ಮೂರನೇ ಅಲೆ ಎದುರಿಸಲು ಸನ್ನದ್ಧರಾಗೋಣ

Team Udayavani, Jun 10, 2021, 6:45 AM IST

ಮೂರನೇ ಅಲೆ ಎದುರಿಸಲು ಸನ್ನದ್ಧರಾಗೋಣ

ಕೊರೊನಾ ವೈರಸ್‌ನ ಮೂರನೇ ಅಲೆ ಖಂಡಿತ ವಾಗಿಯೂ ದೇಶಕ್ಕೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್‌ ಕೂಡ ಮೂರನೇ ಅಲೆಯನ್ನು ಎದುರಿಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳು ವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಕೊರೊನಾ ಮೊದಲನೇ ಅಲೆಯ ಬಳಿಕ ಸರಕಾರ ಮತ್ತು ಜನತೆ ಒಂದಿಷ್ಟು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ದೇಶಾದ್ಯಂತ ಕೊರೊನಾ ಎರಡನೇ ಅಲೆ ಜನರನ್ನು ಕಂಗೆಡಿಸಿತು. ಮಾತ್ರವಲ್ಲದೆ ಈ ರೂಪಾಂತರಿ ವೈರಸ್‌ ತೀವ್ರಗತಿಯಲ್ಲಿ ಹರಡಿದ್ದರ ಪರಿಣಾಮ ದೇಶದ ಬಹುತೇಕ ಎಲ್ಲೆಡೆ ಆರೋಗ್ಯ ಸೌಕರ್ಯಗಳ ಕೊರತೆ ಕಾಣಿಸಿಕೊಂಡು ದೇಶದ ಆರೋಗ್ಯ ವ್ಯವಸ್ಥೆಯ ಸದ್ಯದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಿದ್ದಂತೂ ಸುಳ್ಳಲ್ಲ. ಸರಕಾರ ಮತ್ತು ಸಮುದಾಯದ ಅವಿರತ ಶ್ರಮದ ಫ‌ಲವಾಗಿ ಈಗ ದೇಶದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕ್ಷೀಣಿಸತೊಡಗಿದೆ.

ಲಾಕ್‌ಡೌನ್‌, ಕಠಿನ ನಿರ್ಬಂಧ ಗಳಿಂದ ಒಂದೊಂದೇ ರಾಜ್ಯಗಳು ಹೊರಬರಲಾರಂಭಿ ಸಿದ್ದು ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಮರಳ ತೊಡಗಿವೆ. ಇದರ ಬೆನ್ನಲ್ಲೇ ಕಳೆದ ಬಾರಿ ಮಾಡಿದ ತಪ್ಪನ್ನು ಮಾಡದಿರುವಂತೆ ಸರಕಾರ ಮತ್ತು ವೈದ್ಯಕೀಯ ತಜ್ಞರು ನಿರಂತರವಾಗಿ ಜನತೆಯಲ್ಲಿ ಮನವಿ ಮಾಡಿ ಕೊಳ್ಳುತ್ತಲೇ ಬಂದಿದ್ದಾರೆ. ದೇಶದಲ್ಲಿ ಮೂರನೇ ಅಲೆ ಮುಂದಿನ ಮೂರ್‍ನಾಲ್ಕು ತಿಂಗಳುಗಳಲ್ಲಿ ಕಾಣಿಸಿಕೊಳ್ಳ ಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ಯಾವುದೇ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಸಮರ ಸನ್ನದ್ಧತೆ ಅತ್ಯಗತ್ಯವಾಗಿದೆ. ಕೊರೊನಾದ ಎರಡು ಅಲೆಗಳಲ್ಲಿ ಈ ವೈರಸ್‌ನ ವರ್ತನೆ ಊಹಾತೀತ ಎಂಬುದು ನಾವು ಕಲಿತ ಅತ್ಯಂತ ಮುಖ್ಯ ಪಾಠ. ಮೊದಲನೇ ಅಲೆಯ ಸಂದರ್ಭದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ಯಾವುದಾದರೂ ಕಾಯಿಲೆ ಗಳಿಂದ ಬಾಧಿತರಾದವರಿಗೆ ಕೊರೊನಾ ವೈರಸ್‌ ತಗಲಿತ್ತು ಮಾತ್ರವಲ್ಲದೆ ಸೋಂಕಿತರ ಸಂಖ್ಯೆ ಮಿತಿ ಯಲ್ಲಿದ್ದುದರಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಿದ್ದರಿಂದ ಮರಣ ಪ್ರಮಾಣ ಕಡಿಮೆ ಇತ್ತು. ಆದರೆ ಎರಡನೇ ಅಲೆಯ ವೇಳೆ ಸೋಂಕು ಜನರನ್ನು ಇನ್ನಿಲ್ಲದಂತೆ ಕಾಡಿತು. ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಸಾಗಿತಲ್ಲದೆ ಮರಣ ಪ್ರಮಾಣವೂ ಹೆಚ್ಚಾಯಿತು.

