ಜೀವಿತಾವಧಿಯ ಅಂತಿಮ ಹಂತದಲ್ಲಿ ಸೂಪರ್‌ ರೆಡ್‌ ಜೈಂಟ್‌ ಆರ್ದ್ರಾ ನಕ್ಷತ್ರ!


Team Udayavani, Jul 14, 2021, 6:30 AM IST

ಜೀವಿತಾವಧಿಯ ಅಂತಿಮ ಹಂತದಲ್ಲಿ ಸೂಪರ್‌ ರೆಡ್‌ ಜೈಂಟ್‌ ಆರ್ದ್ರಾ ನಕ್ಷತ್ರ!

ಸೂರ್ಯ ಒಂದು ವರ್ಷದಲ್ಲಿ ಇಪ್ಪತ್ತೇಳು ನಕ್ಷತ್ರಗಳ ಸಮ್ಮುಖದಲ್ಲಿ ಹಾದು ಹೋಗುತ್ತಾನೆ. ಒಂದು ನಕ್ಷತ್ರದಲ್ಲಿ ಹದಿಮೂರೂವರೆ ದಿನಗಳು. ವರ್ಷಕ್ಕೆ ಇಪ್ಪತ್ತೇಳು ನಕ್ಷತ್ರಗಳು. ಅವುಗಳಲ್ಲಿ ಆರ್ದ್ರಾ ನಕ್ಷತ್ರ ಅಂದರೆ ಬೆಟಲ್ಗ್ಯೂಸ್ ಕೂಡಾ ಒಂದು.

ಆಕಾಶದ 88 ನಕ್ಷತ್ರ ಪುಂಜಗಳಲ್ಲಿ ಮಹಾವ್ಯಾಧ ನಕ್ಷತ್ರ ಪುಂಜ ತುಂಬಾ ಸುಂದರ. ಇದರಲ್ಲಿ ವ್ಯಾಧನ ಒಂದು ಭುಜದಲ್ಲಿ ಕೆಂಪಾಗಿ ಹೊಳೆಯುವ ನಕ್ಷತ್ರ ಆರ್ದ್ರಾ. ಸುಮಾರು 550 ಜ್ಯೋತಿ ವರ್ಷ ದೂರದಲ್ಲಿರುವ ಈ ನಕ್ಷತ್ರ ತನ್ನ ಜೀವಿತಾವಧಿಯ ಅಂತಿಮ ಹಂತದಲ್ಲಿದೆ. ಇದೊಂದು ಸೂಪರ್‌ ರೆಡ್‌ ಜೈಂಟ್‌ ಅಂದರೆ ಬೃಹತ್‌ ಕೆಂಪು ದೈತ್ಯ. ಇದೀಗ ಈ ನಕ್ಷತ್ರ ಭಾರೀ ಪ್ರಚಾರದಲ್ಲಿದೆ. ಕಾರಣ ಈ ನಕ್ಷತ್ರ ಸದ್ಯದಲ್ಲೇ ಸಿಡಿದು ಸೂಪರ್‌ ನೋವಾ ಆಗಲಿದೆ. ಹಾಗೇನಾದರೂ ಆದರೆ ಹಗಲಲ್ಲೇ ಈ ನಕ್ಷತ್ರವನ್ನು ಕೆಲವು ದಿನಗಳ ಕಾಲ ನೋಡಬಹುದು. ರಾತ್ರಿಯಂತೂ ಬೆಳದಿಂಗಳ ಹುಣ್ಣಿಮೆಯ ಚಂದ್ರನನ್ನೂ ಮೀರಿಸುವ ಪ್ರಭೆ. ದಿ| ಪ್ರೊ| ಜಿ. ಟಿ. ನಾರಾಯಣ ರಾವ್‌ ಅವರು ಈ ಸೂಪರ್‌ ನೋವಾವನ್ನು “ಕೋಟಿ ಸೂರ್ಯ ಸಮಪ್ರಭಾ’ ಎಂದಿದ್ದಾರೆ. ಈ ಸೂಪರ್‌ ನೋವಾ ಗಳು ಕೋಟಿ ಸೂರ್ಯರ ಪ್ರಭೆಗೆ ಸಮಾನ ಎಂಬುದು ಅವರ ವಿಶ್ಲೇಷಣೆ.

