ಗೌಳಿ ಶ್ರೀನಗರ ಕಿಟ್ಟಿ ಜೊತೆ ಪಾವನಾ
Team Udayavani, Aug 1, 2021, 4:09 PM IST
ಶ್ರೀನಗರ ಕಿಟ್ಟಿ ನಾಯಕರಾಗಿರುವ “ಗೌಳಿ’ ಚಿತ್ರಕ್ಕೆ ನಟಿ ಪಾವನಾ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಈ ಚಿತ್ರದ ಮೋಷನ್ ಪೋಸ್ಟರ್ಬಿಡುಗಡೆಯಾಗಿದ್ದು, ಕಿಟ್ಟಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ನಾನು ಶ್ರೀನಗರ ಕಿಟ್ಟಿ ಅವರ ಪತ್ನಿಯ ಪಾತ್ರ ಮಾಡುತ್ತಿದ್ದೇನೆ. ಅದಕ್ಕಾಗಿ ವಿಭಿನ್ನ ಲುಕ್ ಇರುತ್ತದೆ. ವಿಶಿಷ್ಟ ಕಥೆ ನನ್ನನ್ನು ಅರಸಿ ಬಂದಿದ್ದಕ್ಕೆ ನನಗೆ ಖುಷಿಯಿದೆ. ನಿರ್ದೇಶಕ ಸೂರ ಎಲ್ಲಾ ಪಾತ್ರಗಳನ್ನು ಬಹಳ ಚೆನ್ನಾಗಿ ಬರೆದುಕೊಂಡಿದ್ದಾರೆ. ಆಗಸ್ಟ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದು ಪಾವನಾ ಗೌಡ ಹೇಳಿದ್ದಾರೆ
ಇದನ್ನೂ ಓದಿ:‘ಶಾರ್ದೂಲ’ ಲಿರಿಕಲ್ ವಿಡಿಯೋ ರಿಲೀಸ್
ಗೌಳಿ ವಿಶಿಷ್ಟ ಅನುಭವ ನೀಡುವ ಸಿನಿಮಾ. ನನ್ನ ಪಾತ್ರವೂ ಹೊಸ ಲುಕ್ ಮತ್ತು ಹೊಸ ರೀತಿಯ ಅಭಿನಯ ಕೇಳುತ್ತದೆ. ಕಥೆ ಬಹಳ ಚೆನ್ನಾಗಿದೆ. ನನ್ನ ಪರ್ಫಾಮೆನ್ಸ್ಗೆ ಹೆಚ್ಚಿನ ಅವಕಾಶವಿದೆ’ ಎಂದಿದ್ದಾರೆ ಪಾವನಾ.
‘ಗೌಳಿ’ ಚಿತ್ರವನ್ನು ಸೋಹನ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ರಘು ಸಿಂಗಮ್ ಎಂಬುವರು ನಿರ್ಮಾಣ ಮಾಡಲಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ನೀಡಲಿದ್ದು, ಪ್ರಜ್ವಲ್ ಗೌಡ ಛಾಯಾಗ್ರಹಣವಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