72.46 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ : ನಾಲ್ವರು ವಿಮಾನ ಸಿಬ್ಬಂದಿ ಸೇರಿ 7 ಮಂದಿ ಸೆರೆ
Team Udayavani, Jul 24, 2021, 9:23 PM IST
ನವ ದೆಹಲಿ: ಸುಮಾರು 72.46 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣ ಸಂಬಂಧ ಇಂಡಿಗೋ ಹಾಗೂ ಸ್ಪೈಸ್ ಜೆಟ್ ವಿಮಾನಯಾನ ಕಂಪನಿಯ ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 7 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸೌದಿ ಅರೇಬಿಯಾದ ಜೆಡ್ಡಾದಿಂದ ಆಗಮಿಸಿದ್ದ ಮೂವರನ್ನು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ, ಅವರ ಬಳಿ 22.89 ಲಕ್ಷ ರೂ. ಮೌಲ್ಯದ 517.2 ಗ್ರಾಂ ಚಿನ್ನ ಪತ್ತೆಯಾಗಿತ್ತು.
ವಿಚಾರಣೆ ತೀವ್ರಗೊಳಿಸಿದಾಗ, ಸ್ಪೈಸ್ ಜೆಟ್ ಮತ್ತು ಇಂಡಿಗೋ ಸಿಬ್ಬಂದಿಗೆ ಇನ್ನಷ್ಟು ಚಿನ್ನವನ್ನು ಹಸ್ತಾಂತರಿಸಿರುವುದಾಗಿ ಬಾಯಿಬಿಟ್ಟಿದ್ದಾರೆ. ಈ ಮಾಹಿತಿ ಆಧಾರದಲ್ಲಿ ಉಳಿದ ನಾಲ್ವರನ್ನೂ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ಮತದಾರರ ವಿಶ್ವಾಸ ಗಳಿಸಿ ಚುನಾವಣೆ ಎದುರಿಸಿ : ಗೋವಾದಲ್ಲಿ ಜೆ.ಪಿ ನಡ್ಡಾ ಕಿವಿಮಾತು