ಸಾರ್ವಕಾಲಿಕ ಐಪಿಎಲ್ ತಂಡ ಪ್ರಕಟಿಸಿದ ಜಾಸ್ ಬಟ್ಲರ್
Team Udayavani, May 17, 2021, 12:26 AM IST
ಲಂಡನ್: ರಾಜಸ್ಥಾನ್ ರಾಯಲ್ಸ್ ತಂಡದ ಇಂಗ್ಲೆಂಡ್ ಕ್ರಿಕೆಟಿಗ ಜಾಸ್ ಬಟ್ಲರ್ ಸಾರ್ವಕಾಲಿಕ ಐಪಿಎಲ್ ತಂಡವೊಂದನ್ನು ಹೆಸರಿಸಿದ್ದಾರೆ. ಇದರಲ್ಲಿ ಸ್ವತಃ ತಮ್ಮನ್ನೇ ಓರ್ವ ಆರಂಭಿಕ ನನ್ನಾಗಿ ಸೇರೀಕೊಂಡಿದ್ದಾರೆ. ರೋಹಿತ್ ಶರ್ಮ ಇವರ ಜತೆಗಾರ.
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, 360 ಡಿಗ್ರಿ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್, ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಮಧ್ಯಮ ಕ್ರಮಾಂಕದ ಪ್ರಮುಖರು. ಆಲ್ರೌಂಡರ್ಗಳ ಸ್ಥಾನ ಕೈರನ್ ಪೊಲಾರ್ಡ್ ಹಾಗೂ ರವೀಂದ್ರ ಜಡೇಜ ಪಾಲಾಗಿದೆ.
ಪ್ರಧಾನ ವೇಗಿಗಳಾಗಿ ಕಾಣಿಸಿ ಕೊಂಡವರು ಲಸಿತ ಮಾಲಿಂಗ, ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್. ಸ್ಪಿನ್ ಜಾಗದಲ್ಲಿರುವವರು ಹರ್ಭಜನ್ ಸಿಂಗ್. ತಂಡದಲ್ಲಿರುವವರೆಲ್ಲರೂ ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರೆಂಬುದು ವಿಶೇಷ.
ಬಟ್ಲರ್ ಐಪಿಎಲ್ ಇಲೆವೆನ್
ಜಾಸ್ ಬಟ್ಲರ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್, ಮಹೇಂದ್ರ ಸಿಂಗ್ ಧೋನಿ, ಕೈರನ್ ಪೊಲಾರ್ಡ್, ರವೀಂದ್ರ ಜಡೇಜ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಲಸಿತ ಮಾಲಿಂಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