ಅನ್‌ಲಾಕ್‌ನಿಂದ ರಾಜಧಾನಿಯಲ್ಲೀಗ ಲವಲವಿಕ


Team Udayavani, Jul 6, 2021, 10:20 AM IST

Untitled-1

ಬೆಂಗಳೂರು: ಕೋವಿಡ್‌ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ಬಹುತೇಕ ಹೋಟೆಲ್‌ಗ‌ಳಲ್ಲಿ ಜನರು ಕುಳಿತು ಉಪಹಾರ ಸೇವಿದರು. ಗ್ರಾಹಕರಿಲ್ಲದೆ ಸೊರಗಿದ್ದ ಚಿಕ್ಕಪೇಟೆ ಬಟ್ಟೆ ಅಂಗಡಿಗಳ ಗಲ್ಲಿಗಳಲ್ಲೂ ಜನರಿದ್ದರು. ಗಾರ್ಮೆಂಟ್‌, ಕೈಗಾರಿಕೆಗಳು ಅಧಿಕ ಸಂಖ್ಯೆಯ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಿದವು.ಹೀಗಾಗಿ ಎಲ್ಲ ಕಡೆಗಳಲ್ಲಿ ಲವಲವಿಕೆಯ ವಾತಾವರಣ ಕಂಡು ಬಂತು.

ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದ್ದ ಜನರು ಅನ್‌ಲಾಕ್‌ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತರ,ಕುಟುಂಬದವರ ಜತೆಗೆ ಹೋಟೆಲ್‌ಗ‌ಳಿಗೆ ಭೇಟಿ ನೀಡಿ ಕಾಫಿ, ಟೀ ಸವಿದರು. ಸುಮಾರು ಎರಡು ತಿಂಗಳು ಕಾಲ ಮನೆಯಲ್ಲೇ ಇದ್ದವರಿಗೆ ನಿರ್ಬಂಧ ಸಡಿಲಿಕೆ ಸ್ವಾತಂತ್ರ್ಯ ಸಿಕ್ಕಂತಾಗಿತ್ತು.

ಕೊರೊನಾ ಮಾರ್ಗ ಸೂಚಿಯಂತೆ ಹೋಟೆಲ್‌ಗ‌ಳು ಕಾರ್ಯನಿರ್ವಹಿಸಿದ್ದು, ಮಾಸ್ಕ್ಯಿಲ್ಲದೆ ಬರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಮಾಲೀಕರ ಸಂಘದ ಪಿ.ಸಿ. ರಾವ್‌,ಈಹಿಂದೆ ಜನತಾಕರ್ಫ್ಯೂವೇಳೆಪಾರ್ಸಲ್‌ ಸೇವೆನೀಡಿದ್ದ ಗ್ರಾಹಕರಿಗೆ ನೆರವಾಗಿದ್ದ ಹೋಟೆಲ್‌ಗ‌ಳು ಇದೀಗ ಪೂರ್ಣ ಪ್ರಮಾಣದ ಆತಿಥ್ಯ ನೀಡುತ್ತಿವೆ. ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ಚಿಕ್ಕಪೇಟೆಯಲ್ಲಿ ಜವಳಿ ವಹಿವಾಟು: ಹೋಲ್‌ಸೇಲ್‌ ಜವಳಿ ವ್ಯಾಪಾರಕ್ಕೆ ಹೆಸರಾಗಿರುವ ಚಿಕ್ಕಪೇಟೆಯಲ್ಲಿ ಕೋವಿಡ್‌ ಮಾರ್ಗ ಸೂಚಿಯಂತೆ ವ್ಯಾಪಾರ ಪ್ರಕ್ರಿಯೆ ಆರಂಭವಾಗಿದೆ.ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳಭಾಗಗಳಿಂದ ಬಟ್ಟೆ ಖರೀದಿ ದಾದರರು ಚಿಕ್ಕಪೇಟೆಯಿಂದಲೇ ಖರೀದಿ ಆರಂಭಿಸುತ್ತಾರೆ.

ಆದರೆ ಈಗ ಕೇರಳ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಇನ್ನೂ ಲಾಕ್‌ಡೌನ್‌ ತೆರವಾಗಿಲ್ಲ.ಆ ಹಿನ್ನೆಲೆಯಲ್ಲಿ ಇನ್ನೂ ಕೆಲವು ತಿಂಗಳು ಕಾಯುವುದು ಅನಿವಾರ್ಯ ಎಂದು ಬೆಂಗಳೂರು ಹೋಲ್‌ ಸೇಲ್‌ ಕ್ಲಾತ್‌ ಮರ್ಚೆಂಟ್‌ ಅಸೋಸಿ ಯೇಷನ್‌ ಅಧ್ಯಕ್ಷ ಪ್ರಕಾಶ ಪೀರ್ಗಲ್‌ ಹೇಳಿದ್ದಾರೆ.

