ಶೌರ್ಯಕ್ಕೆ ಇನ್ನೊಂದು ಹೆಸರೇ ರಜಪುತಾನಾ ರೈಫ‌ಲ್ಸ್‌

Team Udayavani, Jul 4, 2021, 10:00 AM IST

ಶೌರ್ಯಕ್ಕೆ ಇನ್ನೊಂದು ಹೆಸರೇ ರಜಪುತಾನಾ ರೈಫ‌ಲ್ಸ್‌

ರೈಫ‌ಲ್ಸ್‌ ಎಂದರೆ ಥಟ್ಟನೆ ನೆನಪಿಗೆ ಬರೋದು ಗುಂಡುಗಳನ್ನು ಲೋಡ್‌ ಮಾಡಿ ಎದೆಗೇರಿಸಿ ಮಿಕದ ಕಡೆ ಮುಖ ಮಾಡಿ ನೇರವಾಗಿ ಗುರಿ ಹಿಡಿದು ಫೈರ್‌ ಮಾಡುವ ಯೋಧರು ಜತೆಗೆ ನೀಳಾಕೃತಿಯ ಬಗೆ ಬಗೆ ಕೋವಿಗಳು. ಆದರೆ ನಾವಿಲ್ಲಿ ಹೇಳ ಹೊರಟಿರುವುದು ಬರೀ ಬಂದೂಕುಗಳ ಬಗ್ಗೆ ಅಲ್ಲ. ಬಂದೂಕಿನಷ್ಟೇ ಶರವೇಗದಲ್ಲಿ ಮತ್ತು ಕ್ರಿಯಾಶೀಲವಾಗಿ ಕಾರ್ಯಾಚರಣೆ ನಡೆಸುವ ಸಂಘಟಕ ಶಕ್ತಿಗಳ ಬಗ್ಗೆ, ನೂರಾನೆಯ ಬಲದ ಬಗ್ಗೆ.

ಭಾರತೀಯ ಸೇನಾಪಡೆಗಳ ಪೈಕಿ ರಜಪುತಾನಾ ರೈಫ‌ಲ್ಸ್‌ ಕೂಡ ಒಂದು. ಸ್ವಾತಂತ್ರ್ಯಾ ಅನಂತರ ಈ ತುಕಡಿಯು ಪಾಕಿಸ್ಥಾನದ ವಿರುದ್ಧದ ಹಲವು ಸಂಘರ್ಷಗಳಲ್ಲಿ ಭಾಗಿಯಾಗಿತ್ತು. 18ನೇ ಶತಮಾನದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ರಜಪೂತರನ್ನು ನೇಮಿಸಿಕೊಳ್ಳಲಾಗಿತ್ತು. ಫ್ರೆಂಚ್‌ ಅಧಿಕಾರಿಗಳು ಅಳವಡಿಸಿಕೊಂಡಿದ್ದ ಕಾರ್ಯಕ್ಷಮತೆ ಮತ್ತು ಸ್ಥಳೀಯ ಘಟಕಗಳ ನೇಮಕಾತಿಗಳು ರಜಪೂತನಾ ರೈಫ‌ಲ್ಸ್‌ಗೆ ಪ್ರೇರಣೆಯಾಯಿತು.

ಇದನ್ನು ಭಾರತೀಯ ಸೇನೆಯ ಹಳೆಯ ರೈಫ‌ಲ್ಸ್‌ ಎಂದೂ ಪರಿಗಣಿಸಲಾಗಿದೆ. 1775ರ ಜನವರಿಯಲ್ಲಿ ಈ ರೈಫ‌ಲ್ಸ್‌ ಮೊದಲ ಸ್ಥಳೀಯ ಕಾಲಾಳು ಪಡೆ ಘಟಕಗಳನ್ನು ಬೆಳೆಸಿತು. ಇದರಲ್ಲಿ ಐದನೇ ಬೆಟಾಲಿಯನ್‌ಗಳೂ ಆದ ಬಾಂಬೆ ಸಿಪಾಯಿಗಳೂ ಸೇರಿಕೊಂಡವು. 1778 ರಲ್ಲಿ ಒಂಬತ್ತನೇ ಬೆಟಾಲಿಯನ್‌ ಅನ್ನೂ ಬಾಂಬೆ ಸಿಪಾಯ್ಸ… ಎಂದು ಮರುವಿನ್ಯಾಸಗೊಳಿಸಲಾಯಿತು. 1824ರಲ್ಲಿ ಬಾಂಬೆ  ಸ್ಥಳೀಯ ಕಾಲಾಳು ಪಡೆಯ ಅನಂತರ 1881ರಲ್ಲಿ 4ನೇ ರೆಜಿಮೆಂಟ್‌ ಸ್ಥಳೀಯ ಕಾಲಾಳು  ಪಡೆಯನ್ನು ಬ್ರಿಟೀಷ್‌ ಭಾರತೀಯ ಸೈನ್ಯದ ಮೊದಲ ರೈಫ‌ಲ್ಸ್‌ ರೆಜಿಮೆಂಟ್‌ ಎನ್ನಲಾಯಿತು.

