ಹಾಲಿ ಚಾಂಪಿಯನ್ ಸಿಮೋನಾ ಹಾಲೆಪ್ ವಿಂಬಲ್ಡನ್ಗೆ ಗೈರು
Team Udayavani, Jun 26, 2021, 6:30 AM IST
ಲಂಡನ್ : ಹಾಲಿ ಚಾಂಪಿಯನ್ ಸಿಮೋನಾ ಹಾಲೆಪ್ 2021ರ ವಿಂಬಲ್ಡನ್ ಪಂದ್ಯಾವಳಿಯಿಂದ ದೂರ ಸರಿಯಲಿದ್ದಾರೆ. ಮೀನಖಂಡದ ಸ್ನಾಯು ಸೆಳೆತದಿಂದ ಅವರಿನ್ನೂ ಗುಣಮುಖರಾಗದಿರುವುದೇ ಇದಕ್ಕೆ ಕಾರಣ.
ಮೇ ತಿಂಗಳಲ್ಲಿ ನಡೆದ ಇಟಾಲಿಯನ್ ಓಪನ್ ಕೂಟದ, ಆ್ಯಂಜೆಲಿಕ್ ಕೆರ್ಬರ್ ಎದುರಿನ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಹಾಲೆಪ್ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಬಳಿಕ ಫ್ರೆಂಚ್ ಓಪನ್ ಪಂದ್ಯಾವಳಿಯಿಂದಲೂ ದೂರ ಸರಿದರು.
“ವಿಂಬಲ್ಡನ್ನಿಂದ ಹಿಂದೆ ಸರಿಯಬೇಕಾದ ಸುದ್ದಿಯನ್ನು ತೀವ್ರ ನೋವಿನಿಂದ ಹೇಳುತ್ತಿದ್ದೇನೆ. ನಾನಿನ್ನೂ ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿಲ್ಲ’ ಎಂದಿದ್ದಾರೆ 2019ರ ಚಾಂಪಿಯನ್ ಸಿಮೋನಾ ಹಾಲೆಪ್. ಅಂದು ಸೆರೆನಾ ವಿಲಿಯಮ್ಸ್ಗೆ ಸೋಲುಣಿಸುವ ಮೂಲಕ ಹಾಲೆಪ್ ಮೊದಲ ಸಲ ವಿಂಬಲ್ಡನ್ ಪ್ರಶಸ್ತಿಯನ್ನೆತ್ತಿದ್ದರು. ಕೋವಿಡ್ ಕಾರಣದಿಂದ 2020ರ ವಿಂಬಲ್ಡನ್ ನಡೆದಿರಲಿಲ್ಲ. ಈ ಬಾರಿ ಜೂ. 28ರಿಂದ ಜು. 11ರ ತನಕ ನಡೆಯಲಿದೆ.
ವಿಶ್ವದ ನಂ. 2 ಆಟಗಾರ್ತಿ ನವೋಮಿ ಒಸಾಕಾ ಕೂಡ ವಿಂಬಲ್ಡನ್ನಲ್ಲಿ ಆಡುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