“ರೋಗ ನಿರೋಧಕ ಶಕ್ತಿ ಕಾಪಾಡಲು ಮಾನಸಿಕ ಆರೋಗ್ಯ ಮುಖ್ಯ’


Team Udayavani, May 22, 2021, 6:40 AM IST

“ರೋಗ ನಿರೋಧಕ ಶಕ್ತಿ ಕಾಪಾಡಲು ಮಾನಸಿಕ ಆರೋಗ್ಯ ಮುಖ್ಯ’

ಮಂಗಳೂರು : ಕೊರೊನಾ ವೈರಸ್‌ ಸೋಂಕು ಬಾರದಂತೆ ತಡೆಯಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಯ್ದು ಕೊಳ್ಳುವುದು ಬಹಳ ಅತ್ಯಗತ್ಯ. ಇದನ್ನು ಕಾಪಾ ಡುವುದಕ್ಕೆ ದೈಹಿಕ ಆರೋಗ್ಯ ಪಾಲನೆ ಜತೆಗೆ ಮಾನ ಸಿಕ ಆರೋಗ್ಯದ ರಕ್ಷಣೆಯೂ ಅಷ್ಟೇ ಮುಖ್ಯ ಎಂದು ಮನೋ ವೈದ್ಯರು ಸಲಹೆ ನೀಡಿದ್ದಾರೆ.

“ಕೊರೊನಾ ಭೀತಿ-ಮಾನಸಿಕ ಖನ್ನತೆ’ ಕುರಿತು ಉದಯವಾಣಿ ಮಂಗಳೂರು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಫೋನ್‌-ಇನ್‌ ಕಾರ್ಯ ಕ್ರಮದಲ್ಲಿ ಅತ್ತಾವರ ಕೆಎಂಸಿ ಆಸ್ಪತ್ರೆಯ ಮನೋ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ| ಕೇಶವ ಪೈ ಮತ್ತು ಕ್ಲಿನಿಕಲ್‌ ಸೈಕಲಾಜಿಸ್ಟ್‌ ಮಹೇಶ್‌ ಬಿ. ಎಸ್‌. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ, ಆತ್ಮಸ್ಥೈರ್ಯದ ಮಾತುಗಳನ್ನಾಡಿದ್ದಾರೆ.

ಮಾನಸಿಕವಾಗಿ ಹೆಚ್ಚು ಆತಂಕಕ್ಕೆ ಒಳಗಾದಾಗ ಮೆದುಳಿನ ಮೇಲೆ ಪ್ರಭಾವ ಬಿದ್ದು, ಅಲ್ಲಿ ರಾಸಾಯನಿಕವೊಂದು ಸೃಷ್ಟಿಯಾಗಿ ಅದರಿಂದ ಖನ್ನತೆಯಂತಹ ರೋಗಕ್ಕೆ ಕಾರಣವಾಗುತ್ತದೆ. ಮಾನಸಿಕ ಆರೋಗ್ಯ ಹದಗೆಟ್ಟಾಗ ದೇಹದ ರೋಗ ನಿರೋಧಕ ಶಕ್ತಿ ಕೂಡ ಕುಂಠಿತವಾಗಿ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮನಸ್ಸಿನ ಮೇಲೆ ಹೆಚ್ಚು ಒತ್ತಡ ಬೀಳದಂತೆ ಸದಾ ಲವಲ ವಿಕೆಯಿಂದಿರಲು ಪ್ರಯತ್ನಿಸ ಬೇಕು ಎಂದವರು ಸಲಹೆ ಮಾಡಿದರು.

ಕೊರೊನಾದ ಸಂದರ್ಭ ಆತಂಕ ಸಹಜ. ಅವುಗಳನ್ನು ಯಥಾಸ್ಥಿತಿಯಲ್ಲಿ ಸ್ವೀಕರಿಸಬೇಕು ಹಾಗೂ ಆ ಆತಂಕ ತೀವ್ರತೆಗೆ ಹೋಗ ದಂತೆ ನೋಡಿಕೊಳ್ಳುವುದು ತೀರಾ ಅಗತ್ಯ. ವಿಪರೀತಕ್ಕೆ ಹೋದರೆ ಅದು “ಸ್ಟಿಗ್ಮಾ’ ಆಗುತ್ತದೆ. ಮಾನಸಿಕವಾಗಿ ತುಂಬಾ ಆತಂಕಗಳಿದ್ದರೆ ಮನೋತಜ್ಞರನ್ನು ಸಂಪರ್ಕಿಸಬೇಕು ಎಂದರು.

