ಜಲದುರ್ಗ ನೀರಾವರಿ ಯೋಜನೆಗೆ ಮರುಜೀವ

Team Udayavani, Mar 4, 2021, 7:01 PM IST

Jaladurga

ಲಿಂಗಸುಗೂರು: ಸಂಪೂರ್ಣ ಸ್ಥಗಿತಗೊಂಡಿದ್ದ ತಾಲೂಕಿನ ಜಲದುರ್ಗ ಏತ ನೀರಾವರಿ ಯೋಜನೆಯ ಪುನಶ್ಚೇತನಕ್ಕಾಗಿ 3.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗ ಯೋಜನೆಗೆ ಮರುಜೀವ ಬಂದಿದೆ. ತಾಲೂಕಿನ ಜಲದುರ್ಗ ಗ್ರಾಮದ ಬಳಿಯ ಕೃಷ್ಣಾ ನದಿಗೆ ತಡೆಗೋಡೆ ನಿರ್ಮಿಸಿ ಪಂಪ್‌ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯನ್ನು 1980ರಲ್ಲಿ ಆರಂಭಿಸಿ 1984ರಿಂದ ನಾಲ್ಕು ವರ್ಷಗಳ ಕಾಲ ರೈತರ ಭೂಮಿಗೆ ನೀರುಣಿಸಲಾಗಿತ್ತು. ಎಡದಂಡೆ ನಾಲೆ 2.31 ಕಿ.ಮೀ. ಉದ್ದ ಹಾಗೂ ಬಲದಂಡೆ ನಾಲೆ 0.93 ಕಿ.ಮೀ. ಉದ್ದವಿದೆ. ಈ ಯೋಜನೆಯಿಂದ ಒಟ್ಟು 182 ಹೆಕ್ಟೇರ್‌ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಸುವ ಈ ಯೋಜನೆಯಾಗಿದೆ.

ಮತ್ತೆ ಚಾಲನೆ: 1988ರವರಿಗೆ ಯೋಜನೆಯಿಂದ ರೈತರ ಜಮೀನಿಗೆ ನೀರು ಹರಿಸಲಾಗಿತ್ತು. ವಿವಿಧ ಕಾರಣಗಳನ್ನು ಒಡ್ಡಿ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಆದರೆ, 2011ರಲ್ಲಿ ಈ ಯೋಜನೆಗೆ ಮರುಚಾಲನೆ ನೀಡಿ 71.68 ಲಕ್ಷ ರೂ. ಬಿಡುಗಡೆಗೊಳಿಸಿ ಮೋಟಾರು ಪಂಪ್‌ಗ್ಳ ದುರಸ್ತಿ, ಯಂತ್ರೋಪಕರಣಗಳ ಖರೀದಿ, ವಿದ್ಯುತ್‌ ಸಂಪರ್ಕ, ಟಿಸಿ ಅಳವಡಿಕೆ ಹಾಗೂ ಇನ್ನಿತರ ಸಿವಿಲ್‌ ಕೆಲಸಗಳನ್ನು ಮಾಡಲಾಗಿತ್ತು. ಇಷ್ಟು ಹಣ ನೀರಿನಂತೆ ಖರ್ಚು ಮಾಡಿದರೂ ಬಲದಂಡೆ ಹಾಗೂ ಎಡದಂಡೆ ನಾಲೆಗಳನ್ನು ದುರಸ್ತಿ ಮಾಡದೇ ತರಾತುರಿಯಲ್ಲಿ 2012 ಜನವರಿ 27ರಂದು ಆಗಿನ ಶಾಸಕ ಮಾನಪ್ಪ ವಜ್ಜಲ ಯೋಜನೆಯನ್ನು ಮರು ಉದ್ಘಾಟಿಸಿದರು. ಉದ್ಘಾಟನೆ ದಿನದಂದು ಮಾತ್ರ ನೀರು ಹರಿಸಿದ್ದು ಬಿಟ್ಟರೆ ಇಲ್ಲಿವರೆಗೂ ನಾಲೆಗೆ ನೀರು ಹರಿಸಿಲ್ಲ ಎಂಬದೇ ರ್ದುದೈವ ಸಂಗತಿ.

ಪ್ರವಾಹಕ್ಕೆ ತುತ್ತು: ಜಲದುರ್ಗ ನೀರಾವರಿ ಯೋಜನೆಗಾಗಿ ಕೃಷ್ಣಾ ನದಿಯಲ್ಲಿ ತಡೆಗೋಡೆ ಹಾಗೂ ಪೈಪ್‌ಲೈನ್‌ ಮಾಡಲಾಗಿತ್ತು. ಆದರೆ ಪ್ರವಾಹ ಬಂದ ಸಂದರ್ಭದಲ್ಲಿ ತಡೆಗೋಡೆ ಮತ್ತು ಪೈಪ್‌ ಲೈನ್‌ ಕೊಚ್ಚಿಹೋಗಿತ್ತು. ಇದುಲ್ಲದೆ ಯೋಜನೆ ಸ್ಥಗಿತಗೊಂಡಿದ್ದರಿಂದ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಖರೀದಿಸಿದ ಪಂಪ್‌ಗ್ಳು ಧೂಳು ತಿನ್ನುತ್ತಿವೆ.

3.50 ಕೋಟಿ ಬಿಡುಗಡೆ: ಈ ಯೋಜನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ 3.50 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಈ ಅನುದಾನದಲ್ಲಿ
ಹೊಸದಾಗಿ ಜಾಕ್‌ವೆಲ್‌, ಎತ್ತರದ ತಡೆಗೋಡೆ ನಿರ್ಮಾಣ, ಪಂಪ್‌ಗ್ಳ ಖರೀದಿಗೆ ಅಂದಾಜು ವೆಚ್ಚ ಪತ್ರಿಕೆ ತಯಾರಿಸಲಾಗುತ್ತಿದೆ. ಈ ಯೋಜನೆಯಿಂದ ರೈತರಿಗೆ
ಯಾವುದೇ ಅನುಕೂಲವಾಗಿಲ್ಲ. ಇದರಿಂದ ಈ ಯೋಜನೆಗೆ ಮರುಜೀವ ಬಂದಿದೆ. ಅನುದಾನ ಬಿಡುಗಡೆ ಯಾಗಿದ್ದರಿಂದ ಪುನಶ್ಚೇತನಗೊಳಿಸಿ ಆದಷ್ಟು ಬೇಗ ರೈತರ ಜಮೀನಿಗೆ ನೀರುಣಿಸುವುದು ಅಗತ್ಯವಾಗಿದೆ.

ಜಲದುರ್ಗ ಯೋಜನೆಯನ್ನು ಪುನಶ್ಚೇತನಕ್ಕಾಗಿ 3.50 ಕೋಟಿ ರೂಪಾಯಿ ಬಿಡುಡೆಯಾಗಿದೆ. ಇದಕ್ಕೆ ಎಸ್ಟೀಮೇಟ್‌ ಮಾಡಿ ಟೆಂಡರ್‌ ಕರೆದು ಕಾಮಗಾರಿ ಆರಂಭಗೊಳಿಸಲಾಗುವುದು.
ಪ್ರಲ್ಹಾದ್‌ ಬಿಜ್ಜೂರು, ಜೆಇ ಸಣ್ಣ ನೀರಾವರಿ ಇಲಾಖೆ

ಶಿವರಾಜ ಕೆಂಭಾವಿ

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.