ನಿರಂತರ ತುಂತುರು ಮಳೆ ಕೃಷಿ ಚಟುವಟಿಕೆ ಕುಂಠಿತ


Team Udayavani, Jul 23, 2021, 7:02 PM IST

Agricultural activity

ತುಮಕೂರು: ಮಳೆ ಹೋಗಿ ಮುಗಿಲು ಸೇರೈತೆ, ಬಿತ್ತನೆ ಈವರ್ಷವೂ ಕೈ ಕೊಡಲಿದೆ ಎಂದು ಅಂದುಕೊಂಡಿದ್ದ ರೈತರಿಗೆಹುಸಿಯಾಗುವಂತೆ ಮುಂಗಾರು ಬಿತ್ತನೆ ಮಾಡುವ ಜುಲೈತಿಂಗಳಲ್ಲಿ ಸರಾಸರಿ ವಾಡಿಕೆ ಮಳೆಗಿಂತ ಅಧಿಕ ಮಳೆ ಬಿದ್ದಿದ್ದು,ರೈತರ ಮುಖದಲ್ಲಿ ಮಂದಹಾಸ ಕಂಡುಬಂದಿದೆ.

ಎಲ್ಲ ಹಳ್ಳಿಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಯಲ್ಲಿತಲ್ಲೀನರಾಗಿದ್ದಾರೆ.ಜಿಲ್ಲಾದ್ಯಂತ ಮುಂಗಾರು ಮಳೆ ಜುಲೈ ತಿಂಗಳಲ್ಲಿ ಧಾರಕಾರವಾಗಿ ಸುರಿದಿದೆ. ಜಿಲ್ಲೆಯಲ್ಲಿ ಜನವರಿ 1ರಿಂದ ಆಗಸ್ಟ್‌1ರವರೆಗೆ ವಾಡಿಕೆ ಮಳೆ ಜುಲೈ ಅಂತ್ಯಕ್ಕೆ 368.6 ಮಿ.ಮೀ.ಮಳೆ ಬೀಳಬೇಕು. ಕಳೆದ ವರ್ಷ 361.1 ಮಿ.ಮೀ. ಮಳೆಬಿದ್ದಿದ್ದು, ಈ ವರ್ಷ ಜುಲೈ ಅಂತ್ಯಕ್ಕೆ 319.9 ಮಿ.ಮೀ. ಮಳೆಬಿದ್ದಿದೆ. ವಾಡಿಕೆ ಮತ್ತು ವಾಸ್ತವಿಕ ಮಳೆಗಿಂತ ಈ ಬಾರಿ ಮಳೆಕಡಿಮೆಯಾಗಿದ್ದರೂ, ಜುಲೈ ತಿಂಗಳಲ್ಲಿ ವಾಡಿಕೆ ಮತ್ತು ವಾಸ ¤ವಿಕಮಳೆಗಿಂತ ಅಧಿಕ ಮಳೆ ಬಿದ್ದಿದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ 75.4 ಮಿ.ಮೀ. ಬೀಳಬೇಕು.

ಕಳೆದ ವರ್ಷ ಕೇವಲ 29.3ಮಿ.ಮೀ. ಬಿದ್ದಿತ್ತು. ಈ ವರ್ಷ 132.4 ಮಿ.ಮೀ. ಮಳೆಜಿಲ್ಲಾದ್ಯಂತ ಆಗುತ್ತಿರುವುದು ರೈತರಲ್ಲಿ ಸಂತಸ ಮೂಡಿದೆ.ಆದರೆ, ರೈತರು ಮುಂಗಾರು ಚಟುವಟಿಕೆ ಆರಂಭಿಸಲು ನಿರತರಾದರೆಆಗಾಗಬರವು ನೀಡದೇಕಳೆದಹದಿನೈದು ದಿನಗ ಳಿಂದನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆ ಯಿಂದಕೃಷಿ ಚಟುವಟಿಕೆ ಮಾಡಲು ತೊಂದರೆ ಉಂಟಾಗುತ್ತಿದೆ.
ಕೃಷಿ ಕಾಯಕದಲ್ಲಿ ತಲ್ಲೀನ: ಮಳೆಯಿಂದ ಸ್ವಲ್ಪ ಬರವುನೀಡಿದರೂ ರೈತರು ಸಂತಸದಿಂದ ಕುಟುಂಬ ಸಮೇತವಾಗಿ ಹೊಲಗಳಲ್ಲಿ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸುತ್ತಿದ್ದಾರೆ.ನೇಗಿಲುಹಿಡಿದುಭೂಮಿಯನ್ನುಹಸನು ಮಾಡುತ್ತಿರುವುದುಒಂದೆಡೆಯಾದರೆ, ಇನ್ನು ಕೆಲವು ಕಡೆಗಳಲ್ಲಿ ರಾಗಿ ಸಸಿ ಹಾಕುತ್ತಿರುವುದು, ಕಾಳು ಬಿತ್ತುತ್ತಿರುವುದು ಕಂಡು ಬರುತ್ತಿದ್ದು,ಇಡೀ ಜಿಲ್ಲೆಯಲ್ಲಿ ಜುಲೈ ತಿಂಗಳ ವಾತಾವರಣದಂತೆ ಆಗಸ್ಟ್‌ತಿಂಗಳಲ್ಲೂ ಮಳೆ ಸಮರ್ಪಕವಾಗಿ ಬಂದರೆ ರೈತರಿಗೆ ಹರ್ಷಮೂಡಲಿದೆ.