ಕೊರೊನಾ ಸೋಂಕು ಆರೋಗ್ಯವಂತ ಯುವಕ ರನ್ನು ಬಾಧಿಸುವುದಿಲ್ಲ ಎಂದು ಮೊದಲ ಅಲೆಯಲ್ಲಿ ನಾವು ಭಾವಿಸಿದ್ದರೆ, ನಮ್ಮಿà ತಿಳಿವಳಿಕೆಯನ್ನು ಉಲ್ಟಾ ಮಾಡಿದ ಈ ವೈರಸ್‌ ಎರಡನೇ ಅಲೆಯಲ್ಲಿ ಯುವ ಸಮುದಾಯವನ್ನೇ ಪ್ರಮುಖ ಗುರಿಯಾಗಿಸಿ ಕೊಂಡಿತ್ತು. ಅಷ್ಟು ಮಾತ್ರವಲ್ಲದೆ ರೋಗದ ಗುಣಲಕ್ಷಣ ಗಳಲ್ಲಿಯೂ ಮಾರ್ಪಾಡುಗಳು ಕಂಡುಬಂದವು. ಬಾಧಿತರನ್ನು ಉಸಿರಾಟ ಸಂಬಂಧಿ ಸಮಸ್ಯೆಗಳು ತೀವ್ರವಾಗಿ ಕಾಡಿದವು. ಎರಡನೇ ಅಲೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ದೇಶದ ಹಲವೆಡೆ ಆಸ್ಪತ್ರೆಗಳಲ್ಲಿ ಆರೋಗ್ಯ ಸೌಕರ್ಯಗಳ ಕೊರತೆ ವ್ಯಾಪಕವಾಗಿತ್ತು. ಆ ಬಳಿಕ ಸರಕಾರ ಇತ್ತ ಹೆಚ್ಚಿನ ಲಕ್ಷ್ಯ ಹರಿಸಿ ಈ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲು ನಿರಂತರವಾಗಿ ಶ್ರಮಿ ಸಿದ ಬಳಿಕ ಈ ಕೊರತೆಗಳು ನಿವಾರಣೆಯಾದವು.

