ತಮಿಳಿಗೆ ಹಾರಿದ ಕೆಜಿಎಫ್ ಗರುಡ
Team Udayavani, Mar 25, 2021, 2:43 PM IST
ಬೆಂಗಳೂರು : ಕನ್ನಡ ಸಿನಿಮಾ ರಂಗದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ಸಿನಿಮಾ ಯಶ್ ಅಭಿನಯದ ಕೆಜಿಎಫ್ ಚಿತ್ರ. ಈ ಸಿನಿಮಾದಲ್ಲಿ ಗರುಡ ಪಾತ್ರಧಾರಿಯಾಗಿ ಮಿಂಚಿದ್ದ ರಾಮ್ ಇದೀಗ ತಮಿಳು ಸಿನಿಮಾ ರಂಗಕ್ಕೆ ಹಾರಿದ್ದಾರೆ. ತಮಿಳಿನಲ್ಲಿ ಸ್ಟಾರ್ ಹೀರೋ ನಟಿಸುತ್ತಿರುವ ಒಂದು ಸಿನಿಮಾದಲ್ಲಿ ರಾಮ್ ಬಣ್ಣ ಹಚ್ಚಿದ್ದಾರೆ.
ಹೌದು ಕಾಲಿವುಡ್ ನ ‘ಸುಲ್ತಾನ’ ಸಿನಿಮಾದಲ್ಲಿ ಗರುಡ ಖ್ಯಾತಿಯ ರಾಮ್ ನಟಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಅದರಲ್ಲೂ ಗರುಡ ಕಾಣಿಸಿಕೊಂಡಿದ್ದಾರೆ. ಕಾರ್ತಿ ನಾಯಕನಾಗಿ ನಟಿಸಿರುವ ‘ಸುಲ್ತಾನ’ ಸಿನಿಮಾದಲ್ಲಿ ರಾಮ್ ಖಳ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷ ಏನಂದ್ರೆ ಕೆಜಿಎಫ್ ನಂತ್ರ ರಾಮ್ ನಟನೆಯ ಮೊದಲ ಸಿನಿಮಾ ಇದಾಗಿದೆ.
ಈ ಚಿತ್ರದ ವಿಶೇಷ ಏನಂದ್ರೆ ಸುಲ್ತಾನದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರಶ್ಮಿಕಾಗೂ ಕೂಡ ತಮಿಳಿನಲ್ಲಿ ಇದೇ ಮೊದಲ ಸಿನಿಮಾ.