ಹುಟ್ಟಿದ ನಕ್ಷತ್ರದ ಸರಾಸರಿ ಆಯುಷ್ಯ ಸುಮಾರು ಒಂದು ಸಾವಿರ ಕೋಟಿ ವರ್ಷಗಳು. ಸೂರ್ಯ ಹುಟ್ಟಿ ಸುಮಾರು 460 ಕೋಟಿ ವರ್ಷ ಗಳಾಗಿವೆ. ಅದರ ಆಯುಷ್ಯ ಇನ್ನೂ ಸುಮಾರು 540 ಕೋಟಿ ವರ್ಷಗಳಿವೆ ಅದು ಮುಂದಿನ ಹಂತಕ್ಕೆ ಸಾಗಲು. ಈ ನಕ್ಷತ್ರಗಳ ಆಯುಷ್ಯವು ಅವುಗಳ ಪ್ರಾರಂಭದ ದ್ರವ್ಯರಾಶಿಯ ಮೇಲೆ ಅವಲಂಬಿತವಾಗಿರುತ್ತದೆ. ಸೂರ್ಯನ ದ್ರವ್ಯ ರಾಶಿಗಿಂತ ಹೆಚ್ಚಿನ ದ್ರವ್ಯರಾಶಿಯ ಬೃಹನ್ನಕ್ಷತ್ರಗಳ ಆಯುಷ್ಯ, ಬರೇ ಕೆಲವು ಮಿಲಿಯ ವರ್ಷಗಳು. ಆರ್ದ್ರಾ ನಕ್ಷತ್ರ ಒಂದು ಬೃಹನ್ನಕ್ಷತ್ರ. ಅದರ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಗಿಂತ 15 ರಿಂದ 20 ಪಟ್ಟು ಹೆಚ್ಚು. ಇದರ ಗಾತ್ರ ಅದೆಷ್ಟು ದೊಡ್ಡದು ಎಂದರೆ ಸೂರ್ಯನಿಗಿಂತ ಕೆಲವು ಕೋಟಿ ಪಟ್ಟು ದೊಡ್ಡದು. ಒಂದು ವೇಳೆ ನಮ್ಮ ಸೂರ್ಯನ ಸಮೀಪ ಈ ಆರ್ದ್ರಾ ನಕ್ಷತ್ರವನ್ನು ಇರಿಸಿದರೆ ಇದು ಬುಧ, ಶುಕ್ರ, ಭೂಮಿ ಮಂಗಳ ಗ್ರಹಗಳನ್ನು ನುಂಗಿ, ಗುರು ಗ್ರಹದ ವರೆಗೂ ವ್ಯಾಪಿಸುತ್ತದೆ. ಇದರ ಹೊಟ್ಟೆ ಖಾಲಿಯಾಗಿದ್ದರೆ, ಸುಮಾರು ಇಪ್ಪತ್ತು ಕೋಟಿ… ಸೂರ್ಯನಂತಹ ಗೋಲಿಗಳನ್ನು ತುಂಬಬಹುದು.

ಪುನರಪಿ ಜನನಂ ಪುನರಪಿ ಮರಣಂ
ಎಲ್ಲ ನಕ್ಷತ್ರಗಳೂ ಶ್ವೇತ ಕುಬjವಾಗುವುದಿಲ್ಲ ಎಂದು ಸೂರ್ಯನ ದ್ರವ್ಯರಾಶಿಗಿಂತ 1.44 ದ್ರವ್ಯರಾಶಿ ಇರುವ ನಕ್ಷತ್ರಗಳು ಮುಂದಿನ ಹಂತ ಏರುತ್ತವೆ ಎಂದು ಚಂದ್ರಶೇಖರ್‌ ಲಿಮಿಟ್‌ ಮೂಲಕ ಸ್ಪಷ್ಟ ಪಡಿಸಿದವರು ಭಾರತೀಯ ತರುಣ ಪ್ರೊ| ಸುಬ್ರಹ್ಮಣ್ಯಂ ಚಂದ್ರಶೇಖರ್‌ ಅವರು. ಅಂತೆಯೇ ಆರ್ದ್ರಾ ನಕ್ಷತ್ರಗಳಂತಹ ಬೃಹನ್ನಕ್ಷತ್ರಗಳು ಅತೀ ಹೆಚ್ಚಿನ ದ್ರವ್ಯರಾಶಿ ಇರುವಂತಹವು, ಬೇಗ ಬೇಗ ರಕ್ತ ದೈತ್ಯವಾಗಿ ಸೂಪರ್‌ ರೆಡ್‌ ಜೈಂಟ್‌ ಆಗುತ್ತವೆ. ಹೊರ ಕವಚ ಕಳಚಿಕೊಳ್ಳುತ್ತವೆ. ಆನಂತರ ಇಡೀ ನಕ್ಷತ್ರ ತನ್ನ ಪರಮಾಣು ಬೀಜ ಸಮ್ಮಿಲನ ಕ್ರಿಯೆಯಲ್ಲಿ ಮುಂದುವರಿದು ಕಾರ್ಬನ್‌, ಸಿಲಿಕಾನ್‌,… ಹೀಗೆ ಮುಂದುವರಿದು, ಕಬ್ಬಿಣದ ಪರಮಾಣುವಿನವರೆಗೆ ಆಗುತ್ತಿದ್ದಂತೆ ಕೇಂದ್ರದಲ್ಲಿ ಪರಮಾಣು ಬೀಜ ಸಮ್ಮಿಲನ ಕ್ರಿಯೆ ಸ್ಥಗಿತ ಗೊಳ್ಳುತ್ತದೆ. ಈಗ ಇಡೀ ನಕ್ಷತ್ರದ ಗುರುತ್ವ ಬಲ ಹಾಗೂ ಶಕ್ತಿ ಉತ್ಸರ್ಜನೆಯ ವ್ಯಾಕೋಚನ ಬಲಗಳ ಅಸಮತೋಲನದಿಂದ, ಇಡೀ ನಕ್ಷತ್ರ ಸಿಡಿಯುತ್ತದೆ. ಇದೇ ಸೂಪರ್‌ ನೋವಾ!!

