ನಾನು, ನನ್ನದು ಎಂಬ ಅಹಂಕಾರ ಸಲ್ಲದು


Team Udayavani, Jul 3, 2021, 6:20 AM IST

ನಾನು, ನನ್ನದು ಎಂಬ ಅಹಂಕಾರ ಸಲ್ಲದು

ಈ ಪ್ರಪಂಚದಲ್ಲಿ ಎಲ್ಲ ಮನುಷ್ಯರು ಒಂದೇ ರೀತಿಯ ಸ್ವಭಾವವಾಗಲಿ, ಮನೋಭಾವವನ್ನಾಗಲೀ ಹೊಂದಿರು ವುದಿಲ್ಲ. ಸತ್ಯವಂತರು, ತ್ಯಾಗಿಗಳು, ಪರೋಪಕಾರಿಗಳು, ಸಾಧು ಸ್ವಭಾವ ದವರು, ಕೋಪಿಷ್ಠರು, ಅಹಂಕಾರಿ ಗಳು.. ಹೀಗೆ ವಿವಿಧ ಗುಣ, ವರ್ತನೆ, ಮನೋಭಾವವನ್ನು ಹೊಂದಿರುವವರಿ ದ್ದಾರೆ. ಅಧಿಕಾರ, ಸಿರಿವಂತಿಕೆ, ಯೌವನ ಇರುವಾಗ ಕೆಲವರು ತನಗೆ ಯಾರೂ ಸಮಾನರಿಲ್ಲ ಎಂಬ ಭಾವನೆ ತಳೆದು ಅಹಂಕಾರವನ್ನೇ ತಲೆಗೇರಿಸಿಕೊಂಡು ಮೆರೆಯುತ್ತಾರೆ. ತಮ್ಮಲ್ಲಿರುವ ಅಧಿಕಾರ,

ಸಿರಿವಂತಿಕೆಯನ್ನು ಕಳೆದು ಕೊಂಡ ಬಳಿಕ ಇವರು ಅಕ್ಷರಶಃ ಒಬ್ಬಂಟಿ ಯಾಗುತ್ತಾರೆ. ಎಲ್ಲವೂ ಇದ್ದಾಗ ಪರರತ್ತ ಕಿಂಚಿತ್‌ ದೃಷ್ಟಿ ಹಾಯಿಸದ ಇವರು ಆ ಬಳಿಕ ಅನಿವಾರ್ಯವಾಗಿ ಇತರರ ಮುಂದೆ ತಲೆಬಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಾನು, ನನ್ನದು ಎಂಬ ಅಹಂಕಾರದ ವರ್ತನೆಯೇ ನಮ್ಮ ಜೀವನದ ಎಲ್ಲ ಆಗು-ಹೋಗು, ಸುಖ-ದುಃಖಗಳಿಗೆ ಮೂಲ ಕಾರಣವಾಗಿದೆ.
ಒಮ್ಮೆ ಕನಕದಾಸರ ಗುರುಗ ಳಾದ ವ್ಯಾಸರಾಯರು ತನ್ನ ಶಿಷ್ಯರಿಗೆ ಯಾರೆಲ್ಲ ಸ್ವರ್ಗಕ್ಕೆ ಹೋಗುತ್ತೀರಿ ಎಂದು ಪ್ರಶ್ನಿಸಿದರಂತೆ.

ಎಲ್ಲ ಶಿಷ್ಯರು ಅವರವರ ಅಭಿಪ್ರಾಯ ತಿಳಿಸಿದರಂತೆ. ಆದರೆ ಕನಕದಾಸರು, ಗುರುಗಳೇ “ನಾನು’ ಹೋದರೆ ಹೋದೇನು ಅಂದರಂತೆ, ಅಂದರೆ ನಾನು ಎಂಬ ಅಹಂಕಾರ ಹೋದರೆ ಹೋಗಬಹುದು ಎಂದು ಅವರು ಹೇಳಿದರು.

ಅಣ್ಣ-ತಮ್ಮಂದಿರಿಬ್ಬರು ಜಮೀನಿನ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಾ ಇದು ನನ್ನದು, ಇದು ನನ್ನ ಜಮೀನು ಎಂದು ವಾದಿಸತೊಡಗಿದರಂತೆ. ಆಗ ದೇವರು ಈ ಪ್ರಪಂಚವೇ ನನ್ನದು. ಈ ಸಹೋದರರು ನನ್ನದು, ನನ್ನದು ಎಂದು ಹೇಳುತ್ತಿದ್ದಾರಲ್ಲ ಅಂತ ನಗುತ್ತಿದ್ದರಂತೆ. ಈ ಹಿಂದೆ ರಾಮಾಯಣ, ಮಹಾಭಾರತದಲ್ಲೂ ಇಂತಹ ವ್ಯಕ್ತಿಗಳಿದ್ದರು. ರಾವಣನು ಹೆಣ್ಣಿನಿಂದ ಕೆಟ್ಟ, ದುರ್ಯೋದನನು ಮಣ್ಣಿನಿಂದ ಕೆಟ್ಟ ಎಂಬ ನಾಣ್ನುಡಿ ಇದೆ. ಇವರು ಸಹ ಅಹಂಕಾರವನ್ನು ತಲೆ ಗೇರಿಸಿಕೊಂಡು ತಮ್ಮ ಸರ್ವಸ್ವವನ್ನು ಕಳಕೊಂಡವರಾಗಿದ್ದಾರೆ.