ಅಷ್ಟೇ ಅಲ್ಲದೆ ಲಾಕ್‌ಡೌನ್‌, ನಿರ್ಬಂಧಗಳ ಮೂಲಕ ಜನಸಂಚಾರಕ್ಕೆ ಒಂದಿಷ್ಟು ಕಡಿವಾಣ ಹಾಕಿದ್ದರ ಪರಿಣಾಮ ಈಗ ಎರಡನೇ ಅಲೆ ನಿಯಂತ್ರಣಕ್ಕೆ ಬರು ವಂತಾಗಿದೆ. ತಜ್ಞರು ಈಗಾಗಲೇ ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸರಕಾರ, ಖಾಸಗಿ ವೈದ್ಯ ಕೀಯ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜುಗೊಳ್ಳು ತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಜನರ ಸಹಕಾರ ಅತ್ಯಗತ್ಯ ವಾಗಿದೆ. ಆರೋಗ್ಯ ಸೌಕರ್ಯ ಆದಿಯಾಗಿ ವೈದ್ಯ ಕೀಯ ವ್ಯವಸ್ಥೆಗಳ ಸಿದ್ಧತೆಗಳೊಂದಿಗೆ ಜನರೂ ಕೆಲ ವೊಂದು ಮುಂಜಾಗ್ರತ ಕ್ರಮ ಅನುಸರಿಸಲೇಬೇಕಿದೆ.

ಮೂರನೇ ಅಲೆಯು ಮಕ್ಕಳನ್ನು ಬಾಧಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದು ಇದನ್ನು ಸರಕಾರ ಮತ್ತು ಜನರು ಗಂಭೀರವಾಗಿ ಪರಿಗಣಿಸಬೇಕಿದೆ. ಕೊರೊನಾ ಮೊದಲ ಅಲೆ ಕಾಣಿಸಿಕೊಂಡಾಗ ಮಕ್ಕಳು ಮತ್ತು ಯುವಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಇವರನ್ನು ಸೋಂಕು ಬಾಧಿ ಸದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಎರಡನೇ ಅಲೆಯ ವೇಳೆ ಈ ಸಮುದಾಯದವರನ್ನೂ ಸೋಂಕು ಬಾಧಿಸಿತ್ತಲ್ಲದೆ ಅಪಾರ ಪ್ರಾಣಹಾನಿಗೆ ಕಾರಣವಾಗಿತ್ತು.

ಕೊರೊನಾ ವೈರಸ್‌ ಪದೇಪದೆ ರೂಪಾಂತರಗೊಳ್ಳುತ್ತಿರುವುದರಿಂದ ಮೂರನೇ ಅಲೆಯ ವೇಳೆ ಮಕ್ಕಳಿಗೂ ಈ ವೈರಸ್‌ ಹರಡುವ ಸಾಧ್ಯತೆಗಳಿವೆ ಎಂದು ಇದೀಗ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಮತ್ತು ಜನರು ಎರಡನೇ ಅಲೆಯ ವೇಳೆ ತಮ್ಮಿಂದಾದ ನಿರ್ಲಕ್ಷ್ಯ, ಲೋಪದೋಷಗಳು ಈ ಬಾರಿ ಆಗದಂತೆ ಎಚ್ಚರ ವಹಿಸಬೇಕಿದೆ. ಕೊರೊನಾ ಮೂರನೇ ಅಲೆ ಎದುರಿಸಲು ಮತ್ತು ಒಂದು ವೇಳೆ ಸೋಂಕು ಮಕ್ಕಳನ್ನು ಬಾಧಿಸಿದರೂ ಅದು ಅಷ್ಟೇನು ಪರಿಣಾಮ ಬೀರದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಮೂರನೇ ಅಲೆ ಎದುರಿಸಲು ಏನು ಸಿದ್ಧತೆಯಾಗಬೇಕಿದೆ ?
01. ಶೀಘ್ರ ಲಸಿಕಾಕರಣದ ಅಗತ್ಯ.
02. ಆರೋಗ್ಯ ಸೇವೆಗಳನ್ನು ಸಶಕ್ತಗೊಳಿಸುವ ಅಗತ್ಯ.
03. ಮೊದಲನೇ ಮತ್ತು 2ನೇ ಅಲೆಯ ವೇಳೆ ದೊಡ್ಡ ಪ್ರಮಾಣದಲ್ಲಿ ವೈರಸ್‌ ಹರಡಿರುವ ಕ್ಲಸ್ಟರ್‌ಗಳಲ್ಲಿ ವಿಶೇಷ ನಿಗಾ ಮತ್ತು ಅಧ್ಯಯನ ಅಗತ್ಯ.
04. ಆಸ್ಪತ್ರೆಗಳು, ಸಾಕಷ್ಟು ಹಾಸಿಗೆಗಳು, ಮೆಡಿಕಲ್‌ ಆಕ್ಸಿಜನ್‌, ವೆಂಟಿಲೇಟರ್‌ಗಳ ವ್ಯವಸ್ಥೆಯನ್ನು ಈಗಿನಿಂದಲೇ ಸಿದ್ಧಪಡಿಸಬೇಕು.
05. ಮಾನವ ಸಂಪನ್ಮೂಲಗಳಾದ – ತರಬೇತಿ ಹೊಂದಿದ ವೈದ್ಯಾಧಿಕಾರಿಗಳು, ಶುಶ್ರೂಷಕ ಸಿಬಂದಿ, ಇತರ ಅರೆ ವೈದ್ಯಕೀಯ ಸಿಬಂದಿಯ ಕ್ರಮಬದ್ಧ ವ್ಯವಸ್ಥೆ.
06. ಮಕ್ಕಳ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸ್ಥಾಪಿಸುವ ಅಗತ್ಯ.
07. ದುರ್ಬಲ ಹಾಗೂ ಸೋಂಕು ಸುಲಭವಾಗಿ ತಗಲ ಬಹುದಾದ ಜನ ಸಮುದಾಯವನ್ನು ಗುರುತಿಸಿ, ಅಗತ್ಯ ಮುಂಜಾಗ್ರತೆ ವಹಿಸುವುದು.
08. ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರ ಸುರಕ್ಷತೆಗೆ ವಿಶೇಷ ಆದ್ಯತೆ.

