ಬಿಸಿಲಿನ ಪ್ರಖರತೆಗೆ ಭೂಮಿ ಧಗಧಗ

ಬಯಲು ಸೀಮೆಯಲ್ಲಿ ತಾಳಲಾರದ ತಾಪ

Team Udayavani, Mar 17, 2021, 4:17 PM IST

ಬಿಸಿಲಿನ ಪ್ರಖರತೆಗೆ ಭೂಮಿ ಧಗಧಗ

ಗಜೇಂದ್ರಗಡ: ಏನ್‌ ಬಿಸಿಲಿನ ಕೆಂಡಾ ಕಾದಂಗಾಗೈತಿ. ಶಿವ, ಶಿವಾ ಅನ್ನೋಷ್ಟರಲ್ಲಿಸೂರ್ಯದೇವ ತನ್ನ ಪ್ರಖರತೆ ಬೀರಾಕತ್ಯಾನ.ಈಗ ಹಿಂದಾದ್ರ ಮುಂದ ಹ್ಯಾಂಗ್‌ರ್ರೀ.. ಇದು ಸೂರ್ಯದೇವನು ಆಕಾಶದಲ್ಲಿ ಪ್ರತ್ಯಕ್ಷ ವಾಗುತ್ತಿದ್ದಂತೆ ಬಯಲು ಸೀಮೆ ನಾಡಿನಜನತೆಯ ಬಾಯಲ್ಲಿನ ಪಿಸು ಮಾತುಗಳಿವು!

ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದಸೂರ್ಯದೇವನ ನರ್ತನ ಶುರುವಾಗಿದ್ದು,ಇದರಿಂದ ಜನತೆ ತತ್ತರಿಸಿ ಹೋಗಿದ್ದಾರೆ. ರಣಬಿಸಿಲಿನ ಪ್ರಖರತೆಗೆ ಭೂಮಿ ಬಿಸಿ ಉಷ್ಣವನ್ನುಹೊರ ಸೂಸುತ್ತಿದೆ. ಸೂರ್ಯನ ಹೊಡೆತದಿಂದ ತಪ್ಪಿಸಿಕೊಳ್ಳಲು ಎಳನೀರು, ಕಲ್ಲಂಗಡಿ,ಕಬ್ಬಿನಹಾಲು, ಹಣ್ಣಿನ ರಸ, ಹಣ್ಣುಗಳಂತಹತಂಪಾದ ಪಾನೀಯಗಳಿಗೆ ಮಾರು ಹೋಗಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಜನ,ಜಾನುವಾರುಗಳು ನೀರು-ನೆರಳಿಗಾಗಿ ಪರಿತಪಿಸುವಂತಾಗಿದೆ. ಬೆಳಿಗ್ಗೆ 9 ಗಂಟೆಯ ಬಿಸಿಲು ಸಹ ಅಸಹನೀಯವಾಗಿದೆ. ಈಗಾಗಲೇಪಟ್ಟಣದಲ್ಲಿ ಬಿಸಿಲಿನ ಉಷ್ಣಾಂಶ 35 ಡಿಗ್ರಿಗೆ ತಲುಪಿದ್ದು, ಸುಡು ಬಿಸಿಲಿನಿಂದ ಜನರು ರಕ್ಷಿಸಿಕೊಳ್ಳಲು ಹರಸಾಹಸ ಪಡು ವಂತಾಗಿದೆ. ಬೇಸಿಗೆ ಆರಂಭದಲ್ಲೆ ಬಿಸಿಲಿನ ತಾಪ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಬಿಸಿಲ ಕಾವು ಹೆಚ್ಚಾಗುತ್ತಿರುವುದು ಜನರನ್ನು ಚಿಂತೆಗೀಡು ಮಾಡಿದೆ. ಮುಂಬರುವ ಏಪ್ರಿಲ್‌ ತಿಂಗಳಲ್ಲಿಮತ್ತಷ್ಟು ಬಿಸಿಲಿನ ತಾಪ ಹೆಚ್ಚಾಗಬಹುದು ಎನ್ನುವಹವಾಮಾನ ಇಲಾಖೆ ಮುನ್ಸೂಚನೆಯಿಂದಾಗಿನಾಗರಿಕರಲ್ಲಿ ಆತಂಕ ಮನೆ ಮಾಡಿದೆ.

