ಯಾರಾಗಬಹುದು ಸಿಎಂ: ದೆಹಲಿ ಮಟ್ಟದಲ್ಲಿ ಪ್ರಹ್ಲಾದ ಜೋಶಿ ಬಗ್ಗೆ ಒಲವು?


Team Udayavani, Jul 26, 2021, 3:48 PM IST

pralhad joshi

ಹುಬ್ಬಳ್ಳಿ: ಕೊನೆ ಕ್ಷಣದ ಬದಲಾವಣೆ, ಅಚ್ಚರಿ ವ್ಯಕ್ತಿ, ಜಾತಿಯ ಬಲವಾದ ಚಿಂತನೆಗಳನ್ನು ಹೊರತು ಪಡಿಸಿದರೆ, ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆಯಿಂದ ತೆರವಾದ ಸಿಎಂ ಪಟ್ಟಕ್ಕೆ ದೆಹಲಿ ಮಟ್ಟದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆಯೇ? ಕೆಲ ಮೂಲಗಳು ಹೌದು ಎನ್ನುತ್ತಿವೆ.

ಪ್ರಸ್ತುತದ ಚರ್ಚೆಯಂತೆ ಬಿ.ಎಸ್‌.ಯಡಿಯೂರಪ್ಪ ನಂತರ ಸಿಎಂ ಪಟ್ಟಕ್ಕೆ ಯಾರು ಎಂಬ ವಿಚಾರಕ್ಕೆ ಐದಾರು ಹೆಸರುಗಳು ಕೇಳಿ ಬರುತ್ತಿವೆಯಾದರೂ, ಸಂಘ ಹಾಗೂ ದೆಹಲಿಯ ಬಿಜೆಪಿ ಮೂಲಗಳ ಪ್ರಕಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಗ್ಗೆ ಹೆಚ್ಚಿನ ಒಲವು ಕಂಡು ಬಂದಿದೆಯಾದರೂ, ಅದೆಲ್ಲೂ ವ್ಯಕ್ತವಾಗದೆ ಒಂದು ರೀತಿಯಲ್ಲಿ ಗುಪ್ತಗಾಮಿನಿ ರೂಪದಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಲಿಂಗಾಯತರಲ್ಲದವರನ್ನು ಪಟ್ಟಕ್ಕೆ ತಂದರೆ ಸಮುದಾಯವನ್ನು ಸಮಾಧಾನ ಪಡಿಸುವ, ಇದ್ದ ಬೆಂಬಲ ಮುಂದುವರೆಸುವ ಸವಾಲು ಹೈಕಮಾಂಡ್‌ ಮುಂದೆ ಇದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಳಿಸಿದ ಸಂಭ್ರಮ ಹೊತ್ತಿನಲ್ಲಿಯೇ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಲವು ಸವಾಲು, ಸಮಸ್ಯೆ, ಪ್ರಬಲ ವಿರೋಧದ ನಡುವೆಯೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಾಹಸವನ್ನು ಬಿಜೆಪಿ ಹೈಕಮಾಂಡ್‌ ಮಾಡಿದ್ದು, ಯಡಿಯೂರಪ್ಪ ನಂತರದಲ್ಲಿ ಯಾರನ್ನು ಸಿಎಂ ಪಟ್ಟಕ್ಕೆ ತರುವುದು ಎಂಬ ತೀವ್ರ ಸ್ವರೂಪದ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:ಕೌನ್ ಬನೇಗಾ ಕರ್ನಾಟಕ ಸಿಎಂ ?