ಇತಿಹಾಸದ ಪುಟಗಳನ್ನು ತೆರೆದಾಗ ಅತ್ಯಂತ ಮಹತ್ವಾಕಾಂಕ್ಷಿ ಮುತ್ಸದ್ಧಿ, ಸಮರ್ಥ ಆಡಳಿತಗಾರ, ಗ್ರೀಕ್‌ ದೇಶದ ದೊರೆ ಅಲೆಕ್ಸಾಂಡರನಿಗೆ ಪ್ರಪಂಚವನ್ನೇ ಗೆಲ್ಲುವ ಯೋಚನೆ ಬಂತು. ಅದ ಕ್ಕಾಗಿ ಭೂಮಂಡಲಕ್ಕೆ ದಿಗ್ವಿಜಯಕ್ಕಾಗಿ ಹೊರಟು ಕೊನೆಗೆ ಭಾರತಕ್ಕೆ ಬಂದು ಇಲ್ಲಿನ ರಾಜಪುರೂರವನ ಸ್ನೇಹ ಬೆಳೆಸಿ ಯುದ್ಧಕ್ಕೆ ಸನ್ನದ್ಧನಾದನಂತೆ. ಆಗ ಅವನ ಮನಃಪರಿವರ್ತನೆಗೊಂಡು ತನ್ನ ದೇಶಕ್ಕೆ ಹಿಂದಿರುಗಿದನಂತೆ. ಅನಂತರ ಅವನು ಅನಾರೋಗ್ಯಕ್ಕೆ ತುತ್ತಾಗಿ ಅಂತ್ಯಕಾಲಕ್ಕೆ ಒಂದು ಪತ್ರ ಬರೆದಿಡುತ್ತಾನೆ. ನಾನು ಈ ಪ್ರಪಂಚದಿಂದ ಹೋಗುವಾಗ ಏನೂ ಕೊಂಡು ಹೋಗಲಿಲ್ಲ ಎಂದು ಲೋಕಕ್ಕೆ ತಿಳಿಯಲು ನನ್ನ ಎರಡೂ ಕೈಗಳನ್ನು ನನ್ನ ಶವಪೆಟ್ಟಿಗೆಯ ಹೊರಗೆ ತೋರುವಂತೆ ಇಡಬೇಕು ಹಾಗೂ ಎಲ್ಲ ವೈದ್ಯ ರಿಂದ ನನ್ನನ್ನು ಬದುಕಿಸಲು ಆಗದೇ ಇರುವುದಕ್ಕಾಗಿ ಅವರೆಲ್ಲರೂ ನನ್ನ ಶವ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಆ ಪತ್ರದಲ್ಲಿ ಬರೆದಿಟ್ಟಿದ್ದನಂತೆ.

“ಅಹಂಕಾರ ವಿನಾಶಕ್ಕೆ ಕಾರಣ’ ಎಂಬುದಕ್ಕೆ ಪುರಾಣ, ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳು ನಮಗೆ ಲಭಿಸುತ್ತವೆ. ಅಷ್ಟು ಮಾತ್ರವಲ್ಲದೆ ವರ್ತಮಾನದಲ್ಲೂ ಇಂತಹ ವ್ಯಕ್ತಿಗಳು ನಮಗೆ ಕಾಣಸಿಗುತ್ತಾರೆ. ಅಹಂಕಾರ ದಿಂದ ಗಳಿಸಿದ ಅಧಿಕಾರ, ಸಂಪತ್ತು ಎಲ್ಲವೂ ನಶ್ವರ. ಇವೆಲ್ಲವೂ ನಮ್ಮನ್ನು ಅಂತ್ಯದತ್ತ ಕರೆದೊಯ್ಯುತ್ತವೆ. ಇದರ ಬದಲಾಗಿ ನಾವು ನಮ್ಮ ಹಿತದ ಜತೆ ಯಲ್ಲಿ ಪರರ ಹಿತದತ್ತಲೂ ಕೊಂಚ ದೃಷ್ಟಿ ಹರಿಸಬೇಕು. ನಮ್ಮ ಕೈಯಲ್ಲಿದ್ದ ಸಂಪತ್ತಿನಲ್ಲಿ ಅಲ್ಪಭಾಗವನ್ನು ಸಮಾಜ ದಲ್ಲಿನ ಅಶಕ್ತರಿಗೆ ನೀಡಿದಲ್ಲಿ ಅವರಿಗೆ ನೆರವಾದಂತಾಗುತ್ತದೆ. ಅಷ್ಟು ಮಾತ್ರವಲ್ಲದೆ ನಾವು ನೀಡುವ ಈ ಕೊಡುಗೆ ನಮ್ಮ ಮನಸ್ಸಿನಲ್ಲಿ ಏನೋ ಒಂದು ತೆರನಾದ ನೆಮ್ಮದಿಯನ್ನು ಮೂಡಿಸುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಮಾನಸಿಕ ನೆಮ್ಮದಿ ಮುಖ್ಯ. ಆದ್ದರಿಂದ ನಾವು ಜೀವನದಲ್ಲಿ ನಾನು, ನನ್ನದು ಎಂಬ ಅಹಂಕಾರ ಭಾವನೆಯನ್ನು ತೊರೆದು ತನ್ನ ಹಿತ ಮತ್ತು ಪರರ ಹಿತವನ್ನು ಮನಃಪೂರ್ವಕವಾಗಿ ಬಯಸುವವನಿಗೆ ಶ್ರೇಯಸ್ಸಾಗುವುದು.

- ದೇವರಾಜ ರಾವ್‌ ಎಂ., ಕಟಪಾಡಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.