ಪ್ಯಾರಾಲಿಂಪಿಕ್ಸ್‌ : ಪದಕಗಳ ದಾಖಲೆ ಸ್ಥಾಪಿಸೀತೇ ಭಾರತ? 


Team Udayavani, Aug 24, 2021, 8:00 AM IST

ಪ್ಯಾರಾಲಿಂಪಿಕ್ಸ್‌ : ಪದಕಗಳ ದಾಖಲೆ ಸ್ಥಾಪಿಸೀತೇ ಭಾರತ? 

ಟೋಕಿಯೊ: ಟೋಕಿಯೋದಲ್ಲಿ ಅತ್ಯಧಿಕ 7 ಪದಕ ಗೆದ್ದು ಒಲಿಂಪಿಕ್ಸ್‌ ದಾಖಲೆ ಸ್ಥಾಪಿ ಸಿದ ಭಾರತವೀಗ ಮಂಗಳವಾರ ಆರಂಭವಾಗ ಲಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲೂ ಪದಕಗಳ ದಾಖಲೆ ನಿರ್ಮಿಸೀತೇ ಎಂಬ ಕುತೂಹಲ, ನಿರೀಕ್ಷೆ ದೇಶದ ಕ್ರೀಡಾಭಿಮಾನಿಗಳದ್ದು.

ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತ ಗರಿಷ್ಠ 54 ಕ್ರೀಡಾಪಟುಗಳನ್ನು ಕಳುಹಿಸಿರುವುದರಿಂದ ಪದಕಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದೀ ತೆಂಬುದೊಂದು ಲೆಕ್ಕಾಚಾರ. ಈ ಬಾರಿ 15 ಪದಕಗಳು ಭಾರತಕ್ಕೆ ಒಲಿಯಲಿವೆ, ಇದರಲ್ಲಿ 5 ಚಿನ್ನ ಎಂಬುದಾಗಿ ಚೆಫ್ ಡಿ ಮಿಷನ್‌ ಗುರುಶರಣ್‌ ಸಿಂಗ್‌ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಇದು ಅಸಾಧ್ಯವೇನೂ ಅಲ್ಲ.

ರಿಯೋದಲ್ಲಿ ಬಂಗಾರ ಗೆದ್ದ ದೇವೇಂದ್ರ ಜಜಾರಿಯಾ (ಜಾವೆಲಿನ್‌) ಮತ್ತು ಮರಿ ಯಪ್ಪನ್‌ ತಂಗವೇಲು (ಹೈಜಂಪರ್‌) ಮೇಲೆ ಈ ಬಾರಿಯೂ ದೊಡ್ಡ ನಿರೀಕ್ಷೆ ಇದೆ. ಮತ್ತೋರ್ವ ಜಾವೆಲಿನ್‌ ಎಸೆತಗಾರ, ವಿಶ್ವ ಚಾಂಪಿಯನ್‌ ಖ್ಯಾತಿಯ ಸಂದೀಪ್‌ ಚೌಧರಿ ಮೇಲೂ ಚಿನ್ನದ ಭರವಸೆ ಇರಿಸಿಕೊಳ್ಳಲಾಗಿದೆ.

ಪ್ಯಾರಾ ಆತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ 10 ಪದಕ ಗೆಲ್ಲುವ ಅವಕಾಶ ಇದೆ ಎಂಬುದು ಪ್ಯಾರಾ ಲಿಂಪಿಕ್‌ ಕಮಿಟಿ ಆಫ್ ಇಂಡಿಯಾದ (ಪಿಸಿಐ) ನಂಬಿಕೆ. ಮತ್ತಿಬ್ಬರು ಜಾವೆಲಿನ್‌ ಎಸೆತಗಾರ ರಾದ ಸುಂದರ್‌ ಸಿಂಗ್‌ ಗುರ್ಜಾರ್‌, ಅಜಿತ್‌ ಸಿಂಗ್‌ ಕೂಡ ಪದಕದ ರೇಸ್‌ನಲ್ಲಿÃದ್ದಾರೆ.

ಬ್ಯಾಡ್ಮಿಂಟನ್‌ ಭರವಸೆ:

ಪ್ಯಾರಾಲಿಂಪಿಕ್ಸ್‌ ಕೂಟದಲ್ಲಿ ಇದೇ ಮೊದಲ ಸಲ ಬ್ಯಾಡ್ಮಿಂಟನ್‌ ಸ್ಪರ್ಧೆಯನ್ನು ಅಳವಡಿಸಿದ್ದು, ಭಾರತಕ್ಕೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ. ವಿಶ್ವದ ನಂ.1 ಆಟಗಾರ ಪ್ರಮೋದ್‌ ಭಗತ್‌, ನಂ.2 ಕೃಷ್ಣ ನಗರ್‌, ತರುಣ್‌ ಧಿಲ್ಲಾನ್‌, ಪಾರುಲ್‌ ಪರ್ಮಾರ್‌, ಪಲಕ್‌ ಕೊಹ್ಲಿ ಪದಕ ಗೆದ್ದು ತರಬಲ್ಲರೆಂಬ ನಿರೀಕ್ಷೆ ಬಲವಾಗಿದೆ.