ರೋಹಿಣಿ ಬಾಲಚಂದ್ರ ಉಡುಪಿ
-ಕೊರೊನಾ ಮೂರನೇ ಅಲೆ ಬಗ್ಗೆ ಕೇಳಿ ಬರುತ್ತಿದೆ. ನಮ್ಮ ಮಕ್ಕಳ ಬಗ್ಗೆ ಆತಂಕ ಇದೆ. ಏನು ಮಾಡಲಿ?
ಆತಂಕ ಬೇಡ. ಮಗುವಿನ ಬಗ್ಗೆ ಜಾಗ್ರತೆ ವಹಿಸಿ. ಕೊರೊನಾ ನಿಯಂತ್ರಣಕ್ಕೆ ಇರುವ ನಿಯಮಾವಳಿ ಪಾಲಿಸಿ. ಜ್ವರವಿದ್ದರೆ ವೈದ್ಯರನ್ನು ಸಂಪರ್ಕಿಸಿ, ಅನಾವಶ್ಯಕ ವಿಷಯಗಳನ್ನು ಚಿಂತಿಸಬೇಡಿ.

ಪ್ರಕಾಶ್‌ ಪಡಿಯಾರ್‌ ಮರವಂತೆ
– ಆತ್ಮಸ್ಥೈರ್ಯ ಬೆಳೆಯಲು ಏನು ಮಾಡಬೇಕು?
ಅನಗತ್ಯ ತಿರುಗಾಟ ಬಿಟ್ಟು, ಆರೋಗ್ಯಕಾಳಜಿ ರೂಢಿಸಿಕೊಳ್ಳಿ. ಯಾವುದೋ ಘಟನೆಯನ್ನು ಕಲ್ಪಿಸಿಕೊಂಡು ತನಗೂ ಹಾಗಾಗಬಹುದು ಎಂದೆಣಿಸಬೇಡಿ. ಯಾವುದೇ ವಿಚಾರ ಅಥವಾ ಘಟನೆ ನಡೆದಾಗ ನಿರ್ಧಾರಕ್ಕೆ ಬರುವ ಮೊದಲು ವಿಶ್ಲೇಷಿಸಿ. ಟಿವಿ, ಮೊಬೈಲ್‌ನಲ್ಲಿನ ಮಾಹಿತಿಗೆ ಜೋತು ಬೀಳಬೇಡಿ. ಕೀಳರಿಮೆ ತೊರೆಯಿರಿ.

ರಮೇಶ್‌ ರಾವ್‌ ಕೈಕಂಬ
– ಚಿಕ್ಕ ಮಕ್ಕಳು ಶಾಲೆ ಇಲ್ಲದೆ ಮನೆಯಲ್ಲೇ ಇರುವು ದರಿಂದ ಮನೋ ಸಮಸ್ಯೆಗೆ ಒಳಗಾಗಬಹುದೇ?
ಮನೆಯಲ್ಲಿ ಮಕ್ಕಳಲ್ಲಿ ಮನೋಸ್ಥೈರ್ಯವನ್ನು ಬೆಳೆಸಬೇಕು. ಶಾಲೆಯಲ್ಲಿ ಮಗು ಮಾಡುವ ಚಿತ್ರ, ನೃತ್ಯ ಸೇರಿದಂತೆ ಎಲ್ಲವನ್ನೂ ಪೋಷಕರು ಮನೆಯಲ್ಲಿ ಮಾಡುವಂತೆ ಪ್ರೋತ್ಸಾಹಿಸಬೇಕು. ಚಿತ್ರ, ಹಾಡುಗಾರಿಕೆ, ಚಿತ್ರ ಕಲೆಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ವಿಶೇಷವಾಗಿ ಪೋಷಕರು ತಮ್ಮ ಆತಂಕವನ್ನು ಮಕ್ಕಳ ಮೇಲೆ ಹೇರದೇ ಅವರ ಜತೆ ಹೆಚ್ಚು ಒಡನಾಟ ಇಟ್ಟುಕೊಳ್ಳಬೇಕು.

ರಾಜೇಶ್‌ ಶೆಟ್ಟಿ, ಜಪ್ಪಿನಮೊಗರು
– ಮಕ್ಕಳು ಆನ್‌ಲೈನ್‌ ಶಿಕ್ಷಣ ಹಾಗೂ ಮನೆಯಲ್ಲೇ ಇರುವ ಕಾರಣ ಅವರ ಭವಿಷ್ಯ?
ಹಾಗೇನಿಲ್ಲ. ಸದ್ಯದ ಸಂಕಷ್ಟ ಶೀಘ್ರ ಮುಗಿಯುವ ನಿರೀಕ್ಷೆಯಿದೆ. ಮುಂದೆ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ. ಹೀಗಾಗಿ ಆತಂಕ ಬೇಡ.

