ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕನ ಬೈಕ್ ಸೀಜ್
Team Udayavani, May 10, 2021, 4:04 PM IST
ಬೆಳಗಾವಿ: ವೈದ್ಯರ ಏಪ್ರಾನ್ ಧರಿಸಿ ತರಕಾರಿ ತರಲು ಹೋದ ಯುವಕನನ್ನು ತಡೆದ ಪೊಲೀಸರು ದ್ವಿಚಕ್ರ ವಾಹನ ಸೀಜ್ ಮಾಡಿದ್ದಾರೆ.
ಮಹಿಳೆಯನ್ನು ಕೂರಿಸಿಕೊಂಡು ಮಾರ್ಕೆಟಿಗೆ ಸುಖಾಸುಮ್ಮನೆ ಓಡಾಡುತ್ತಿದ್ದ ಯುವಕನನ್ನು ತಡೆದು ವಿಚಾರಿಸಿದಾಗ ನಕಲಿ ವೈದ್ಯ ಎಂದು ಗೊತ್ತಾಗಿದೆ. ಬೈಕ್ ತಡೆದು ತಪಾಸಣೆ ಮಾಡಿದಾಗ ಯುವಕ ಸಿಕ್ಕಿ ಹಾಕಿಕೊಂಡಿದ್ದಾನೆ. ಡಿಸಿಪಿ ವಿಕ್ರಮ ಆಮ್ಟೆ ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ ಯುವಕ ಖತರ್ನಾಕ್ ಐಡಿಯಾ ಠುಸ್ ಆಗಿದೆ.
‘ನಮ್ಮ ಅಣ್ಣನ ಏಪ್ರಾನ್ ಮರೆತು ಹಾಕಿಕೊಂಡು ಬಂದಿದ್ದೇನೆ ಬಿಟ್ಟು ಬಿಡಿ ಸರ್’ ಎಂದು ಯುವಕ ಬೇಡಿಕೊಂಡಿದ್ದಾನೆ. ಮಹಿಳೆ ಜತೆಗೆ ನಡೆದುಕೊಂಡು ಮನೆ ದಾರಿ ಹಿಡಿದಿದ್ದಾರೆ.
ಏಪ್ರಾನ್ ಏಕೆ ಹಾಕಿಕೊಂಡಿದ್ದೀಯಾ ಎಂದು ಯುವಕನನ್ನು ಪೊಲೀಸರು ಕೇಳಿದ್ದಕ್ಕೆ ನಗುತ್ತ ನಿಂತಿದ್ದನು. ಗುರುತಿನ ಚೀಟಿ ಇದ್ದರೆ ತೋರಿಸು ಎಂದಿದ್ದಕ್ಕೆ ಸುಮ್ಮನೆ ನಿಂತಿದ್ದನು. ಎಫ್ರೋನ್ ಕಳಚಿದ ಪೊಲೀಸರು ಬೈಕ್ ಸೀಜ್ ಮಾಡಿ ಕಳುಹಿಸಿದ್ದಾರೆ.