ಕುವೈತ್ನಲ್ಲಿ ನೀಟ್ ಬರೆಯಲು ಅವಕಾಶ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
Team Udayavani, Jul 13, 2021, 10:51 PM IST
ನವದೆಹಲಿ: ಪ್ರಸಕ್ತ ಸಾಲಿನ ನೀಟ್ ಅನ್ನು ಕನ್ನಡ, ಪಂಜಾಬ್, ಮಲಯಾಳಂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕುವೈತ್ನಲ್ಲಿರುವ ಭಾರತೀಯ ಸಮುದಾಯದ ವಿದ್ಯಾರ್ಥಿಗಳಿಗೆ ನೀಟ್-ಯುಜಿ ಬರೆಯಲು ಅನುಕೂಲವಾಗುವಂತೆ ಕೇಂದ್ರ ತೆರೆಯಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಹೇಳಿದ್ದಾರೆ.
ಸೆ.12ರಂದು ನಡೆಯಲಿರುವ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿ ಆರಂಭಿಸಿದ್ದಾರೆ. ಮತ್ತೂಂದೆಡೆ, ವೈದ್ಯ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ ಸೆ.12ರಂದು ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ : ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಭಾರತ ರತ್ನ ನೀಡಿ : ರಾಜೇಂದ್ರ ಸೇನ್ ಒತ್ತಾಯ