“ಆರ್ಸಿಬಿ ಜಯಕ್ಕೆ ಮ್ಯಾಕ್ಸ್ವೆಲ್ ಫಾರ್ಮ್ ಅಗತ್ಯ’
Team Udayavani, Apr 7, 2021, 6:50 AM IST
ಮುಂಬಯಿ: ಆರ್ಸಿಬಿ ಮೊದಲ ಸಲ ಐಪಿಎಲ್ ಚಾಂಪಿಯನ್ ಆಗಿ ಮೂಡಿಬರಬೇಕಾದರೆ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರ ಫಾರ್ಮ್ ನಿರ್ಣಾಯಕ ಎಂಬುದಾಗಿ ಇದೇ ತಂಡದ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಹೇಳಿದ್ದಾರೆ.
“ಆಲ್ರೌಂಡರ್ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯ ತಂಡದ ಅಪ್ಪಟ ಮ್ಯಾಚ್ ವಿನ್ನರ್. ಆದರೆ ಕಳೆದ ಐದು ವರ್ಷಗಳಿಂದ ಐಪಿಎಲ್ ಆಡುತ್ತಿರುವ ಅವರು ಇನ್ನೂ ಸ್ಫೋಟಕ ಬ್ಯಾಟಿಂಗ್ ಮಾಡಿಯೇ ಇಲ್ಲ.
2014ರ ಐಪಿಎಲ್ನಲ್ಲಿ ಪಂಜಾಬ್ ಪರ ತೋರಿದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದಿಂದ ತಂಡ ಫೈನಲ್ಗೇರಿತ್ತು. ಇದೀಗ ಆರ್ಸಿಬಿ ತಂಡದಲ್ಲಿರುವ ಮ್ಯಾಕ್ಸ್ವೆಲ್ ಮತ್ತೆ ಸ್ಫೋಟಕ ಬ್ಯಾಟಿಂಗ್ ಫಾರ್ಮ್ಗೆ ಮರಳಬೇಕಿದೆ.
ಆಗಷ್ಟೇ ಆರ್ಸಿಬಿ ಕಪ್ ಗೆಲ್ಲಲಿದೆ’ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.