ಜಾನುವಾರುಗಳು ತತ್ತರ: ಬಿಸಿಲಿನ ತೀವ್ರತೆಗೆ ಜಾನುವಾರುಗಳು ತತ್ತರಿಸಿದ್ದು, ನೀರಿಗಾಗಿ ಪರಿತಪಿಸುವ ದೃಶ್ಯ ಅಲ್ಲಲ್ಲ ಕಂಡು ಬರುತ್ತಿದೆ. ಜಾನುವಾರು ಕಷ್ಟ ನೋಡಿದ ಕೆಲವುಸಾರ್ವಜನಿಕರು ಮನೆಯ ಹೊರಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ನೆರಳಿಗಾಗಿ ಹುಡುಕಾಟ: ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶಗಳಾದ ದುರ್ಗಾ ವೃತ್ತ,ಸರಾಫ್‌ ಬಜಾರ್‌, ಜೋಡು ರಸ್ತೆ, ಬಸವೇಶ್ವರವೃತ್ತ, ಕಾಲಕಾಲೇಶ್ವರ ವೃತ್ತದಿಂದ ಬಸ್‌ ನಿಲ್ದಾಣವರೆಗೆ ನೆರಳೆ ಇಲ್ಲ. ಹೀಗಾಗಿ ಈ ರಸ್ತೆಗಳಲ್ಲಿಸಂಚರಿಸುವ ಪ್ರಯಾಣಿಕರಿಗೆ ಬಿಸಿಲಿನ ಅನುಭವಸಾಮಾನ್ಯವಾಗಿದೆ. ಇನ್ನೊಂದೆಡೆ ವ್ಯಾಪಾರಸ್ಥರುಬಿಸಿಲಿನ ಧಗೆಗೆ ಬೆಂಡಾಗಿ ಯಾವಾಗ ಬಿಸಿಲುಕಡಿಮೆ ಯಾಗುತ್ತೋ ಎಂದು ಗುನಗುಡುತ್ತಾ ಅನಿವಾರ್ಯ ಸ್ಥಿತಿಯಲ್ಲಿ ತಮ್ಮ ಕಾರ್ಯದಲ್ಲಿತೊಡಗಿದ್ದಾರೆ.

ಜ್ಯೂಸ್‌, ಹಣ್ಣಿಗೆ ಡಿಮ್ಯಾಂಡ್‌: ಬಿಸಿಲಿನಭಾದೆಯಿಂದ ಪಾರಾಗಲು ಜನರು ಹಣ್ಣಿನ ಜ್ಯೂಸ್‌, ಮಜ್ಜಿಗೆ, ಐಸ್‌ಕ್ರೀಂ, ಹಣ್ಣು, ಎಳನೀರು,ಕಲ್ಲಂಗಡಿ, ಸೇವನೆಗೆ ಮೊರೆ ಹೋಗಿದ್ದಾರೆ. ಪರಿಣಾಮ ಪಟ್ಟಣದ ಬಸ್‌ ನಿಲ್ದಾಣ ರಸ್ತೆ, ರೋಣ ರಸ್ತೆ ಹಾಗೂ ನಗರ ರಸ್ತೆಗಳ ಉದ್ದಕ್ಕೂಕಲ್ಲಂಗಡಿ, ಕಬ್ಬಿನ ಹಾಲು, ಹಣ್ಣುಗಳ ಜ್ಯೂಸ್‌ಮಾರಾಟ ಮಾಡುವವರಿಗೆ ಡಿಮ್ಯಾಂಡ್‌ ಬಂದೊದಗಿದೆ.

ಕೋಟೆ ನಾಡಿಗೆ ಡಬಲ್‌ ಧಮಾಕಾ: ಐತಿಹಾಸಿಕ ನಗರಿ ಎಂದೇ ಖ್ಯಾತಿ ಪಡೆದ ಗಜೇಂದ್ರಗಡದ ಸುತ್ತಲು ಗುಡ್ಡ ಆವರಿಸಿದೆ. ಜೊತೆಗೆ ಪಟ್ಟಣಕ್ಕೆ ರಕ್ಷಾ ಕವಚದಂತಿರುವ ಗುಡ್ಡದಬಂಡೆ ಕಲ್ಲುಗಳು ಹಗಲೆಲ್ಲಾ ಬಿಸಿಲಿನ ತಾಪಕ್ಕೆಕಾಯ್ದು ರಾತ್ರಿ ಹೊತ್ತು ಹೊರ ಸೂಸುವ ಬಿಸಿ ಕಾವಿಗೆ ಹುಷ್‌ ಎನ್ನುವ ಸ್ಥಿತಿಯಿಂದಾಗಿ ಕೋಟೆ ನಾಡಿನ ಜನತೆ ಬಿಸಿಲಿನ ಡಬಲ್‌ ಧಮಾಕಾ ಅನುಭವಿಸುವಂತಾಗಿದೆ.

 

ಡಿ.ಜಿ ಮೋಮಿನ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.