ಹೀಗಾದಾಗ ತಿರುಳು ಉಳಿಯಲೂ ಬಹುದು, ಅಥವಾ ಧೂಳಾಗಿ, ಪುನಃ ನೀಹಾರಿಕೆಯಾಗಬಹುದು. ತಿರುಳು ಉಳಿ ದರೆ ನ್ಯೂಟ್ರಾನ್‌ ನಕ್ಷತ್ರವಾಗಿ ಆಕಾಶದಲ್ಲಿ ಅಲೆಯುತ್ತದೆ ಮತ್ತೂ ಬೃಹನ್ನಕ್ಷತ್ರಗಳಲ್ಲಿ ಆ ತಿರುಳು ಕಪ್ಪು ರಂಧ್ರ ಅಥವಾ ಬ್ಲ್ಯಾಕ್‌ ಹೋಲ್‌ ಆಗಿ ವಿಜೃಂಭಿಸುತ್ತವೆ. ಈಗ ತಿಳಿದಿರುವಂತೆ ನಮ್ಮ ಆರ್ದ್ರಾ ನಕ್ಷತ್ರ ಸೂಪರ್‌ ನೋವಾವಾದ ಅಅನಂತರ ನ್ಯೂಟ್ರಾನ್‌ ನಕ್ಷತ್ರವಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿ¨ªಾರೆ.

ಆರ್ದ್ರಾ ಯಾವಾಗ ಸೂಪರ್‌ ನೋವಾ ಆಗಲಿದೆ?
ನಾಳೆಯೇ ಆಗಬಹುದು ಅಥವಾ ಸಾವಿರ ವರ್ಷಗಳ ಅಅನಂತರವೂ ಆಗಬಹುದು, ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಖಗೋಳ ವಿಜ್ಞಾನಿಗಳು. 2019 ಅಕ್ಟೋಬರ್‌ನಿಂದ 2020 ಫೆಬ್ರವರಿ ವರೆಗೆ ಆರ್ದ್ರಾ ನಕ್ಷತ್ರದ ಬೆಳಕು ಅರ್ಧಕ್ಕಿಂತ ಕಡಿಮೆಯಾಗಿ ಗೋಚರಿಸಿದುದರಿಂದ ಖಗೋಳ ವಿಜ್ಞಾನಿಗಳೆಲ್ಲ ಈ ನಕ್ಷತ್ರ ಅಂತಿಮ ಹಂತದಲ್ಲಿದೆ ಎಂದು ಭಾರೀ ಗುÇÉೆಬ್ಬಿಸಿದ್ದರು. ಕೆಲವೇ ದಿನಗಳಲ್ಲಿ ಇದು ಸೂಪರ್‌ ನೋವಾ ಆಗಲಿದೆ ಎಂದು ರಿಂಗಣಿಸಿದರು. ಆದರೆ ಈಗ ಆ ಪ್ರಕ್ರಿಯೆ ಅಲ್ಲಿಗೆ ನಿಂತು ಪುನಃ ಪ್ರಕಾಶಮಾನವಾಗಿ ಆರ್ದ್ರಾ ನಕ್ಷತ್ರ ಕಾಣುತ್ತಿದೆಯಾದ್ದರಿಂದ ಸೂಪರ್‌ ನೋವಾ, ನಾಳೆಯೋ, ಸಾವಿರಾರು ವರ್ಷಗಳ ಅನಂತ ರವೋ ಖಚಿತವಿಲ್ಲವೆನ್ನುತ್ತಿ¨ªಾರೆ ಖಗೋಳ ವಿಜ್ಞಾನಿಗಳು.

