ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: ಬೌಲ್ಟ್ -ರೋಹಿತ್ ಮುಖಾಮುಖೀಗೆ ಕಾತರ : ಸೆಹವಾಗ್
Team Udayavani, Jun 13, 2021, 11:51 PM IST
ಹೊಸದಿಲ್ಲಿ: ಬಹು ನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ-ವೇಗಿ ಟ್ರೆಂಟ್ ಬೌಲ್ಟ್ ನಡುವಿನ ಹಣಾಹಣಿಯನ್ನು ಎದುರು ನೋಡುತ್ತಿರುವುದಾಗಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಹೇಳಿದ್ದಾರೆ.
“ಭಾರತದ ಬ್ಯಾಟ್ಸ್ಮನ್ಗಳಿಗೆ ಬೌಲ್ಟ್, ಟಿಮ್ ಸೌಥಿ ಜೋಡಿ ದೊಡ್ಡ ಸವಾಲು ಒಡ್ಡಬಹುದು. ಅದರಲ್ಲಿಯೂ ಐಪಿಎಲ್ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ಬೌಲ್ಟ್ ಮತ್ತು ರೋಹಿತ್ ಮುಖಾಮುಖೀ ನೋಡಲು ಕಾತರನಾಗಿದ್ದೇನೆ. ರೋಹಿತ್ ನೆಲಕಚ್ಚಿ ನಿಂತು, ಬೌಲ್ಟ್ ಅವರ ಆರಂಭಿಕ ಸ್ಪೆಲ್ ಎದುರಿಸುವುದನ್ನು ಕಾಣುವುದು ಸೊಗಸಾಗಿರುತ್ತದೆ’ ಎಂದು ಸೆಹವಾಗ್ ಹೇಳಿದ್ದಾರೆ.
“ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಟೆಸ್ಟ್ ಆರಂಭಿಕನಾಗಿ ರೋಹಿತ್ ಕಣಕ್ಕಿಳಿಯುತ್ತಿದ್ದಾರೆ. ಆದರೆ ಕಳೆದ ಏಕದಿನ ವಿಶ್ವಕಪ್ನಲ್ಲಿ ತೋರಿದ ಪ್ರದರ್ಶನ ಮತ್ತು 2014ರ ಪ್ರವಾಸದ ಅನುಭವ ಅವರಿಗೆ ನೆರವಾಗಲಿದೆ’ ಎಂದು ವೀರೂ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಯೂರೋ ಕಪ್ : ಮೈದಾನದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಕ್ರಿಸ್ಟಿಯನ್ ಎರಿಕ್ಸೆನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