ಪ್ರವೀಣ್‌ ಶೆಟ್ಟಿ ಮುಂಬಯಿ
– ನನ್ನ ಒಬ್ಬ ಮಗ ಕಾಲೇಜು ಶಿಕ್ಷಣದಲ್ಲಿದ್ದು, ಓದಲು ಆಸಕ್ತಿ ತೋರುತ್ತಿಲ್ಲ. ಏನು ಮಾಡಲಿ?
ಖನ್ನತೆ ಸದ್ಯ ಸಾಮಾನ್ಯ ಸಂಗತಿ. ವ್ಯಕ್ತಿ ಮೊದಲಿದ್ದ ಹಾಗೆ ಮತ್ತೆ ಇರುವುದಿಲ್ಲ. ಆಸಕ್ತಿ ಕಳೆದುಕೊಳ್ಳುವುದು, ತಪ್ಪಿತಸ್ಥ ಭಾವನೆ, ದೈಹಿಕ ನಿಶ್ಯಕ್ತಿ ಸಹಿತ ಕೆಲವು ಲಕ್ಷಣಗ ಳಿರುತ್ತವೆ.ಇದು ಮನೋರೋಗವಲ್ಲ. ಸಾಮಾನ್ಯ ರೋಗ. ತಜ್ಞ ವೈದ್ಯರನ್ನು ಭೇಟಿಯಾದರೆ ಉತ್ತಮ.

ಮಲ್ಲಿಕಾರ್ಜುನ, ಕಾಪು
– ಗಂಡ ಹೆಂಡತಿ ಮನೆಯಲ್ಲಿದ್ದು, ಮಗಳು ದೂರ ದಲ್ಲಿದ್ದಾಳೆ. ಅವಳ ಬಗ್ಗೆ ಯೋಚಿಸಿಯೇ ನಮಗೆ ಖನ್ನತೆ ಶುರುವಾಗಿದೆ. ಏನು ಮಾಡಲಿ?
ಇದೊಂದು ರೀತಿಯ ಅತಂತ್ರತೆಯ ಖನ್ನತೆ. ಜತೆಗೆ 60 ದಾಟಿದವರಿಗೆ ಸಾಮಾನ್ಯ. ಆದರೆ ಎಷ್ಟು ಪ್ರಮಾಣದಲ್ಲಿ ಇದೆ ಎಂಬುದು ತಿಳಿಯಬೇಕು. ಹೀಗಾಗಿ ವೈದ್ಯರನ್ನು ಭೇಟಿಯಾಗಿ.

ವಿಘ್ನೇಶ್‌ ಕಿನ್ನಿಗೋಳಿ
– ನನಗೆ ಬಿಪಿ, ನರರೋಗ ಇದೆ. ಎರಡೂ ಲಸಿಕೆಯೂ ಇದೆ. ಕೊರೊನಾ ವಿಷಯ ಕೇಳಿ ಕೇಳಿ ಭಯವಾಗುತ್ತಿದೆ.
ಭಯದಿಂದ ಒತ್ತಡ ಹೆಚ್ಚಿ ದೇಹದ ಇತರ ಭಾಗಗಳಿಗೆ ಸಮಸ್ಯೆ ಆಗಲಿದೆ. ಜತೆಗೆ ಭಯದ ಮೂಲಕವೂ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹೀಗಾಗಿ ಭಯ ಬೇಡ. ಖುಷಿ ವಿಚಾರಕ್ಕೆ ಆದ್ಯತೆ ನೀಡಿ ಜಾಗ್ರತೆ ವಹಿಸಿ. ನಿಯಮಿತ ಆಹಾರ ಸೇವನೆ ಹಾಗೂ ವ್ಯಾಯಾಮ ಮಾಡಿ.

