವಿಷಕಾರಿ ಜಂತುಗಳಿಂದ ರಕ್ಷಣೆಯಾಗಬೇಕಿದೆ.

ನಮ್ಮೂರ ಆರೋಗ್ಯ ಕೇಂದ್ರ ಬಿಂದುವಾಗಿದ್ದ ಈ ಕೇಂದ್ರ ಮೊದಲಿನಂತಾಗಬೇಕಿದೆ. ಗ್ರಾಮದಲ್ಲಿನ ಆರೋಗ್ಯ ಸಮಸ್ಯೆಗೆ ಈ ಕೇಂದ್ರ ಬಹಳ ಅವಶ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಗುರುಮೂರ್ತಿ, ಸಾಮಾಜಿಕ ಸೇವಾಕರ್ತ

ಗ್ರಾಮದಲ್ಲಿನ ಎಎನ್‌ಎಂ ಕೊಠಡಿ ಶಿಥಿಲಾವಸ್ಥೆ ತಲುಪಿದೆ. ಕೊಠಡಿಯ ಸಾಧಕ ಬಾಧಕಗಳನ್ನು ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಡಾ.ರಜಿನಿ, ವೈದ್ಯಾಧಿಕಾರಿ, ಆನೆಗೊಳ

ತ್ರಿವೇಣಿ

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.