ಶತಕೋಟಿ ಶ್ರೀಮಂತರ ಪಟ್ಟಿ :ಭಾರತಕ್ಕೆ 3ನೇ ಸ್ಥಾನ ; ಮುಕೇಶ್ ಏಷ್ಯಾದ ಅತೀ ಸಿರಿವಂತ
Team Udayavani, Apr 8, 2021, 7:20 AM IST
ಶತಕೋಟಿಗೆ ಬಾಳುವ ಅತೀ ದೊಡ್ಡ ಶ್ರೀಮಂತರು ಹೆಚ್ಚಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ ದೊರೆತಿದೆ. ಅಷ್ಟೇ ಅಲ್ಲ ಚೀನದ ಉದ್ಯಮಿ ಜಾಕ್ ಮಾ ಅವರನ್ನು ಹಿಂದಿಕ್ಕಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು “ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ’ ಎಂಬ ಪಟ್ಟ ಗಳಿಸಿದ್ದಾರೆ.
ಜಾಕ್ರನ್ನು ಹಿಂದಿಕ್ಕಿದ ಮುಕೇಶ್
ಏಷ್ಯಾದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿದ್ದ ಜಾಕ್ ಮಾ ಅವರ ಸ್ಥಾನಕ್ಕೆ ಈಗ ಮುಕೇಶ್ ಏರಿ ದ್ದಾರೆ. 84.5 ಶತ ಕೋಟಿ ಡಾಲರ್ ಸಂಪತ್ತು ಹೊಂದಿರುವ ಮುಕೇಶ್ ಜಾಗತಿಕ ಕೋಟ್ಯಧಿಪತಿ ಗಳ ಪಟ್ಟಿ ಯಲ್ಲಿ 10ನೇ ಸ್ಥಾನ ಪಡೆದು ಕೊಂಡಿ ದ್ದಾರೆ. ಪಟ್ಟಿ ಯಲ್ಲಿ ಅಮೆರಿಕದ 724 ಶ್ರೀಮಂತರು ಸ್ಥಾನ ಪಡೆ ದಿದ್ದರೆ, ಚೀನದ 626 ಮಂದಿ ಸ್ಥಾನ ಪಡೆದಿ ದ್ದಾರೆ. ಜತೆಗೆ ಭಾರತದ 140 ಉದ್ಯಮಿಗಳೂ ಸ್ಥಾನ ಪಡೆ ದು ದೇಶಕ್ಕೆ ಹೆಗ್ಗಳಿಕೆ ತಂದಿದ್ದಾರೆ.
38 ಮಂದಿಗೆ ಭಡ್ತಿ!
2019-20ರ ಫೋಬ್ಸ್ì ಪಟ್ಟಿಯಲ್ಲಿ ಭಾರತದ 102 ಶ್ರೀಮಂತರು ಬಿಲಿಯನೇರ್ಗಳೆನಿಸಿಕೊಂಡಿದ್ದರು. 2020-21ರಲ್ಲಿ ಭಾರತದ 37 ಮಂದಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ. ಅಲ್ಲಿಗೆ ಭಾರತದಲ್ಲಿನ ಒಟ್ಟು ಬಿಲಿಯನೇರ್ಗಳ ಸಂಖ್ಯೆ 140ಕ್ಕೇರಿದೆ. ಇವರೆಲ್ಲರ ಒಟ್ಟಾರೆ ಆಸ್ತಿ ಮೌಲ್ಯ 44 ಲಕ್ಷ ಕೋಟಿ ರೂ. ಎನ್ನಲಾಗಿದೆ. ಎಲ್ಲರಿಗಿಂತ ಅತೀ ಶ್ರೀಮಂತ ಎಂಬ ಖ್ಯಾತಿ ಮುಕೇಶ್ಗೆ (6.2 ಲಕ್ಷ ಕೋಟಿ ರೂ.) ದೊರಕಿದೆ.
ಭಾರತದ ಪ್ರಮುಖ ಬಿಲಿಯನೇರ್ಗಳು
ಶಿವನಾದರ್(63ನೇ ಸ್ಥಾನ), ಲಕ್ಷ್ಮೀ ಮಿತ್ತಲ್(110), ಉದಯ್ ಕೋಟಕ್(128), ಕುಮಾರ ಬಿರ್ಲಾ(162), ಸಾವಿತ್ರಿ ಜಿಂದಾಲ್ ಕುಟುಂಬ(181), ಅಜೀಂ ಪ್ರೇಮ್ ಜೀ(281), ಬಜಾಜ್ ಸಹೋ ದರರು(392), ರಾಹುಲ್ ಬಜಾಜ್(444), ಕಿರಣ್ ಮಂಜುಂದಾರ್(676), ನಾರಾಯಣ ಮೂರ್ತಿ(783), ನಂದನ್ ನಿಲೇಕಣಿ (1,158).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!