ಆದರೆ, ಎಲ್ಲಿ ಮಳೆ ಕೈಕೊಡುವುದೋ ಎನ್ನುವಆತಂಕದಿಂದಲೇ ರೈತರು ಕೃಷಿಯಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 4.02 ಲಕ್ಷ ಹೆಕ್ಟೇರ್‌ಬಿತ್ತನೆ ಗುರಿ ಪೈಕಿ ಜುಲೈ 22ಕ್ಕೆ 31 ಸಾವಿರ ಹೆಕ್ಟೇರ್‌ ಮಾತ್ರಬಿತ್ತನೆಯಾಗಿದೆ. ವಾಡಿಕೆಯಂತೆ ಜುಲೈ ಅಂತ್ಯಕ್ಕೆ ಶೇ.56ರಷ್ಟುಬಿತ್ತನೆಯಾಗಬೇಕಿದ್ದು, ಈ ಬಾರಿ ಕಡಿಮೆ ಬಿತ್ತನೆಯಾಗಿರುವುದು ಕಂಡುಬಂದಿದೆ.

ಶೇಂಗಾ ಬಿತ್ತನೆ ಸಂಪೂರ್ಣ ಇಳಿಮುಖ: ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಭಾಗಗಳಲ್ಲಿ ಪ್ರಧಾನಬೆಳೆಯಾಗಿರುವ ಶೇಂಗಾ ಬಿತ್ತನೆ ಈ ಬಾರಿ ಸಂಪೂರ್ಣ ಇಳಿಮುಖವಾಗಿದೆ. ಈ ಭಾಗದಲ್ಲಿ 1.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಬೇಕಾಗಿತ್ತು.

ಕೇವಲ 31 ಸಾವಿರಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.24ರಷ್ಟುಮಾತ್ರ ಪ್ರಗತಿಯಾಗಿದೆ. ಕಳೆದ ವರ್ಷ ಈ ವೇಳೆಗೆ ಶೇ.36ರಷ್ಟು ಬಿತ್ತನೆಯಾಗಿತ್ತು. ಜೂನ್‌-ಜುಲೈ ತಿಂಗಳಲ್ಲಿ ಶೇಂಗಾಬಿತ್ತನೆಗೆ ಸಕಾಲವಾಗಿದೆ. ಆದರೆ, ಜೂನ್‌ ತಿಂಗಳಲ್ಲಿ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ಭಾಗಗಳಲ್ಲಿ ನಿರೀಕ್ಷಿಸಿದಷ್ಟು ಮಳೆ ಬಾರದ ಹಿನ್ನಲೆ ಬಿತ್ತನೆಕುಂಠಿತವಾಗಿದೆ.ರಾಗಿ ಬೆಳೆಯುವ ತಾಲೂಕುಗಳಾದ ತುಮಕೂರು, ಕುಣಿಗಲ್‌, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರುತಾಲೂಕುಗಳಲ್ಲಿ ಈ ವೇಳೆಗೆ ಶೇ.40ರಷ್ಟು ರಾಗಿ ಬಿತ್ತನೆಯಾಗಬೇಕಾಗಿತ್ತು.

ಆದರೆ, ಮಳೆಯ ಅಭಾವದಿಂದ ಬಿñನೆ ‌¤ ಕುಂಠಿತಗೊಂಡಿದೆ. 1.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿñನೆ ‌¤ಮಾಡಬೇಕಾಗಿದ್ದು, 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರಬಿತ್ತನೆಯಾಗಿದ್ದು, ಶೇ.5ರಷ್ಟು ಮಾತ್ರ ಬಿತ್ತನೆ ಯಾಗಿದೆ, ಕಳೆದವರ್ಷ ಶೇ. 18ರಷ್ಟು ಈ ವೇಳೆಗೆ ಬಿತ್ತನೆಯಾಗಿತ್ತು. ಜಿಲ್ಲೆಯಲ್ಲಿರಾಗಿ ಬಿತ್ತನೆಗೆ ಆಗಸ್ಟ್‌ ಮೊದಲ ವಾರದವರೆಗೆ ಕಾಲಾವಕಾಶವಿದೆ. ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಮಳೆ ಬಿದ್ದಿದೆ. ಮಧ್ಯಮಧ್ಯ ಬರವು ನೀಡದ ಹಿನ್ನೆಲೆ ಬಿತ್ತನೆ ಕುಂಠಿತಗೊಂಡಿದೆ. ಮಳೆಬರವು ನೀಡಿದರೆ ರಾಗಿ ಬಿತ್ತನೆಕಾರ್ಯ ಚುರುಕಾಗಲಿದೆ.

ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

12

The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Casino Financial Institution Repayment Methods: A Comprehensive Guide

How to Play Roulette Free Online

How to Win with Free Casino Games Slots

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.