ಇನ್ನೂ ಒಂದು ಪ್ರಶ್ನೆ ಎಂದರೆ ಒಂದು ವೇಳೆ ಈ ಆರ್ದ್ರಾ ನಕ್ಷತ್ರ ಸೂಪರ್‌ ನೋವಾ ಆದರೆ ನಮ್ಮ ಭೂಮಿಗೆ ಏನಾದರೂ ತೊಂದರೆ ಇದೆಯೇ? ಖಂಡಿತ ಇಲ್ಲ. ಭೂಮಿಗೆ ಸುಮಾರು 50 ಜ್ಯೋತಿರ್ವರ್ಷಗಳಿಗಿಂತ ಸಮೀಪ ದಲ್ಲಿ ಸೂಪರ್‌ ನೋವಾ ಆದಾಗ ಮಾತ್ರ ತೊಂದರೆ. ಈ ನಕ್ಷತ್ರ 550 ಜ್ಯೋತಿರ್ವರ್ಷಗಳ ದೂರದಲ್ಲಿರುವುದರಿಂದ ಭೂಮಿಗೆ ಯಾವ ತೊಂದರೆಯೂ ಇಲ್ಲ.
ಆರಿದ್ರಾ ಆರಿದರೆ, ಆರಾಮವಾಗಿ ನೋಡಿ ಆನಂದಿಸಬಹುದು!

ಸೂಪರ್‌ ನೋವಾ ಎಂದರೇನು?
ಆರ್ದ್ರಾ, ಜ್ಯೇಷ್ಠ ನಕ್ಷತ್ರಗಳಂತಹ ಬೃಹನ್ನಕ್ಷತ್ರಗಳ ಅಂತಿಮ ಹಂತವೇ ಸೂಪರ್‌ ನೋವಾ. ಎಲ್ಲ ನಕ್ಷತ್ರಗಳೂ ನೀಹಾರಿಕೆ (ಆಕಾಶದಲ್ಲಿ ವ್ಯಾಪಿಸಿರುವ ಧೂಳು)ಗಳಿಂದ ಹುಟ್ಟುವುದು. ನೀಹಾರಿಕೆಗಳ ಉಷ್ಣತೆ ಏರುತ್ತಾ ಸುಮಾರು ಒಂದು ಕೋಟಿ ಕೆಲ್ವಿನ್‌ ಆದಾಗ ಪರಮಾಣು ಬೀಜ ಸಮ್ಮಿಲನ ಕ್ರಿಯೆ, ನ್ಯೂಕ್ಲಿಯರ್‌ ಫ್ಯೂಷನ್‌ ಪ್ರಾರಂಭ. ಹೈಡ್ರೋಜನ್‌, ಹೈಡ್ರೋಜನ್‌ ಸೇರಿ ಹೀಲಿಯಂ ಆಗಿ ಶಕ್ತಿ ಸೃಷ್ಟಿ. ಈ ಶಕ್ತಿ, ದಶ ದಿಶೆಗೆ ವ್ಯಾಪಿಸಿ ನಕ್ಷತ್ರವೊಂದು ಹುಟ್ಟಿತೆಂದು ಡಂಗುರ ಸಾರುತ್ತದೆ. ಇನ್ನು ಸಾವಿರ ಕೋಟಿ ವರ್ಷಗಳ ಅಅನಂತರ ನಕ್ಷತ್ರದ ಉರುವಲು ಹೈಡ್ರೋಜನ್‌ ಖಾಲಿಯಾಗುತ್ತಿದ್ದಂತೆ ನಕ್ಷತ್ರ ಉಬ್ಬಿ ಹೊರಕವಚ ಕೆಂಪಾಗಿ ಕಾಣುತ್ತದೆ. ಇದನ್ನೇ ರಕ್ತದೈತ್ಯ, ರೆಡ್‌ ಜೈಂಟ್‌ ಎನ್ನುತ್ತೇವೆ. ಸೂರ್ಯ, ಈ ರಕ್ತ ದೈತ್ಯ ಸ್ಥಿತಿಯಲ್ಲಿ ಹೊರಕವಚವನ್ನು ಕಳಚಿಕೊಂಡು, ಒಳಗಿನ ತಿರುಳು ಕಾರ್ಬನ್‌ ನಕ್ಷತ್ರವಾಗಿ ಶ್ವೇತ ಕುಬj ಮುಂದೆ ನಂದುತ್ತಾ ಕಪ್ಪು ಕುಬjವಾಗಿ ನಂದಿ, ಧೂಳಾಗಿ ನೀಹಾರಿಕೆಯಾಗುತ್ತದೆ.

– ಡಾ| ಎ. ಪಿ. ಭಟ್‌, ಉಡುಪಿ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.