ಯೂರೋ ಕಪ್ : ಮೈದಾನದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಕ್ರಿಸ್ಟಿಯನ್ ಎರಿಕ್ಸೆನ್
Team Udayavani, Jun 13, 2021, 11:16 PM IST
ಕೋಪನ್ಹೆಗನ್: ಯೂರೋ ಕಪ್ ಫುಟ್ಬಾಲ್ ಪಂದ್ಯಾವಳಿಯ ಆರಂಭದಲ್ಲೇ ದುರಂತವೊಂದು ಸಂಭವಿಸಿದೆ. ಡೆನ್ಮಾರ್ಕ್ ತಂಡದ ಮಿಡ್ಫಿಲ್ಡರ್ ಕ್ರಿಸ್ಟಿಯನ್ ಎರಿಕ್ಸೆನ್ ಪಂದ್ಯದ ವೇಳೆ ಹಠಾತ್ತನೇ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ದೇಹಸ್ಥಿತಿ ಸ್ಥಿರವಾಗಿದ್ದು, ಹೃದಯಾಘಾತದ ಯಾವುದೇ ಲಕ್ಷಣವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
“ಎರಿಕ್ಸೆನ್ ಲವಲವಿಕೆಯಿಂದಿದ್ದು, ತನ್ನ ಚೇತರಿಕೆಯನ್ನು ಹಾರೈಸಿದ ಆಭಿಮಾನಿಗಳಿಗೆ, ತಂಡದ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನೂ ಸ್ವಲ್ಪ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ’ ಎಂದು ಡ್ಯಾನಿಶ್ ಫುಟ್ಬಾಲ್ ಅಸೋಸಿಯೇಶನ್ ಪ್ರಕಟನೆಯಲ್ಲಿ ತಿಳಿಸಿದೆ.
42ನೇ ನಿಮಿಷದಲ್ಲಿ ಘಟನೆ…
29 ವರ್ಷದ ಕ್ರಿಸ್ಟಿಯನ್ ಎರಿಕ್ಸೆನ್, ಫಿನ್ಲಂಡ್ ಎದುರಿನ “ಬಿ’ ವಿಭಾಗದ ಪಂದ್ಯದ 42ನೇ ನಿಮಿಷದಲ್ಲಿ ಲೆಫ್ಟ್ ಟಚ್ಲೈನ್ ಬಳಿ ಓಡುತ್ತಿರುವಾಗ ಹಠಾತ್ತನೇ ಕುಸಿದು ಬಿದ್ದರು. ಮೇಲೇಳದಿದ್ದಾಗ ತಂಡದ ಆಟಗಾರರೆಲ್ಲ ಅವರನ್ನು ಸುತ್ತುವರಿದರು. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಹೊರಗೆ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ:ದ.ಆಫ್ರಿಕಾ ಇನ್ನಿಂಗ್ಸ್ ಜಯಭೇರಿ : ತವರಲ್ಲೇ ವೆಸ್ಟ್ ಇಂಡೀಸಿಗೆ ಮುಖಭಂಗ
ಈ ಘಟನೆಯಿಂದಾಗಿ ಪಂದ್ಯ ಒಂದು ಗಂಟೆ, 45 ನಿಮಿಷ ಕಾಲ ಸ್ಥಗಿತಗೊಂಡಿತು. ಡೆನ್ಮಾರ್ಕ್ 1-0 ಅಂತರದ ಗೆಲುವು ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