ಗರ್ಭಿಣಿಯರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
– ಗರ್ಭಿಣಿಯರು ಮಾಸ್ಕ್ ಧರಿಸುವುದನ್ನು ಮರೆ ಯಬಾರದು. ಸಾಧ್ಯವಾದಷ್ಟು ಮನೆಯಲ್ಲೇ ಇರುವುದು. ಆಗಾಗ ಕೈ ತೊಳೆದುಕೊಳ್ಳತಕ್ಕದ್ದು. ಶುಚಿತ್ವಕ್ಕೆ ಆದ್ಯತೆ ಕೊಡತಕ್ಕದ್ದು .
– ಪೌಷ್ಟಿಕಾಂಶ ಸಹಿತ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಸೇವಿಸುವುದು.
– ನಿಯಮಿತ ನೀರು, ಪಾನಕ, ಹಣ್ಣುಗಳ ಸೇವನೆ.
– ವೈದ್ಯರ ಸಲಹೆಯ ಮೇರೆಗೆ ನಿತ್ಯ ವಾಕಿಂಗ್‌, ವ್ಯಾಯಾಮ ಮಾಡುವುದು.
– ಕೊರೊನಾ ಪಾಸಿಟಿವ್‌ ಇರುವ ವ್ಯಕ್ತಿಗಳಿಂದ ದೂರ ಇರುವುದು.
– ಕೊರೊನಾ ಲಕ್ಷಣಗಳಿದ್ದಲ್ಲಿ ನಿರ್ಲಕ್ಷಿಸದೆ ವೈದ್ಯ ರನ್ನು ಸಂಪರ್ಕಿಸುವುದು.
– ಕೊರೊನಾ ಪಾಸಿಟಿವ್‌ ಬಂದರೆ ಭಯ ಪಡದೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದು.
– ಪ್ರಸ್ತುತ ಗರ್ಭಿಣಿಯರಿಗೆ ಲಸಿಕೆ ನೀಡುತ್ತಿಲ್ಲ ವಾದ್ದರಿಂದ ಹೆರಿಗೆಯಾದ ಬಳಿಕ ಲಸಿಕೆಯನ್ನು ಪಡೆದುಕೊಳ್ಳುವುದು.

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.