ಆಡಂಬರದ ಕಾರ್ಯಕ್ರಮಗಳಿಗೆ ಕಡಿವಾಣ ಅನಿವಾರ್ಯ: ಚಂದ್ರಹಾಸ್‌ ಕೆ. ಶೆಟ್ಟಿ


Team Udayavani, Mar 17, 2021, 5:44 PM IST

ಆಡಂಬರದ ಕಾರ್ಯಕ್ರಮಗಳಿಗೆ ಕಡಿವಾಣ ಅನಿವಾರ್ಯ: ಚಂದ್ರಹಾಸ್‌ ಕೆ. ಶೆಟ್ಟಿ

ಮುಂಬಯಿ: ಆಡಂಬರದ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ ಶೈಕ್ಷಣಿಕ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನ ಹರಿಸಬೇಕು. ವಿದ್ಯೆಯಿಂದ ವಂಚಿತರಾದ ಸಮಾಜದ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ ಅವರಿಗೆ ಶಿಕ್ಷಣದ ವಿವಿಧ ಸೌಲಭ್ಯಗಳನ್ನು ನೀಡಿ ಅವರನ್ನು ಸಮಾಜದ ಉತ್ತಮ ನಾಗರಿಕನ್ನಾಗಿ ಸೃಷ್ಟಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಆ ಮೂಲಕ ನಾವೆಲ್ಲರೂ ಕಾರ್ಯಪ್ರವೃತ್ತರಾಗಿ ಸಂಘದ ಕಾರ್ಯಚಟುವಟಿಕೆಗಳನ್ನು ಸಮಾಜದ ಮನೆ ಮನೆಗೂ ಮುಟ್ಟಿಸುವ ಕೆಲಸವಾಗಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ  ತಿಳಿಸಿದರು.

ಮಾ. 15ರಂದು ಕಾಂದಿವಲಿ ಪೂರ್ವದ ಹೊಟೇಲ್‌ ಅವೆನ್ಯೂ ಸಭಾಂಗಣದಲ್ಲಿ ನಡೆದ ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಶಿಕ್ಷಣ ಕ್ಷೇತ್ರಗಳಿಗೆ ಕೊಡುಗೆಯಾದ ನಮ್ಮ ಸಂಸ್ಥೆ ಬೊರಿವಲಿ ಪಶ್ಚಿಮದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸುತ್ತಿದ್ದು, ಈ ಸಮಿತಿಗೆ ಹೆಮ್ಮೆಯ ವಿಷಯವಾಗಿದೆ. ಇದು ಪ್ರಸಕ್ತ ಮತ್ತು ಹಿಂದಿನ ಹಲವಾರು ವರ್ಷಗಳ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಕೊಡುಗೆಯಾಗಿದ್ದು, ಈ ಪ್ರಾದೇಶಿಕ ಸಮಿತಿಯನ್ನು ನಮ್ಮ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ತಿಳಿಸಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ರಜನಿ ಆರ್‌. ಶೆಟ್ಟಿ  ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟಗೀತೆಯೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಅವರು ಸಂಘದ ನೂತನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರನ್ನು ಗೌರವಿಸಿ ಅಭಿನಂದಿಸಿದರು. ಬಳಿಕ ಜರಗಿದ ಪದಗ್ರಹಣ ಕಾರ್ಯಕ್ರಮದಲ್ಲಿ  ನಿರ್ಗಮನ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಅವರು ನೂತನ ಕಾರ್ಯಾಧ್ಯಕ್ಷ ಎಂ. ಜಿ. ಶೆಟ್ಟಿ ಅವರನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭ ಹಾರೈಸಿದರು.

ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಗೊಂಡ ಶೈಲಜಾ ಅಮರ್‌ನಾಥ್‌ ಶೆಟ್ಟಿ ಅವರಿಗೆ ನಿರ್ಗಮನ ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಅಧಿಕಾರ ಹಸ್ತಾಂತರಿಸಿದರು. ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ಧೀರಜ್‌ ಶೆಟ್ಟಿ ಅವರಿಗೆ ನಿರ್ಗಮನ ಕಾರ್ಯಾಧ್ಯಕ್ಷ ಸಂಕೇಶ್‌ ಶೆಟ್ಟಿ ಅವರು ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿ ಶುಭ ಹಾರೈಸಿದರು. ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಗೊಂಡ ಶೈಲಜಾ ಅಮರ್‌ನಾಥ್‌ ಶೆಟ್ಟಿ ಮತ್ತು ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ಧೀರಜ್‌ ಶೆಟ್ಟಿ ಅವರು ಸಂದಭೋìಚಿತವಾಗಿ ಮಾತನಾಡಿ ಎಲ್ಲರ ಸಹಕಾರ ಬಯಸಿದರು.

ನಿರ್ಗಮನ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ , ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ , ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್‌ ಶೆಟ್ಟಿ ಅವರನ್ನು ಸಮಿತಿ ವತಿಯಿಂದ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮಾನಿಸಿ, ಗೌರವಿಸಿದರು.

ನಿರ್ಗಮನ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ  ಮಾತನಾಡಿ, ತನ್ನ ಕಾರ್ಯಾವಧಿಯಲ್ಲಿ  ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳನ್ನು ನೀಡುವ ಸಮಿತಿಯ ಯಶಸ್ಸಿಗೆ ಶ್ರಮಿಸಿದ ತನ್ನೆಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ಕಳೆದ ಮೂರು ವರ್ಷಗಳ ಸಮಿತಿಯ ಸಾಧನೆಗಳನ್ನು ನಿರ್ಗಮನ ಕಾರ್ಯದರ್ಶಿ ಪ್ರೇಮನಾಥ್‌ ಶೆಟ್ಟಿ ತಿಳಿಸಿದರು.

ಬಂಟರ ಸಂಘದ ವಿವಿಧ ಪದಾಧಿಕಾರಿಗಳನ್ನು ಹಾಗೂ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಆರ್‌. ಕೆ. ಶೆಟ್ಟಿ , ಕೋಶಾಧಿಕಾರಿ ಸಿಎ ಹರೀಶ್‌ ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ಡಿ. ಶೆಟ್ಟಿ, ಸ್ಥಳೀಯ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಕೊಂಡಾಡಿ ಪ್ರೇಮನಾಥ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ , ಸಲಹೆಗಾರರಾದ ವಿಜಯ ಆರ್‌. ಭಂಡಾರಿ, ಮನೋಹರ ಎನ್‌. ಶೆಟ್ಟಿ , ಪ್ರವೀಣ್‌ ಜೆ. ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ಸಲಹೆಗಾರರಾದ ಪ್ರಭಾಕರ ಬಿ. ಶೆಟ್ಟಿ , ನೂತನ ಜತೆ ಕೋಶಾಧಿಕಾರಿ ಅವಿನಾಶ್‌ ಶೆಟ್ಟಿ , ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ಜಯ ಶೆಟ್ಟಿ , ಕ್ರೀಡಾ ಸಮಿತಿಯ ಸಂಕೇಶ್‌ ಶೆಟ್ಟಿ , ಸಾಂಸ್ಕೃತಿಕ ಸಮಿತಿಯ ಸಹನಾ ಡಿ. ಶೆಟ್ಟಿ , ವೈದ್ಯಕೀಯ ಸಮಿತಿಯ ನಾಗರಾಜ ಎ. ಶೆಟ್ಟಿ , ಐಟಿ ಸಮಿತಿಯ ವರುಣ್‌ ಶೆಟ್ಟಿ , ವೈವಾಹಿಕ ಸಮಿತಿಯ ಪ್ರವೀಣ್‌ ಶೆಟ್ಟಿ  ಶಿಮಂತೂರು, ಇ ಎಂಪ್ಲಾಯಿಮೆಂಟ್‌ ಸಮಿತಿಯ ಸವಿತಾ ಶೆಟ್ಟಿ , ಮಹಿಳಾ ವಿಭಾಗದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯೆಯರಾದ ಉಪಕಾರ್ಯಾಧ್ಯಕ್ಷೆ ಸುನೀತಾ ನಿತ್ಯಾನಂದ ಹೆಗ್ಡೆ , ಕಾರ್ಯದರ್ಶಿ ರೇಖಾ ಯೋಗೇಶ್‌ ಶೆಟ್ಟಿ , ಜತೆ ಕಾರ್ಯದರ್ಶಿ ಮಹೇಶ್‌ ಶೆಟ್ಟಿ , ಕೋಶಾಧಿಕಾರಿ ಯೋಗಿನಿ ಎಸ್‌. ಶೆಟ್ಟಿ , ಜತೆ ಕೋಶಾಧಿಕಾರಿ ಶುಭಾಂಗಿ ಶೇಖರ್‌ ಶೆಟ್ಟಿ  ಅವರು ಅತಿಥಿ-ಗಣ್ಯರು, ಸಮ್ಮಾನಿತರನ್ನು ಪರಿಚಯಿಸಿದರು. ಶಿಮಂತೂರು ಪ್ರವೀಣ್‌ ಶೆಟ್ಟಿ , ಪ್ರಾದೇಶಿಕ ಸಮಿತಿಯ ಜತೆ ಕಾರ್ಯದರ್ಶಿ

