ಕೋವಿಡ್ ಮಹಾಮಾರಿ : ಮುಂಬಯಿಯಲ್ಲಿ 1 ತಿಂಗಳಲ್ಲಿ 1.49 ಲಕ್ಷ ಪ್ರಕರಣ

Team Udayavani, Apr 11, 2021, 12:48 PM IST

ಕೋವಿಡ್ ಮಹಾಮಾರಿ : ಮುಂಬಯಿ: 1 ತಿಂಗಳಲ್ಲಿ 1.49ಲಕ್ಷ ಪ್ರಕರಣ

ಮುಂಬಯಿ: ಮುಂಬಯಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಅಂಕಿಅಂಶಗಳ ಪ್ರಕಾರ ಮುಂಬಯಿಯಲ್ಲಿ ಕಳೆದ ಒಂದು ತಿಂಗಳಲ್ಲಿ 1,49,196 ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಚೇತರಿಸಿಕೊಂಡವರ ಸಂಖ್ಯೆ ಕೇಲವ 77,560ಕ್ಕೆ ತಲುಪಿದೆ ಎಂದು ವರದಿಯಾಗಿದೆ.

ಮುಂಬಯಿಯಲ್ಲಿ ಸಾವಿನ ಸಂಖ್ಯೆ ಕಳೆದ ವರ್ಷದ ಮೇ ಮತ್ತು ಜೂನ್‌ಗಿಂತ ಇಳಿಕೆಯಾಗಿದ್ದು, ಕಳೆದ ತಿಂಗಳಲ್ಲಿ 351 ಸಾವುಗಳು ಸಂಭವಿಸಿದ್ದವು. ಮುಂಬಯಿಯಲ್ಲಿ ನಿಯಂತ್ರಣದಲ್ಲಿದ್ದ ಸೋಂಕು ಫೆಬ್ರವರಿಯಿಂದ ಮತ್ತೆ ಹೆಚ್ಚಲಾರಂಭಿಸಿದೆ. ಈ ವರ್ಷದ ಮಾರ್ಚ್‌ ನಲ್ಲಿ ಕೋವಿಡ್ ಬೆಳವಣಿಗೆಯ ದರ ಅತೀ ಹೆಚ್ಚು ದಾಖಲಾಗಿದ್ದು, ಮಾರ್ಚ್‌ 7ರಂದು ಮುಂಬಯಿಯಲ್ಲಿ ಕೋವಿಡ್ 3,33,564 ಸೋಂಕಿತರಿದ್ದರು. ಇದು ಎಪ್ರಿಲ್‌ 7ಕ್ಕೆ 4,82,760ಕ್ಕೆ ತಲುಪಿದೆ. ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ಮಾರ್ಚ್‌ 7ರ ವೇಳೆಗೆ 11,500 ಸಾವುಗಳು ಸಂಭವಿಸಿದ್ದು, ಎಪ್ರಿಲ್‌ 7ರಂದು ಈ ಸಂಖ್ಯೆ 11,851ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.

ಆರೋಗ್ಯ ಇಲಾಖೆಗೆ ಕಳವಳ :

ಈವರೆಗೆ 3.88ಲಕ್ಷ ಸೋಂಕಿತರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಮಾರ್ಚ್‌ ಹೋಲಿಸಿದರೆ ಎಪ್ರಿಲ್‌ನಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಆದ್ದರಿಂದ ಪುರಸಭೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಹೆಚ್ಚಿಸಿದೆ. ಎಪ್ರಿಲ್‌ ಮೊದಲ ವಾರದಲ್ಲಿ 58,246 ಸೋಂಕಿತರು ಕಂಡುಬಂದಿದ್ದು, ಇದು ಪುರಸಭೆಯ ಆರೋಗ್ಯ ಇಲಾಖೆಗೆ ಕಳವಳಕ್ಕೆ ಕಾರಣವಾಗಿದೆ.

ಹೋಮ್‌ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ :

ಮುಂಬಯಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 81,886ಕ್ಕೆ ತಲುಪಿದೆ. ಈ ಪೈಕಿ ಸುಮಾರು ಶೇ.80ರಷ್ಟು ಮಂದಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದ್ದರಿಂದ ಹೆಚ್ಚಿನವರು ಹೋಮ್‌ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆಸ್ಪತ್ರೆ ಮತ್ತು ಕೋವಿಡ್ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದು ತಿಳಿಸಿದೆ.

ಟಾಪ್ ನ್ಯೂಸ್

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ಅಮೆರಿಕದ ಮೇರಿಲ್ಯಾಂಡ್‌ನ‌ಲ್ಲಿ ಮೂರು ದಿನಗಳ ಕನ್ನಡದ ಹಬ್ಬ

Desi Swara: ಅಮೆರಿಕದ ಮೇರಿಲ್ಯಾಂಡ್‌ನ‌ಲ್ಲಿ ಮೂರು ದಿನಗಳ ಕನ್ನಡದ ಹಬ್ಬ

Desi Swara: ಡಲ್ಲಾಸ್‌ ನಗರದಲ್ಲಿ ಸುಧನ್ವಾರ್ಜುನ ಪ್ರಸಂಗ

Desi Swara: ಡಲ್ಲಾಸ್‌ ನಗರದಲ್ಲಿ ಸುಧನ್ವಾರ್ಜುನ ಪ್ರಸಂಗ

Desi Swara: ಕತಾರ್‌ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್‌’

Desi Swara: ಕತಾರ್‌ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್‌’

Desi Swara: ಇಪ್ಪತ್ತರ ಸಂಭ್ರಮದಲ್ಲಿ “ಮೊಗವೀರ್ಸ್‌ ಬಹ್ರೈನ್‌” ಸಂಘಟನೆ

Desi Swara: ಇಪ್ಪತ್ತರ ಸಂಭ್ರಮದಲ್ಲಿ “ಮೊಗವೀರ್ಸ್‌ ಬಹ್ರೈನ್‌” ಸಂಘಟನೆ

Desi Swara: ಕನ್ನಡ ಕಟ್ಟುವುದನ್ನು ಮುಂದುವರೆಸಿ- ನಾಗಾಭರಣ

Desi Swara: ಕನ್ನಡ ಕಟ್ಟುವುದನ್ನು ಮುಂದುವರೆಸಿ-ಟಿಎಸ್ ನಾಗಾಭರಣ

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

chef chidambara trailer

Chef Chidambara trailer: ಭರವಸೆ ಮೂಡಿಸಿದ ಅನಿರುದ್ಧ್ ಸಿನಿಮಾ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

12

Sagara: ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.