ಕಾರ್ಮಿಕರು ವಾಪಸ್‌ ಬರಬೇಕಾಗಿದೆ: ಈ ಹಿಂದೆ ಸರ್ಕಾರ ಕೈಗಾರಿಕೆಗಳಲ್ಲಿ ಶೇ.50 ಕಾರ್ಮಿಕರು ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಶೇ.45ಕಾರ್ಮಿಕರುಕೆಲಸಕ್ಕೆ ಹಾಜರಾಗಿದ್ದರು. ಈಗ ಸಂಪೂರ್ಣ ವಿನಾಯ್ತಿ ನೀಡಿರುವ ಹಿನ್ನೆಲೆಯಲ್ಲಿಊರಿಗೆಹೋಗಿರುವಕಾರ್ಮಿಕರುಮತ್ತಷ್ಟು ಸಂಖ್ಯೆ ಯಲ್ಲಿ ಬರಬೇಕಾಗಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಸುಂದರ್‌ ಹೇಳಿದ್ದಾರೆ. ಎಂಜಿನಿಯರ್‌, ಆಟೋಮೊಬೈಲ್‌, ಗಾರ್ಮೆಂಟ್‌ನಲ್ಲಿ ಕಾರ್ಯನಿರ್ವಹಣೆ ಆರಂಭವಾಗಿದೆ. 3ನೇ ಅಲೆಯ ಭಯಕೈಗಾರಿಕಾ ವಲಯವನ್ನುಕಾಡುತ್ತಿದೆ.

ಅಲ್ಲದೆ ಆಭರಣ ಮಳಿಗೆಗಳು, ಪ್ಯಾನ್ಸಿ ಸ್ಟೋರ್‌ಗಳು, ಎಂಪೋರಿಯಂಗಳು, ಶೋ ರೂಂಗಳು,ಕಂಪ್ಯೂಟರ್‌ ಸೇರಿದಂತೆ ಉಪಕರಣ ಮಳಿಗೆಗಳು, ಪುಸ್ತಕದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಕೋವಿಡ್‌ ಮಾರ್ಗಸೂಚಿಯೊಂದಿಗೆಕಾರ್ಯಚಟುವಟಿಕೆ ಆರಂಭಿಸಿದ್ದು ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗಳ ಮುಂದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದು ಕಂಡು ಬಂತು.

 

ದೇಗುಲಗಳಲ್ಲಿ ದರ್ಶನಾವಕಾಶ:

ಕೋವಿಡ್‌ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಹಲವು ದೇವಾಲಯ, ಪ್ರಾರ್ಥನಾಮಂದಿರ ಮತ್ತು ಚರ್ಚೆಗಳಲ್ಲಿ ಭಕ್ತರು

ಕೋವಿಡ್‌ ಮಾರ್ಗ ಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಕೋವಿಡ್‌ನಿರ್ಬಂಧದ ಹಿನ್ನೆಲೆಯಲ್ಲಿ ಬಂದ್‌ಆಗಿದ್ದ ಬನಶಂಕರಿ ದೇವಾಲಯ, ಮಲ್ಲೇಶ್ವರದ ನರಸಿಂಹ ಸ್ವಾಮಿದೇವಾಲಯ ಮತ್ತು ತಿರುಮಲ ಗಿರಿ ದೇವಾಲಯ ಸೇರಿದಂತೆ ನಗರದ ದೇಗುಲಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಾಜಿನಗರ ಸೆಂಟ್‌ ಮೇರಿ ಚರ್ಚ್‌ನಲ್ಲಿ ಭಕ್ತರು ಪಾರ್ಥನೆ ನಡೆಸಿದರು. ಜತೆಗೆಕೆ.ಆರ್‌.ಮಾರುಕಟ್ಟೆಯ ಜಾಮೀಯಾ ಮಸೀದಿಯಲ್ಲಿ ಹಲವು ಸಂಖ್ಯೆಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸಿದರು.

ಹಲವುಕೈಗಾರಿಕೆಗಳುಕಾರ್ಯಾರಂಭ ಮಾಡಿವೆ. ಶೇ.60 ರಷ್ಟು ಮಾತ್ರ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ. ಇನ್ನೂ ಶೇ.40ರಷ್ಟು ಕಾರ್ಮಿಕರು ಕೆಲಸಕ್ಕೆ ಬರಬೇಕಾಗಿದೆ.ಕೆ.ಬಿ.ಅರಸಪ್ಪ, ಕಾಸಿಯಾ ಅಧ್ಯಕ್ಷ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.