ಬಹುಮುಖ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

2021ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದ ಬೆಂ.ದಕ್ಷಿಣ ಜಿಲ್ಲೆಯ ದೊಡ್ಡಬಾನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ

Team Udayavani, Aug 19, 2021, 2:53 PM IST

ಬಹುಮುಖ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

ಬೆಂಗಳೂರು: ಶಾಲೆಯ ಆರ್ಥಿಕ ಸ್ವಾಲಂಬನೆ, ಹಸಿರು ಪರಿಸರ ನಿರ್ಮಾಣ ಕಸದಿಂದ ರಸ, ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕೌಶಲ್ಯದ ಬೋಧನೆ ಹಾಗೂ ಪ್ರಾತ್ಯಕ್ಷಿಕೆಯ ಜತೆ ಜತೆಗೆ ಸರ್ಕಾರದ ವಿವಿಧ ಯೋಜನೆ-ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿರುವ ‌ ಬೆಂಗಳೂರು ದಕ್ಷಿಣ ಲ್ಲೆಯ ದೊಡ್ಡಬಾನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಿ.ಎಂ.ನಾಗರಾಜ ಅವರಿಗೆ 2021ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿ.ಎಂ.ನಾಗರಾಜ ಅವರು ತಮ್ಮ ಸಾಧನೆ ಮತ್ತು ಸಾಧನೆಯ ಹಿಂದಿನ ಶ್ರಮದ ಬಗ್ಗೆ ಉಯವಾಣಿ ಯೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಅಫ್ಘಾನಿಸ್ತಾನದ ಬಹುಕೋಟಿ ಸಂಪತ್ತು ತಾಲಿಬಾನ್ ಉಗ್ರರ ಕೈಗೆ ಸಿಗದು!

ನಿಮ್ಮಬೋಧನೆಯ ವಿಶೇಷತೆಯೇನು?
ಶಿಕ್ಷಕನಾಗಿ ಕೇವಲ ಪಠ್ಯದ ಬೋಧನೆ ಮಾತ್ರ ಮಾಡುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಅತ್ಯಂತ ಸುಲಭವಾಗಿ ಅರ್ಥೈಸುವ ಹಲವು ಪ್ರಯೋಗಗಳನ್ನು ಮಾಡಿ, ವಿದ್ಯಾರ್ಥಿಗಳ ಮೂಲಕವೂ ಅದನ್ನು ಮಾಡಿಸುತ್ತಿದ್ದೇನೆ.

ನಿಮ್ಮ ಸೇವೆ ಎಲ್ಲರಿಗಿಂತ ಮಾದರಿ ಹೇಗೆ?
ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದರೂ, ಬಳಕೆ ಮಾತ್ರ ನಿಂತಿಲ್ಲ. ಹೀಗಾಗಿ ಬಳಕೆಯಾದ ಪ್ಲಾಸ್ಟಿಕ್‌ ಬ್ಯಾಗ್‌ ಇತ್ಯಾದಿಗಳನ್ನು ಉಪಯೋಗಿ ವಿದ್ಯಾರ್ಥಿ ಗಳ ಮೂಲಕವೇ ವಿವಿಧಕರಕುಶವ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದೇನೆ.ಹಾಗೆಯೇ ಜೈವಿಕ ತಾಜ್ಯದ ಸಮರ್ಪಕವಾಗಿ ಸದ್ಬಳಕೆ ಮಾಡಲು ನಾವೇ ಯಂತ್ರವನ್ನು ತಯಾರಿಸಿದ್ದೇವು. ಮಕ್ಕಳಿಗೆ ಜೀವನಕೌಶಲ್ಯದ ಜತೆಗೆ ಪೇಂಟಿಂಗ್‌, ಸೋಪ್‌ ಮೆಂಕಿಂಗ್‌, ಕಾಗದದಿಂದ ಸಿದ್ಧ ಪಡಿಸಬಹುದಾದ ವಿವಿಧ ಮಾದರಿಗಳು,ಕೌಶಲ್ಯಾಧಾರಿತ ವಿವಿಧ ಮಾದರಿಗಳನ್ನು ಸಿದ್ಧಪಡಿಸುವುದನ್ನು ಕಲಿಸುತ್ತಿದ್ದೇನೆ. ವಿಜ್ಞಾನದಲ್ಲಿ ವಿದ್ಯಾರ್ಥಿ ಗಳಿಗೆ ಆಸಕ್ತಿ ಬರಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೆ.