ಸಿಎಂ ಸ್ಥಾನಕ್ಕೆ ಪ್ರಮುಖವಾಗಿ ಪ್ರಹ್ಲಾದ ಜೋಶಿ, ಮುರುಗೇಶ ನಿರಾಣಿ, ಅರವಿಂದ ಬೆಲ್ಲದ, ಸಿ.ಟಿ.ರವಿ, ಡಾ. ಅಶ್ವತ್ಥ ನಾರಾಯಣ, ವಿಶ್ವೇಶ್ವರ ಹೆಗಡೆ ಕಾಗೇರಿ ಇನ್ನಿತರರ ಹೆಸರುಗಳು ಸುಳಿದಾಡುತ್ತಿವೆಯಾದರೂ, ಬಿಜೆಪಿ ದೆಹಲಿ ವಲಯದಲ್ಲಿ ಪ್ರಹ್ಲಾದ ಜೋಶಿ ಅವರನ್ನು ಸಿಎಂ ಪಟ್ಟಕ್ಕೆ ತರಲು ಹೆಚ್ಚಿನ ಒಲವು ವ್ಯಕ್ತವಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಜೋಶಿ ಯಾಕೆ?: ಬಿ.ಎಸ್‌.ಯಡಿಯೂರಪ್ಪರಂತಹ ಮಾಸ್‌ ಲೀಡರ್‌ ರನ್ನು  ಕೆಳಗಿಳಿಸಿದ ನಂತರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ತರಬೇಕು ಎಂಬುದರ ಬಗ್ಗೆ ಬಿಜೆಪಿ ಹೈಕಮಾಂಡ್‌ ಎಲ್ಲ ಮಗ್ಗಲಿನ ಚಿಂತನ-ಮಂಥನ, ಮಾಹಿತಿ ಸಂಗ್ರಹ, ರಾಜಕೀಯ ಲಾಭ-ನಷ್ಟ, ಮುಂದಾಗಬಹುದಾದ ಪರಿಣಾಮ ಇವೆಲ್ಲಗಳ ಬಗ್ಗೆಯೂ ಲೆಕ್ಕಾಚಾರಕ್ಕಿಳಿದಿದೆ. 2023ರ ರಾಜ್ಯ ವಿಧಾನಸಭೆ ಚುನಾವಣೆ, ಅದರ ಬೆನ್ನಿಗೆ ಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ನಿರ್ಧಾರಕ್ಕೆ ಮುಂದಡಿ ಇರಿಸಲಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಪ್ರಬಲ ಆಕಾಂಕ್ಷಿಗಳು ಇದ್ದಾಗ್ಯೂ, ದೆಹಲಿ ಮಟ್ಟದಲ್ಲಿ ಪ್ರಹ್ಲಾದ ಜೋಶಿ ಬಗ್ಗೆ ಒಲವು ಹೆಚ್ಚಿದೆ ಎನ್ನಲಾಗುತ್ತಿದೆ. 2023ರ ಚುನಾವಣೆಯಲ್ಲಿ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದರೆ, ಸರಕಾರದ ವರ್ಚಸ್ಸು ಹೆಚ್ಚಿಸುವುದು, ಆಡಳಿತ ಲೋಪಗಳನ್ನು ಸರಿಪಡಿಸಿ, ಜನರ ವಿಶ್ವಾಸ ಗಳಿಸುವತ್ತ ಮಹತ್ವದ ಹೆಜ್ಜೆಗಳನ್ನಿರಿಸುವ ಗುರಿ ಬಿಜೆಪಿ ಹೈಕಮಾಂಡ್‌ ನ‌ದ್ದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರೈಸ್ ಮಿಲ್ ಕ್ಲರ್ಕ್ ಟು ಮುಖ್ಯಮಂತ್ರಿ ಗಾದಿವರೆಗೆ…ಬಿಎಸ್ ಯಡಿಯೂರಪ್ಪ ರಾಜಕೀಯ ಪಯಣ!

ಪ್ರಹ್ಲಾದ ಜೋಶಿ ಅವರು ದೆಹಲಿ ಹೈಕಮಾಂಡ್‌ ನೊಂದಿಗೆ ಉತ್ತಮ ಸಂಬಂಧ ಹಾಗೂ ಸಂಪರ್ಕ ಹೊಂದಿರುವುದು, ಸಂಘದ ಜತೆ ಹೆಚ್ಚಿನ ನಂಟು, ಯಾವುದೇ ಹಗರಣ ಇಲ್ಲದಿರುವುದು, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ಉತ್ತಮ ಸಾಧನೆ ತೋರಿರುವುದು, ಸರಕಾರದ ವರ್ಚಸ್ಸು ಹೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡಬಲ್ಲರು ಎಂಬುದು ಪ್ರಹ್ಲಾದ ಜೋಶಿ ಅವರ ಬಗ್ಗೆ ದೆಹಲಿ ಮಟ್ಟದ ಒಲವು ಎನ್ನಲಾಗಿದೆ.

