ಲಂಕಾ ಸರಣಿಗೆ ಯುವ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್?
Team Udayavani, May 12, 2021, 7:26 AM IST
ಹೊಸದಿಲ್ಲಿ: ಜುಲೈ ತಿಂಗಳಿನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾಗೆ ಪ್ರವಾಸ ತೆರಳಿ ಸೀಮಿತ ಓವರ್ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಈ ಪ್ರವಾಸಕ್ಕೆ ಮಾಜಿ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಕೋಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗಲೇ ಮತ್ತೂಂದು ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಪ್ರಧಾನ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಜತೆಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಶ್ರೀಲಂಕಾ ಪ್ರವಾಸಕ್ಕೆ ಲಭ್ಯರಾಗುವುದಿಲ್ಲ. ಹೀಗಾಗಿ ಕೋಚಿಂಗ್ ವಿಭಾಗವೂ ಹೊಸಬರಿಂದಲೇ ಕೂಡಿರಲಿದೆ. ಆಗ ಪ್ರಧಾನ ಕೋಚ್ ಜವಾಬ್ದಾರಿ ದ್ರಾವಿಡ್ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ರಾಹುಲ್ ದ್ರಾವಿಡ್ ಸದ್ಯ ಎನ್ ಸಿಎದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೀಂ ಇಂಡಿಯಾ ಲಂಕಾದಲ್ಲಿ ಮೂರು ಏಕದಿನ ಮತ್ತು ಐದು ಟಿ 20 ಪಂದ್ಯಗಳನ್ನು ಆಡುವುದು ಬಹುತೇಕ ಖಚಿತವಾಗಿದೆ.