ವಿನೇಶ್ಗೆ ಟೋಕ್ಯೊ ವಿಮಾನ ಮಿಸ್!
Team Udayavani, Jul 27, 2021, 9:56 PM IST
ಟೋಕ್ಯೊ: ಒಲಿಂಪಿಕ್ಸ್ನಲ್ಲಿ ಭಾರತದ ಬಹುದೊಡ್ಡ ಪದಕ ಭರವಸೆಯಾಗಿರುವ, ಕುಸ್ತಿಪಟು ವಿನೇಶ್ ಫೊಗಾಟ್ ಮಂಗಳವಾರ ಫ್ರ್ಯಾಂಕ್ಫರ್ಟ್ನಲ್ಲಿ ವಿಮಾನ ಮಿಸ್ ಮಾಡಿಕೊಂಡ ಘಟನೆ ಸಂಭವಿಸಿದೆ.
ಅವರು ಫ್ರ್ಯಾಂಕ್ಫರ್ಟ್ನಿಂದ ವಿಮಾನವೇರಿ ಮಂಗಳವಾರ ರಾತ್ರಿ ಟೋಕಿಯೊ ತಲುಪಬೇಕಿತ್ತು. ಹಂಗೇರಿಯಲ್ಲಿ ತರಬೇತಿ ಪಡೆಯುತ್ತಿದ್ದ ವಿನೇಶ್, ಇಯು ವೀಸಾದಡಿ (ಯುರೋಪಿಯನ್ ಯೂನಿಯನ್) ಒಂದು ದಿನ ಹೆಚ್ಚು ಉಳಿದದ್ದೇ ಈ ಎಡವಟ್ಟಿಗೆ ಕಾರಣ. ಅವರ ವೀಸಾ ಅವಧಿ 90 ದಿನವಾಗಿತ್ತು. ಆದರೆ ಅವರು ಬುಡಾಪೆಸ್ಟ್ನಿಂದ ಫ್ರ್ಯಾಂಕ್ಫರ್ಟ್ಗೆ ಬಂದ ಬಳಿಕ ಲೆಕ್ಕ ಹಾಕಿದಾಗ ಇದರ ಅವಧಿ ಒಂದು ದಿನ ಮೀರಿತ್ತು. ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ವಿನೇಶ್ ಮತ್ತವರ ತರಬೇತುದಾರ ವೋಲರ್ ಅಕೋಸ್ ಬುಧವಾರ ಟೋಕ್ಯೊ ತಲುಪಲಿದ್ದಾರೆ ಎಂದು ಐಒಎ ಮೂಲಗಳು ತಿಳಿಸಿವೆ.