ರಘುನಾಥ್‌ ಎನ್‌. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಅಶೋಕ್‌ ವಿ. ಶೆಟ್ಟಿ ವಂದಿಸಿದರು.

ಐಕಳ ಹರೀಶ್‌ ಶೆಟ್ಟಿ ಅವರ ಪ್ರೇರಣೆಯಿಂದ ಹಲವಾರು ಹುದ್ದೆಗಳನ್ನು ಅಲಂಕರಿಸಿದ ನನಗೆ ಈ ಬಾರಿ ಮೂರು ಪ್ರಾದೇಶಿಕ ಸಮಿತಿಗಳ ಸಮನ್ವಯಕನಾಗಿ ಜವಾಬ್ದಾರಿ ದೊರೆತಿದೆ. ಓರ್ವ ಅನುಭವಿ ಕಾರ್ಯಾಧ್ಯಕ್ಷರಾದ ಎಂ. ಜಿ. ಶೆಟ್ಟಿ ಅವರ ಸೇವೆ ಈ ಪ್ರಾದೇಶಿಕ ಸಮಿತಿಯನ್ನು ಇನ್ನಷ್ಟು ಸದೃಢಗೊಳಿಸಲಿದೆ. ಅವರ ಕಂಕಣ ಭಾಗ್ಯ ಯೋಜನೆ ಯಶಸ್ವಿಯಾಗಲಿ. ಅದಕ್ಕಾಗಿ ನಾವೆಲ್ಲರೂ ಸಹಕರಿಸೋಣ. ಶಶಿಧರ ಶೆಟ್ಟಿ ಇನ್ನಂಜೆ, ಸಮನ್ವಯಕ, ಬಂಟರ ಸಂಘ ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳು

ಬಂಟರು ಸದಾ ಪರಿಶ್ರಮ ಜೀವಿಗಳು. ಹಾಗಾಗಿ ಎಲ್ಲ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಹಿರಿಯರು ಕಟ್ಟಿದ ಈ ಸಂಸ್ಥೆಯನ್ನು ನಾವು ಸಾಮಾಜಿಕವಾಗಿ, ಸಾಂಸ್ಕೃತಿಕ, ಶೈಕ್ಷಣಿಕ,ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಕಂಕಣ ಭಾಗ್ಯದಂತಹಸಮಾಜದ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ನಾವೆಲ್ಲರೂಕೈಜೋಡಿಸಬೇಕು. ಬೊರಿವಲಿಯ ನೂತನ ಶಿಕ್ಷಣಯೋಜನೆ ಚಂದ್ರಹಾಸ ಶೆಟ್ಟಿ ಅವರ ಕಾರ್ಯಾವಧಿಯಲ್ಲಿ ಪೂರ್ಣಗೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ. –ಮುಂಡಪ್ಪ ಎಸ್‌. ಪಯ್ಯಡೆ ಜತೆ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ

 

ಚಿತ್ರ-ವರದಿ: ರಮೇಶ್‌ ಉದ್ಯಾವರ

 

ಟಾಪ್ ನ್ಯೂಸ್

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.