ಆರ್ಚರಿ, ಶೂಟಿಂಗ್‌:

ಮೊನ್ನೆಯ ಒಲಿಂಪಿಕ್ಸ್‌ನಲ್ಲಿ ಶೂಟರ್ ಮತ್ತು ಆರ್ಚರ್ ಕೈಕೊಟ್ಟಿದ್ದರು. ಆದರೆ ಪ್ಯಾರಾಲಿಂಪಿಕ್ಸ್‌ ನಲ್ಲಿ ಹೀಗಾಗಲಿಕ್ಕಿಲ್ಲ ಎಂಬುದೊಂದು ನಂಬಿಕೆ.

ಆರ್ಚರಿಯಲ್ಲಿ ರಾಕೇಶ್‌ ಕುಮಾರ್‌, ಶ್ಯಾಮ ಸುಂದರ್‌ (ಕಂಪೌಂಡ್‌), ವಿವೇಕ್‌ ಚಿಕಾರ, ಹರ್ವಿಂದರ್‌ ಸಿಂಗ್‌ (ರಿಕರ್ವ್‌), ಜ್ಯೋತಿ ಬಲಿಯಾನ್‌ (ಕಂಪೌಂಡ್‌, ಮಿಕ್ಸೆಡ್‌) ನಿಖರ ಗುರಿ ಸಾಧಿಸಿದರೆ ಭಾರತದ ಪದಕ ಸಂಖ್ಯೆಯಲ್ಲಿ ಖಂಡಿತವಾಗಿಯೂ ಹೆಚ್ಚಳವಾಗಲಿದೆ.

ವಿನೋದ್‌ ಕುಮಾರ್‌ (ಡಿಸ್ಕಸ್‌), ಟೇಕ್‌ ಚಂದ್‌ (ಜಾವೆಲಿನ್‌), ಜೈದೀಪ್‌ ಮತ್ತು ಸಕಿನಾ ಖಾತುನ್‌ (ಪವರ್‌ಲಿಫ್ಟಿಂಗ್‌) ಪೋಡಿಯಂ ಏರುವ ಕನಸು ಕಾಣುತ್ತಿದ್ದಾರೆ. ಟಿಟಿ, ಕನೋಯಿಂಗ್‌, ಸ್ವಿಮ್ಮಿಂಗ್‌, ಪವರ್‌ಲಿಫ್ಟಿಂಗ್‌, ಟೇಕ್ವಾಂಡೊ ಸ್ಪರ್ಧೆಗಳಲ್ಲೂ ಭಾರತ ಪಾಲ್ಗೊಳ್ಳಲಿದೆ.

17ನೇ ಕ್ರಮಾಂಕದಲ್ಲಿ ಆಗಮಿಸಲಿದೆ ಭಾರತ : ಮಂಗಳವಾರದ ಉದ್ಘಾಟನಾ ಕಾರ್ಯಕ್ರಮದ ಪಥಸಂಚಲನದಲ್ಲಿ ಭಾರತ 17ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದೆ. ಕೇವಲ 5 ಆ್ಯತ್ಲೀಟ್ಸ್‌ ಮತ್ತು 6 ಮಂದಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮರಿಯಪ್ಪನ್‌ ತಂಗವೇಲು ತ್ರಿವರ್ಣ ಧ್ವಜದೊಂದಿಗೆ ಸಾಗಲಿದ್ದಾರೆ.

ಇದು 16ನೇ ಪ್ಯಾರಾಲಿಂಪಿಕ್ಸ್‌ ಆಗಿದ್ದು, 163 ದೇಶಗಳ 4,500ರಷ್ಟು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 22 ಕ್ರೀಡೆಗಳ ಒಟ್ಟು 540 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಟಾಪ್ ನ್ಯೂಸ್

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB (2)

RCB ಭವಿಷ್ಯ ಮಳೆಯ ಕೈಯಲ್ಲಿ

1-asdad

Cricket; ಭಾರತ ತಂಡಕ್ಕೆ ಗೌತಮ್‌ ಗಂಭೀರ್‌ ಕೋಚ್‌?

1-wewqwqe

Usain Bolt; ನನ್ನ ದಾಖಲೆಗಳಿಗೆ ಸದ್ಯ ಯಾವುದೇ ಗಂಡಾಂತರವಿಲ್ಲ

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

1-reee

Chess: ಸೋತ ಕಾರಣಕ್ಕೆ ಕಂಪ್ಯೂಟರ್‌ ಸ್ಕ್ರೀನ್‌ ಒಡೆದ ಕಾರ್ಲ್ಸನ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

1-panaji

Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.