ದಾನಿಗಳಿಂದಬಂದ ಅನುದಾನ ವಿನಿಯೋಗ ಹೇಗೆ?
ದಾನಿಗಳು ಹಾಗೂ ಎನ್‌ಜಿಒ ಮೂಲಕ  ಅನುದಾನ ಕ್ರೋಢೀಕರಿಸಿ ಶಾಲೆಯ ಮೂಲಸೌಕರ್ಯ  ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲತೆ ವಿನಿಯೋಗ ಮಾಡಲಾಗುತ್ತದೆ. 2018-19ರಲ್ಲಿ ಸುಮಾರು 1.45 ಲಕ್ಷ.ರೂ. ಮೌಲ್ಯದ ವಿವಿಧ ಸೌಲಭ್ಯವನ್ನು 151 ವಿದ್ಯಾರ್ಥಿಗಳು ಪಡೆದಿದ್ದಾರೆ. ಎಲ್‌ಇಡಿ ಟಿವಿ, ಸೋಲರ್‌ ಪ್ಯಾನಲ್‌, ಮೈಕ್ರೋಸ್ಕೋಪ್‌,ಸೋಲಾರ್‌ ಲ್ಯಾಂಪ್‌, 10ನೇ ತ‌ರಗತಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ‌ ಹೀಗೆ ದಾನಿಗಳಿಂದ ವಿವಿಧ ಸೌಲಭ್ಯ ವಿದ್ಯಾರ್ಥಿಗಳಿಗೆ ಸಿಗುವಂತಾಗಿದೆ.2019-20 ಹಾಗೂ 2020-21ರಲ್ಲಿ ‌ಸುಮಾರು 9ಲಕ್ಷಕ್ಕೂ ಅಧಿಕ ಮೌಲ್ಯದ ಉತ್ಪನ್ನಗಳು ಹಾಗೂ ಸೌಲಭ್ಯವನ್ನು 330ಕ್ಕೂ ಅಧಿಕ ಮಕ್ಕಳು ಪಡೆದಿದ್ದಾರೆ.

ಪರಿಸರ ಸ್ನೇಹಿ ಕಾರ್ಯಗಳು ಯಾವುವು?
ಉತ್ತರ : ಮಾಹಿತಿ, ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸುಲಭವಾಗಿ ವಿಜ್ಞಾನವನ್ನುಕಲಿಯಲು, ಅರ್ಥೈಸಿಕೊಳ್ಳಲು ಬೇಕಾದ ಅಗತ್ಯ ಕ್ರಮವನ್ನು ಜಾರಿಗೆ ತಂದಿದ್ದೇನೆ. ಶಾಲೆಯಲ್ಲಿ ಮಳೆ ನೀರಕೊಯ್ಲು, ನಿರಂತರ ಸಸಿ ನೆಟ್ಟು ಪೋಷಿಸುವುದು,ಕಸದಿಂದ ವಿವಿಧಕರಕುಶ ವಸ್ತುಗಳನ್ನು ತಯಾರಿಸುವುದು ಹೀಗೆ ವಿವಿಧ ಪರಿಸರ ಸ್ನೇಹಿ ಕ್ರಮಗಳನ್ನು ಶಾಲೆಯಲ್ಲಿ ನಡೆಯುತ್ತಿರುತ್ತದೆ.

ಸಂಪನ್ಮೂಲ ವ್ಯಕ್ತಿಯಾಗಿ ಮಾಡಿರುವ ಕಾರ್ಯವೇನು?
ಕ್ಲಸ್ಟರ್‌ ಸಂಪನೂಲ ವ್ಯಕ್ತಿಯಾಗಿ ಶಿಕ್ಷಣ ಇಲಾಖೆಯ ಕಾರ್ಯಕ್ರಮವನ್ನು ಸಮರ್ಪಕ ಅನುಷ್ಠಾನದ ಜತೆ ಜತೆಗೆ ಸಿಬ್ಬಂದಿ ವರ್ಗಕ್ಕೆ ಕಂಪ್ಯೂಟರ್‌ ತರಬೇತಿ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠಕ್ಕೆ ಬೇಕಾದ ಸಿದ್ಧತೆ, ಬಿಸಿಯೂಟ ಯೋಜನೆಯ ಸಮರ್ಪಕ ಜಾರಿ, ಆರ್‌ಟಿಇ ಅನುಷ್ಠಾನ, ವಿದ್ಯಾಗಮ ಅನುಷ್ಠಾನ ಸೇರಿದಂತೆ 17 ಅಧಿಕ ವಿವಿಧ ಯೋಜನೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದೇನೆ.

ನಾಗರಾಜ್‌ ಹಿನ್ನೆಲೆ
ಚಿತ್ರದುರ್ಗ ಜಿಲ್ಲೆಯ ಹೊಳ್ಕೆರೆ ತಾಲೂಕಿನವರಾದ ನಾಗರಾಜ್‌ ಅವರು ಕುವೆಂಪು ವಿಶ್ವ ವಿದ್ಯಾಲಯದಿಂದ ಎಂ.ಎಸ್ಸಿ ಪದವಿ ಪಡೆದಿದ್ದಾರೆ. 2005ರ ಡಿಸೆಂಬರ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕಾಡಸೋಮಪ್ಪನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕನಾಗಿ ನೇಮಕ ಗೊಂಡು ಸೇವೆ ಆರಂಭಿಸಿದೆ. 8 ವರ್ಷದ ಶಿಕ್ಷಕ ಸೇವೆಯ ನಂತರ ಕೆಲವರ್ಷ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದರು. ಸದ್ಯ, ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡಬಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಮುಂದುವರಿಸುತ್ತಿದ್ದಾರೆ. ಕಳೆದ ಮೂರ್‍ನಾಲ್ಕು ವರ್ಷದಿಂದ ಅವರ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಸದ್ಯ 180 ವಿದ್ಯಾರ್ಥಿಗಳಿದ್ದಾರೆ.

-ರಾಜುಖಾರ್ವಿ ಕೊಡೇರಿ

ಟಾಪ್ ನ್ಯೂಸ್

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.