1899ರಲ್ಲಿ ಬೆಟಾಲಿಯನ್‌ ಅನ್ನು ಮತ್ತೂಮ್ಮೆ ಬಾಂಬೆ ಕಾಲಾಳು ಪಡೆ ಮತ್ತು 1901ರಲ್ಲಿ ನಾಲ್ಕನೇ ಬಾಂಬೆ ರೈಫ‌ಲ್ಸ್‌ ಎಂದೂ ಮರು ನಾಮಕರಣ ಮಾಡಲಾಯಿತು. ಬಾಂಬೆ ರೈಫ‌ಲ್ಸ್‌ನ ಕ್ರಾಂತಿಕಾರರ ಸ್ಮರಣಾರ್ಥವಾಗಿ 10 ನೇ ವೆಲ್ಲೆಸಿಯ ರೈಫ‌ಲ್ಸ್‌ ಆಗಿ, 1921ರಲ್ಲಿ ಮತ್ತಷ್ಟು ಮರು ಸಂಘಟನೆಯಲ್ಲಿ ಆರು ರೆಜಿಮೆಂಟ್‌ಗಳನ್ನು ಒಟ್ಟುಗೂಡಿಸಿ 6ನೇ ರಜಪೂತನಾ ರೆಜಿಮೆಂಟ್‌ಗಳನ್ನು ರಚಿಸಲಾಯಿತು. ಒಂದನೇ ಮತ್ತು ಎರಡನೇ ಹಾಗೂ ಇನ್ನಿತರ ಬೆಟಾಲಿಯನ್‌ಗಳನ್ನು 1945ರಲ್ಲಿ ಬ್ರಿಟಿಷ್‌ ಭಾರತೀಯ ಸೇನೆಯ ರೆಜಿಮೆಂಟ್‌ಗಳು ತಮ್ಮ ಶೀರ್ಷಿಕೆಗಳಲ್ಲಿ ಅಂಶಗಳನ್ನು ಕೈ ಬಿಟ್ಟವು ಮತ್ತು ಅದರಿಂದ ರಜಪೂತನಾ ರೈಫ‌ಲ್ಸ್‌ ಪ್ರಸ್ತುತ ಹೆಸರನ್ನು ಪಡೆದುಕೊಂಡಿತು.

ಭಾರತೀಯ ಚರಿತ್ರೆಯ ಒಂದೊಂದು ಘಟನೆಗಳು ಇತಿಹಾಸದ ಮೈಲುಗಲ್ಲುಗಳು. ಅಸ್ಸಾಂ ರೈಫ‌ಲ್ಸ್‌, ಪಂಜಾಬ್‌ ರೈಫ‌ಲ್ಸ್‌ ಹೀಗೆ ಹಲವಾರು ತುಕಡಿಗಳು ರಚನೆಗೊಂಡು ಆಯಾ ಕಾಲಘಟ್ಟದ ಆಡಳಿತಾವಧಿಯಲ್ಲಿ ತಮ್ಮದೇ ಛಾಪು ಮೂಡಿಸಿವೆ.  ಅದರಲ್ಲಿ ರಜಪೂತನಾ ರೈಫ‌ಲ್ಸ್‌ ಪಾತ್ರ ಪ್ರಮುಖವಾದುದು.

ಸಾಹಸಗಾಥೆ : ಎರಡನೇ ಆಫ್ಘಾನ್‌ ಯುದ್ಧದ ಸಂದರ್ಭ, ಫ್ರಾನ್ಸ್‌, ಪ್ಯಾಲೆಸ್ತೀನ್‌ ಹೋರಾಟಗಳಲ್ಲಿ ಈ ರೈಫ‌ಲ್ಸ್‌ನ ಪಾತ್ರ ಪ್ರಮುಖ. ರಜಪುತಾನಾ ರೈಫ‌ಲ್ಸ್‌ನ ಗರಿಮೆಗಳೆಂದೇ ಕರೆಯಬಹುದಾದ 1 ಪರಮ ವೀರ್‌ ಚಕ್ರ, 3 ಅಶೋಕ ಚಕ್ರ, 1 ಪದ್ಮಭೂಷಣ, 10 ಮಹಾ ವೀರ ಚಕ್ರ, 28 ಶೌರ್ಯ ಚಕ್ರ, 55 ಅರ್ಜುನ ಪ್ರಶಸ್ತಿ ಇತ್ಯಾದಿಗಳನ್ನು ತನ್ನದಾಗಿಸಿಕೊಂಡಿದೆ.  ಈಗ ರಜಪೂತನಾ ರೈಫ‌ಲ್ಸ್‌ ರೆಜಿಮೆಂಟ್‌ ಮ್ಯೂಸಿಯಂ ದಿಲ್ಲಿಯ ಕಂಟೋನ್ಮೆಂಟ್‌ ಒಳಗಿದೆ. ಈ ವಸ್ತು ಸಂಗ್ರಹಾಲಯವು ಸುಮಾರು 7000 ಚದರ ಅಡಿ ಗಾತ್ರದಲ್ಲಿದೆ. ಇಲ್ಲಿರುವ ತುಕಡಿಗಳ ಶಸ್ತ್ರಾಸ್ತ್ರ, ಸಮವಸ್ತ್ರ, ದೊಡ್ಡ ಸ್ವರೂಪದ ಚಿತ್ರಗಳು ನೋಡುಗರ ಕಣ್ಣಿಗೆ ಇತಿಹಾಸವನ್ನು ಕಟ್ಟಿಕೊಡುತ್ತವೆ. ಇದನ್ನು ಭಾರತದ ಅತ್ಯುತ್ತಮ ಮಿಲಿಟರಿ ಮ್ಯೂಸಿಯಂ ಎಂದು ಪರಿಗಣಿಸಲಾಗಿದೆ.

ಹರೀಶ್‌ ಕಮ್ಮನಕೋಟೆ

ಕುವೆಂಪು ವಿ.ವಿ., ಶಿವಮೊಗ್ಗ

ಟಾಪ್ ನ್ಯೂಸ್

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.