ಎರೋಟಿಕಾ ವಿಡಿಯೋಗಳನ್ನು ನೀಲಿ ಚಿತ್ರದ ಜೊತೆ ಸೇರಿಸಬೇಡಿ : ರಾಜ್ ಕುಂದ್ರಾ ಪರ ನಿಂತ ಮಾಡೆಲ್!
Team Udayavani, Jul 20, 2021, 4:37 PM IST
ನವದೆಹಲಿ : ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಜುಲೈ 23ರರವರೆಗೆ ಪೊಲೀಸ್ ಕಸ್ಟಡಿ ಸೇರಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪರ ಮಾಡೆಲ್ ಒಬ್ಬರು ಬ್ಯಾಟ್ ಬೀಸಿದ್ದಾರೆ. ರಾಜ್ ಕುಂದ್ರಾ ಪೋರ್ನ್ ವಿಡಿಯೋಗಳನ್ನು ತಯಾರು ಮಾಡುತ್ತಿರಲಿಲ್ಲ ಎಂದು ಟ್ವಿಟ್ಟರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಡೆಲ್ ಗೆಹನಾ ವಸಿಷ್ಠ, ಪೋರ್ನ್ ವಿಡಿಯೋಗಳ ಜೊತೆ ಎರೊಟಿಕಾ ವಿಡಿಯೋಗಳನ್ನು ಸೇರಿಸಬೇಡಿ. ಆ ವಿಡಿಯೋಗಳೇ ಬೇರೆ ಈ ರೀತಿಯ ವಿಡಿಯೋಗಳೇ ಬೇರೆ. ಇದನ್ನು ಪೊಲೀಸರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಎಂದು ಗೆಹನಾ ಹೇಳಿದ್ದಾರೆ.
ಎರೋಟಿಕಾ ರೀತಿಯ ವಿಡಿಯೋಗಳನ್ನು ಬಾಲಿವುಡ್ ಸಿನಿಮಾಗಳಲ್ಲಿ ಬಳಸಲಾಗುತ್ತದೆ. ಏಕ್ತ ಕಪೂರ್ ಅವರ ಗಾಂಧಿ ಬಾತ್ ಚಿತ್ರದಲ್ಲಿ ಈ ರೀತಿಯ ವಿಡಿಯೋಗಳನ್ನು ಬಳಕೆ ಮಾಡಲಾಗಿದೆ ಎಂಡು ಮಾಡಿ ವಿಡಿಯೋದಲ್ಲಿ ತಿಳಿಸಿದ್ದಾಳೆ.