ಕೋವಿಡ್‌ ಹೆಸರಿನಲ್ಲಿ ಸೈಬರ್‌ ವಂಚನೆ: ಪೊಲೀಸರಿಂದ ಕಟ್ಟೆಚ್ಚರ

Team Udayavani, Jun 1, 2021, 10:48 AM IST

ಕೋವಿಡ್‌ ಹೆಸರಿನಲ್ಲಿ ಸೈಬರ್‌ ವಂಚನೆ: ಪೊಲೀಸರಿಂದ ಕಟ್ಟೆಚ್ಚರ

ಮುಂಬಯಿ: ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಸೈಬರ್‌ ವಂಚಕರು ಜನರನ್ನು ಮೋಸಗೊಳಿಸುವ ಸಾಧನ ವಾಗಿ ಕೋವಿಡ್‌ ಅನ್ನು ಬಳಸುತ್ತಿದ್ದಾರೆ ಎಂದು ನಗರ ಸೈಬರ್‌ ಕ್ರೈಂ ವಿಭಾಗದ ಪೊಲೀಸ್‌ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ವಂಚ ಕರು ಆಕ್ಸಿಜನ್‌ ಸಿಲಿಂಡರ್‌ ಒದಗಿಸಲು, ಆ್ಯಂಟಿ ವೈರಲ್‌ ಔಷಧಗಳನ್ನು ಒದಗಿಸುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದು, ಕೋವಿಡ್‌ ಲಸಿಕೆಯ ಮುಂಚೂಣಿಯಲ್ಲಿರುವ ವಿದೇಶಿ ಕಂಪೆನಿಗಳ ಹೆಸರನ್ನು ಬಳಸಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ನಗರ ಪೊಲೀಸರಿಂದ ಸಂಗ್ರಹಿಸಿದ ಅಂಕಿಅಂಶ ಬಹಿರಂಗಪಡಿಸಿದೆ.

ಅಂಕಿಅಂಶಗಳ ಪ್ರಕಾರ ಎ. 30ರ ವರೆಗೆ ಮುಂಬಯಿ ಪೊಲೀಸರು ನಗರದಾದ್ಯಂತ 777 ಸೈಬರ್‌ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದು, ರಾಜ್ಯ ಸೈಬರ್‌ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಆನ್‌ಲೈನ್‌ ಹಣಕಾಸು ವಹಿವಾಟು ಮಾಡುವಾಗ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಮೊದಲ ನಾಲ್ಕು ತಿಂಗಳಲ್ಲಿ ದಾಖಲಾದ ಹೆಚ್ಚಿನ ಪ್ರಕರಣಗಳು ಕ್ರೆಡಿಟ್‌ ಕಾರ್ಡ್‌ ಮತ್ತು ಆನ್‌ಲೈನ್‌ ವಂಚನೆಗಳಿಗೆ ಸಂಬಂಧಿಸಿದ್ದಾಗಿದ್ದು, ಇಂತಹ 181 ಅಪರಾಧಗಳು ದಾಖಲಾಗಿವೆ. 78 ಪ್ರಕರಣಗಳು ಅಶ್ಲೀಲ ಎಸ್‌ಎಂಎಸ್‌ ಮತ್ತು ಇ-ಮೇಲ್‌ ಪ್ರಕರಣಗಳಾಗಿವೆ. ಅಲ್ಲದೆ ಮಾರ್ಫಿಂಗ್‌ ಇ-ಮೇಲ್‌ಗ‌ಳು ಮತ್ತು ನಕಲಿ ಸೋಶಿಯಲ್‌ ಮೀಡಿಯಾ ಪ್ರೊಫೈಲಿಂಗ್‌ನ 18 ಪ್ರಕರಣಗಳು, ಫಿಶಿಂಗ್‌ನ ನಾಲ್ಕು ಪ್ರಕರಣಗಳು, ಮೂಲ ಕೋಡ್‌ ಅನ್ನು ಹಾಳು ಮಾಡಿದ ಎರಡು ಪ್ರಕರಣಗಳು ಹಾಗೂ ಇತರ ವಿಭಾಗಗಳಲ್ಲಿ  ಬರುವ 493 ಅಪರಾಧಗಳನ್ನು ಎಪ್ರಿಲ್‌ ಅಂತ್ಯದವರೆಗೆ ದಾಖಲಿಸಲಾಗಿದೆ.