ರಾಜ್ಯದ ನಾಯಕತ್ವ ಬದಲಾವಣೆ ಚಿಂತನೆ ಕೆಲ ತಿಂಗಳುಗಳಿಂದಲೇ ಬಿಜೆಪಿ ಹೈಕಮಾಂಡ್‌ ವಲಯದಲ್ಲಿ ತನ್ನದೇ ಸಕ್ರಿಯತೆ ಪಡೆದುಕೊಂಡಿದ್ದು, ಯಡಿಯೂರಪ್ಪ ಅವರ ನಂತರದಲ್ಲಿ ಯಾರನ್ನು ತರಬೇಕು, ಯಾರನ್ನು ತಂದರೆ ಆಗುವ ಸಾಧಕ-ಬಾಧಕಗಳೇನು, ಆಗಬಹುದಾದ ಪರಿಣಾಮ ಕುರಿತಾಗಿ ಚರ್ಚೆಯಾಗಿದ್ದು, ಸಿಎಂ ಪಟ್ಟಕ್ಕೆ ಕೇಳಿ ಬರುತ್ತಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹ, ಯಾರು ಸೂಕ್ತವಾಗಬಲ್ಲರು ಎಂಬುದರ ಕುರಿತಾಗಿ ಚರ್ಚಿಸಿದ ನಂತರವೇ ಪ್ರಹ್ಲಾದ ಜೋಶಿ ಅವರ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಅಡ್ಡಿಯಾದೀತೆ ಲಿಂಗಾಯತ ಸಮುದಾಯದ ಆತಂಕ?: ಮುಖ್ಯಮಂತ್ರಿ ಪಟ್ಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಗ್ಗೆ ಒಲವು ವ್ಯಕ್ತವಾಗುವುದಕ್ಕೆ ಸಂಘ ಹಾಗೂ ಬಿಜೆಪಿ ಹೈಕಮಾಂಡ್‌ ಒಲವು ಇದ್ದರೂ, ನಂತರದಲ್ಲಿ ಲಿಂಗಾಯತ ಸಮುದಾಯದ  ಅಸಮಾಧಾನ, ಬಿಜೆಪಿ ಬಗ್ಗೆ ತಾಳಬಹುದಾದ ಅಭಿಪ್ರಾಯದ ಆತಂಕ ಬಿಜೆಪಿ ಹೈಕಮಾಂಡ್‌ ನ್ನು ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಬಲ ಹಾಗೂ ಬೆಂಬಲ ಎಂದರೆ ಲಿಂಗಾಯತ ಸಮುದಾಯವಾಗಿದ್ದು, ಸಮುದಾಯವನ್ನು ಎದುರು ಹಾಕಿಕೊಂಡು, ಮುಂದಿನ ದಿನಗಳಲ್ಲಿ ರಾಜಕೀಯ ಯಶಸ್ಸು ಸುಲಭ ಸಾಧ್ಯವಲ್ಲ ಎಂಬ ಸ್ಪಷ್ಟ ಅರಿವು ಬಿಜೆಪಿ ಹೈಕಮಾಂಡ್‌ ಗೆ ಇದ್ದು, ಇದನ್ನು ಸರಿಪಡಿಸುವುದು, ಲಿಂಗಾಯತ ಸಮುದಾಯದ ಮನೆಗೆದ್ದು, ಈಗಿರುವ ಬೆಂಬಲವನ್ನು ಮುಂದುವರೆಸಿಕೊಂಡು ಹೋಗುವ ಸವಾಲು ಹೇಗೆಂಬ ಗಂಭೀರ ಚಿಂತನೆಯೂ ನಡೆದಿದೆ. ಈ ಅಂಶವೇ ಪ್ರಹ್ಲಾದ ಜೋಶಿ ಅವರಿಗೆ ಬಹುದೊಡ್ಡ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆ: ಮುಂದಿನ ನಡೆಯೇನು? ಪುತ್ರರ ಭವಿಷ್ಯವೇನು?

ಲಿಂಗಾಯತರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಚಿಂತನೆ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಚಿಂತನೆಯಲ್ಲಿ ಒಂದೆರಡು ಹೆಸರುಗಳು ಕೇಳಿ ಬರುತ್ತಿವೆಯಾದರೂ, ಅದರಲ್ಲಿ ಸಚಿವ ಮುರುಗೇಶ ನಿರಾಣಿ ಅವರ ಹೆಸರು ಪ್ರಮುಖವಾಗಿದೆ. ಮುರುಗೇಶ ನಿರಾಣಿ ಹಾಗೂ ಅರವಿಂದ ಬೆಲ್ಲದ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಮುರುಗೇಶ ನಿರಾಣಿ ಉದ್ಯಮ ವಲಯದಿಂದ ಖ್ಯಾತಿ ಪಡೆದಿದ್ದು, ಪಂಚಮಸಾಲಿ ಸಮುದಾಯದ ನಾಯಕರಾಗಿದ್ದಾರೆ.