ಶೀನ ಬೆಳ್ಚಾಡ ಬಜಪೆ
– ನೆನಪಿನ ಶಕ್ತಿ ಕಡಿಮೆಯಾಗದಿರಲು ಏನು ಮಾಡಬೇಕು?
ಪ್ರಾಯ ಆದಾಗ ನೆನಪಿನ ಶಕ್ತಿ ಕಡಿಮೆಯಾಗುವುದು ಸಹಜ. ಸಣ್ಣ ಸಣ್ಣ ಮರೆವು ಇದ್ದರೆ ಪರಿಹರಿಸಬ ಹುದು. ಯಾವುದೇ ವಸ್ತು ಒಂದು ಕಡೆ ಇಡುವಾಗ ಅದನ್ನು ಬಾಯಿಂದ ಜೋರಾಗಿ ಹೇಳಿದರೆ ಅದು ನೆನಪಲ್ಲೇ ಉಳಿಯುತ್ತದೆ. ಮರೆವು ರೋಗ ಇದ್ದರೆ ಎಲ್ಲವೂ ಮರೆತು ಹೋಗುತ್ತದೆ.

ಶ್ರೀಲತಾ ಬ್ರಹ್ಮಾವರ
– ಮನೋಸಮಸ್ಯೆ ಇದ್ದವರು ಲಸಿಕೆ ಪಡೆದುಕೊಳ್ಳಬಹುದೇ?
ಲಸಿಕೆಗೂ ಮಾನಸಿಕತೆಗೂ ಸಂಬಂ ಧವಿಲ್ಲ. ಮನೋ ಸಮಸ್ಯೆ ಇದ್ದವರು ತುರ್ತಾಗಿ ಲಸಿಕೆ ಪಡೆಯಬೇಕು. ವೈದ್ಯರಿಂದ ಮಾಹಿತಿ ಪಡೆದುಕೊಳ್ಳಿ.

ಡಾ| ಮಾಧವ ಪೈ, ಮಕ್ಕಳ ತಜ್ಞರು
– ಶಾಲೆ, ಕಾಲೇಜು ಇಲ್ಲದ ಕಾರಣ ಮಕ್ಕಳ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರಬಹುದೇ?
ಮಕ್ಕಳನ್ನು ಮನೆಯಲ್ಲಿ ಅವರ ಪಾಡಿಗೆ ಬಿಡದೇ ಪೋಷಕರು ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ಕುಟುಂಬದವರ ಜತೆ ಬೆರೆಯುವಂತೆ ಮಾಡಬೇಕು. ಮಕ್ಕಳಿಗೆ ಕಥೆ ಓದಿ ಹೇಳುವ ಪರಿಪಾಠ ಬೆಳೆಸಬೇಕು. ಆಟೋಟಗಳಿಗೆ ಆದ್ಯತೆ ನೀಡಬೇಕು.

ಮಾನಸಿಕ ಆರೋಗ್ಯಕ್ಕೆ ನಾಲ್ಕು ಸೂತ್ರ ಪಾಲಿಸಿ
1. ನಮ್ಮಿಂದ ನಾವು ಮತ್ತು ಇನ್ನೊಬ್ಬರ ಮೇಲೆ ಯಾವುದೇ ರೀತಿ, ಸಾಂದರ್ಭಿಕವಾಗಿ ಒತ್ತಾಯ (ಡಿಮಾಂಡ್‌) ಹಾಕಬಾರದು.
2. ಅಕಸ್ಮಾತ್‌ ತನಗೆ ಕೊರೊನಾ ಬಂದರೆ ಅದರಿಂದ ತನಗೆ ವಿಪರೀತ ತೊಂದರೆ ಆಗಬಹುದು ಎಂಬ ಭಾವನೆ ಇರಕೂಡದು. ಅಂತಹ ಮಾತನ್ನೇ ಆಡಬಾರದು. ಕೊರೊನಾ ಬಂದರೆ ಇಂತಹ ಲಕ್ಷಣಗಳು ಇರುತ್ತವೆ ಎಂಬ ತಿಳುವಳಿಕೆ ಯನ್ನು ಹೊಂದಿ ಅದನ್ನು ಲಘುವಾಗಿ ಪರಿಗಣಿಸದೆ ಚಿಕಿತ್ಸಾ ಕ್ರಮದತ್ತ ಯೋಚಿಸಬೇಕು.
3. ಕೊರೊನಾ ಬಂದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ತನ್ನಲ್ಲಿ ಇಲ್ಲ ಎಂದು ಭಾವಿಸಬಾರದು. ಬದಲಾಗಿ ಅದನ್ನು ಸಹಿಸುವ ಶಕ್ತಿ- ಸಾಮರ್ಥ್ಯ ತನಗಿದೆ ಎಂದು ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು.
4.  ಮೌಲ್ಯಾಧಾರಿತ ಬದುಕು-ಅಂದರೆ ಬದುಕನ್ನು ಇದ್ದ ಹಾಗೆ ಸ್ವೀಕರಿಸಿ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಲವಲವಿಕೆಯಿಂದ ಇರುವುದು.

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.