1.58 ಲಕ್ಷ ರೂ. ಕಳೆದುಕೊಂಡ ಯುವಕ :

ಇತ್ತೀಚೆಗೆ ಚೆಂಬೂರಿನ 18 ವರ್ಷದ ಯುವಕನೋರ್ವ ಆನ್‌ಲೈನ್‌ನಲ್ಲಿ ಆಕ್ಸಿಜನ್‌ ಪೂರೈಕೆಗೆ ಆದೇಶಿಸುವಾಗ 1.58 ಲಕ್ಷ ರೂ. ಗಳನ್ನು ಕಳೆದುಕೊಂಡಿರುವ ಪ್ರಕರಣ ದಾಖಲಾಗಿದೆ. ಯುವಕ ತನ್ನ ಅನಾರೋಗ್ಯದ ಅಜ್ಜಿಗಾಗಿ ಆಮ್ಲಜನಕ ವ್ಯವಸ್ಥೆ ಮಾಡಲು ಆನ್‌ಲೈನ್‌ನಲ್ಲಿ ವಿತರಕನನ್ನು ಸಂಪರ್ಕಿಸಿದ್ದ. ವಿತರಕರು ಎರಡು ದಿನಗಳಲ್ಲಿ ವಿತರಣೆ ಮಾಡುವ ಭರವಸೆ ನೀಡಿದ್ದು, ಆರೋಪಿ ಸಂಪೂರ್ಣ ಪಾವತಿ ಮುಂಗಡವನ್ನು ಸ್ವೀಕರಿಸಿದರೂ ಆಮ್ಲಜನಕ ಸಿಲಿಂಡರ್‌ ತಲುಪಿಸಲಿಲ್ಲ. ಆರೋಪಿ ನೀಡಿದ ಜಿಎಸ್‌ಟಿ ಸಂಖ್ಯೆಯನ್ನು ಪರೀಕ್ಷಿಸಿದಾಗ ಅದು ಉಡುಪಿನ ಅಂಗಡಿಯದ್ದಾಗಿದೆ ಎಂದು ತಿಳಿದುಬಂದಿದೆ.

ಉದ್ಯಮಿಗೆ 1.7 ಕೋಟಿ ರೂ. ವಂಚನೆ :

ಒಂದೆರಡು ದಿನಗಳ ಹಿಂದೆ ದಕ್ಷಿಣ ಮುಂಬಯಿಯ ಉದ್ಯಮಿಯೊಬ್ಬರು 1.7 ಕೋಟಿ ರೂ. ಗಳ ವಂಚನೆಗೊಳಗಾಗಿದ್ದರು. ವಂಚಕರು ಕೋವಿಡ್‌ ಲಸಿಕೆಗಾಗಿ ಸುದ್ದಿಯಲ್ಲಿರುವ ಅಂತಾರಾಷ್ಟ್ರೀಯ ಔಷಧ ಕಂ±ಪೆನಿಯೊಂದರ ಖರೀದಿ ವ್ಯವಸ್ಥಾಪಕನೆಂದು ಹೇಳಿ ಕ್ಯಾನ್ಸರ್‌ ಔಷಧಕ್ಕಾಗಿ ಕಚ್ಚಾ ವಸ್ತುಗಳ ಮೇಲೆ ಹೂಡಿಕೆ ಮಾಡಲು ಉದ್ಯಮಿಗಳಿಗೆ ಆಮಿಷವೊಡ್ಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋವಿಡ್‌ ಸಂಬಂಧಿತ ಔಷಧಗಳ ಕೊರತೆಯೊಂದಿಗೆ ರಾಜ್ಯಾದ್ಯಂತ ಹಲವಾರು ಮಂದಿ ಆನ್‌ಲೈನ್‌ ವಂಚನೆಗೊಳಗಾಗಿದ್ದು, ಈ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸುವಂತೆ ಸೈಬರ್‌ ಕ್ರೈಂ ವಿಭಾಗದ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಟಾಪ್ ನ್ಯೂಸ್

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.