ಕೆಲವೊಂದು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದು, ಅದರ ಪ್ರತೀಕ ಎನ್ನುವಂತೆ ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭೆ ಉಪ ಚುನಾವಣೆ ಫಲಿತಾಂಶವಾಗಿದೆ. ಮೋದಿಯವರ ವರ್ಚಸ್ಸು, ಲಿಂಗಾಯತರ ಪ್ರಾಬಲ್ಯ, ದಿ. ಸುರೇಶ ಅಂಗಡಿ ಅವರ ಬಗೆಗಿನ ಒಲವು, ರಾಜ್ಯ ಸರಕಾರವೇ ಬೆಳಗಾವಿಯಲ್ಲಿ ಠಿಕಾಣಿ ಹೂಡಿದ್ದು, ಮುಖ್ಯಮಂತ್ರಿಯವರು ಮೂರು ಬಾರಿ ಕ್ಷೇತ್ರ ಸುತ್ತಿದ್ದು, ಸುರೇಶ ಅಂಗಡಿ ಅವರ ಪತ್ನಿಗೆ ಟಿಕೇಟ್‌ ನೀಡಿದ್ದರಿಂದ ಅನುಕಂಪದ ಅಲೆ ಇವೆಲ್ಲವೂ ಇದ್ದರೂ ಅಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದು, ಕೆಲವೇ ಕೆಲವು ಮತಗಳ ಅಂತರದಿಂದ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಪಂಚಮಸಾಲಿ ಸಮಾಜದ ಸಿಟ್ಟು ಕೂಡ ಒಂದು ಎನ್ನಲಾಗುತ್ತಿದೆ. ಇದರ ಶಮನಕ್ಕೂ ಯತ್ನ ನಡೆಯುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಚಿವ ಮುರುಗೇಶ ನಿರಾಣಿ ಅವರ ಕುರಿತಾಗಿಯೂ ಸಮರ್ಪಕ ಮಾಹಿತಿ ಸಂಗ್ರಹ ಕೈಗೊಂಡಿದ್ದು, ನಿರಾಣಿ ಮಾಲಿಕತ್ವದ ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಅಮಿತ್‌ ಶಾ ಅವರು ಬಾದಾಮಿಗೆ ಬಂದಿದ್ದರ ಹಿಂದೆ, ಮುರುಗೇಶ ನಿರಾಣಿ ಅವರು ತಾವು ಕೈಗೊಂಡ ಕಾರ್ಯಗಳು, ಸುಮಾರು 10 ಸಾವಿರ ಜನರಿಗೆ ಉದ್ಯೋಗ ನೀಡಿದ್ದ ಕುರಿತಾಗಿ ಪಕ್ಷದ ಹೈಕಮಾಂಡ್‌ ಗೆ ನೀಡಿದ ಮಾಹಿತಿ ಸರಿ ಇದೆಯೇ ಎಂಬುದನ್ನು ಕಣ್ಣಾರೆ ಕಾಣುವ ಉದ್ದೇಶವೂ ಅಮಿತ್‌ ಶಾ ಅವರಿಗೆ ಇತ್ತು ಎನ್ನಲಾಗುತ್ತಿದೆ.

ಎಲ್ಲ ಲೆಕ್ಕಾಚಾರಗಳ ನಂತರವೂ ಬಿಜೆಪಿ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ ಎಂಬು ಕುತೂಹಲ ಮೂಡಿದೆ. ಯಾರೊಬ್ಬರಿಗೂ ತನಗೆ ಖಾತರಿ ಎಂಬ ವಿಶ್ವಾಸವೂ ಇಲ್ಲದಂತೆ ಬಿಜೆಪಿ ಹೈಕಮಾಂಡ್‌ ರಹಸ್ಯ ಕಾಯ್ದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ರಾಮಕೃಷ್ಣ ಹೆಗಡೆ ರೂಪ ತಾಳಬೇಕು..: ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸರಿಸಿ ಆ ಸ್ಥಾನಕ್ಕೆ ಲಿಂಗಾಯತ ಸಮುದಾಯದವರನ್ನೇ ತಂದರೆ ಸಮುದಾಯ ಹೆಚ್ಚಿನ ರೀತಿಯಲ್ಲಿ ಅಸಮಾಧಾನ ತೋರದು. ಒಂದು ವೇಳೆ ಲಿಂಗಾಯತರಲ್ಲದವರನ್ನು ಪಟ್ಟಕ್ಕೆ ತಂದರೆ ಸಮುದಾಯ ಆಕ್ರೋಶಗೊಳ್ಳುವ, ಇನ್ನೊಂದು ಪಕ್ಷದ ಕಡೆ ವಾಲುವ ಆತಂಕ ಬಿಜೆಪಿ ಹೈಕಮಾಂಡ್‌ ನ್ನು ಕಾಡುತ್ತಿದೆ.

ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಸಿಎಂ ಪಟ್ಟಕ್ಕೆ ಲಿಂಗಾಯತರೇತರರನ್ನು ತಂದರೆ, ಅವರು ರಾಮಕೃಷ್ಣ ಹೆಗಡೆ ಅವರ ರೂಪ ತಾಳಬೇಕಾಗಿದೆ ಎಂಬ ಅನಿಸಿಕೆ ಅನೇಕರದ್ದಾಗಿದೆ. ಇಂದಿಗೂ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯ ತಮ್ಮ ನಾಯಕರು ಎಂದು ಗುರುತಿಸುವ ಪಟ್ಟಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರದ ರಾಮಕೃಷ್ಣ ಹೆಗಡೆ ಅವರಿಗೆ ಪ್ರಮುಖ ಸ್ಥಾನ ನೀಡಿದೆ. ಹೆಗಡೆಯವರ ರೀತಿ ಲಿಂಗಾಯತ ಮತಬ್ಯಾಂಕ್‌ ಗಟ್ಟಿಗೊಳಿಸಿಕೊಂಡು, ಇತರೆ ಸಮಾಜಗಳ ವಿಶ್ವಾಸವನ್ನು ಗಳಿಸಿಕೊಳ್ಳುವ ಸವಾಲು-ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವ ಮನೋಭಾವ, ಜಾಣ್ಮೆಯನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರುವವರು ತೋರಬೇಕಾಗಿದೆ.

ಮೋದಿ ತೀರ್ಮಾನವೇ ಅಂತಿಮ: ಕೇಂದ್ರದಲ್ಲಿ ಸಚಿವರು ಯಾರಾಗಬೇಕು, ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿಟ್ಟಿನಲ್ಲಿ ಏನೇ ಚಿಂತನೆ, ಲೆಕ್ಕಾಚಾರಗಳಿದ್ದರೂ, ಅಂತಿಮ ತೀರ್ಮಾನ ಪ್ರದಾನಿ ನರೇಂದ್ರ ಮೋದಿ ಅವರದ್ದು ಆಗಿರುತ್ತದೆ. ಮೋದಿಯವರು ತಮ್ಮದೇ ನೆಲಗಟ್ಟಿನಲ್ಲಿ ಮಾಹಿತಿ ತರಿಸಿಕೊಂಡು ತುಲನೆ ಮಾಡಿ ನಿರ್ಣಯ ಕೈಗೊಳ್ಳುತ್ತಾರೆ ಎನ್ನಲಾಗುತ್ತದೆ.

ಅಮಿತ್‌ ಶಾ ಅವರು ಇಂತಹ ಆಯ್ಕೆ ವಿಚಾರದಲ್ಲಿ ತಮ್ಮ ಸಲಹೆ ನೀಡುತ್ತಿದ್ದು, ಒಮ್ಮೆ ಮೋದಿಯವರು ತೀರ್ಮಾನ ಮಾಡಿದಕ್ಕೆ ಮರು ಮಾತನಾಡದೆ ಅಮಿತ್‌ ಶಾ ಒಪ್ಪಿಗೆ ಸೂಚಿಸುವ, ಮನಪೂರ್ವಕವಾಗಿ ಬೆಂಬಲಿಸುವ ಕಾರ್ಯ ಮಾಡುತ್ತಾರೆ ಎನ್ನಲಾಗುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲೂ ಅಮಿತ್‌ ಶಾ ಅವರ ನಿಲುವು ಇದೇ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.

ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಏನೆಲ್ಲ ಚಿಂತನೆಗಳಿದ್ದರೂ, ಕೆಲವರು ಹೆಸರು ಮುಂಚೂಣಿಯಲ್ಲಿ ಓಡಿದರೂ, ಮೊದಲ ಯಡಿಯೂರಪ್ಪ ಅವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಜತೆಗೆ ಹೈಕಮಾಂಡ್‌ ಸದ್ಯದ ಚಿಂತನೆಗಳ ಬದಲು ಕೊನೆ ಕ್ಷಣದಲ್ಲಿ ಮಹತ್ವದ ಬದಲಾವಣೆ, ಅಚ್ಚರಿ ವ್ಯಕ್ತಿಯ ಪ್ರತಿಷ್ಠಾಪನೆ ಇಲ್ಲದಿಲ್ಲ.

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.