5G ಆಮೆ ನಡಿಗೆ, ಮತ್ತದರ ಸುತ್ತ ಮುತ್ತ.!

2021 ರಲ್ಲೂ ಸಹ ಪೂರ್ಣಪ್ರಮಾಣದ ನೆಟ್ ವರ್ಕ್ ಆಗಿ ಹೊರಹೊಮ್ಮಲಿಲ್ಲ 5G

Team Udayavani, Aug 24, 2021, 3:01 PM IST

5G is the 5th generation mobile network.

5G ತಂತ್ರಜ್ಞಾನವು, ವೈರ್‌ ಲೆಸ್ ನೆಟ್‌ವರ್ಕ್ ತಂತ್ರಜ್ಞಾನವಾಗಿದೆ. ಅದು ಜನರ ಜೀವನ ಮತ್ತು ಕೆಲಸದ ವಿಧಾನವನ್ನು ಬದಲಾಯಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಈಗಿರುವ 4G ಡೇಟಾ ನೆಟ್‌ ವರ್ಕ್‌ ಗೆ ಕನೆಕ್ಟ್ ಆಗುವ ಸಾಧನಗಳಿಗಿಂತ ಹೆಚ್ಚಿನ ಸಂಖ್ಯೆಯ ಡಿವೈಸ್‌ ಗಳನ್ನು ಕನೆಕ್ಟ್ ಮಾಡಿ, ಮತ್ತಷ್ಟು ವೇಗವಾಗಿ ಆನ್ಲೈನ್ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. 5G ನೆಟ್‌ ವರ್ಕ್‌ ಗಳು 2018 ರಲ್ಲಿ ಯುನೈಟೆಡ್ ಸ್ಟೇಟ್ಸ್ (ಅಮೇರಿಕಾ) ಸೇರಿದಂತೆ ಪ್ರಪಂಚದಾದ್ಯಂತ ಹೊರಹೊಮ್ಮಲು ಆರಂಭಿಸಿದವು. ಆದರೆ, ಪ್ರಸ್ತುತ 2021ರಲ್ಲೂ ಸಹ ಅದು ಪೂರ್ಣಪ್ರಮಾಣದ ನೆಟ್ ವರ್ಕ್ ಆಗಿ ಹೊರಹೊಮ್ಮಲಿಲ್ಲ.

ಹಲವಾರು ಕಾರ್ಪೊರೇಟ್ ಕಂಪನಿಗಳು ಅತಿವೇಗದ ಅಥವಾ ಅತಿದೊಡ್ಡ 5G ನೆಟ್‌ ವರ್ಕ್‌ ಗಳನ್ನು ಪರಿಚಯಿಸಲು ಸ್ಪರ್ಧಿಸುತ್ತಿವೆ ಮತ್ತು ಹೆಲವು ಅಭಿವೃದ್ಧಿಶೀಲ ರಾಷ್ಟ್ರಗಳು 5G ಯನ್ನು ದೇಶಾದ್ಯಂತ ಕಾರ್ಯಗತಗೊಳಿಸಲು ಉತ್ಸುಕರಾಗಿದ್ದಾರೆ. ಏಕೆಂದರೆ ಈ ಹೊಸ ತಂತ್ರಜ್ಞಾನವು ಕೇವಲ ಗ್ರಾಹಕರಿಗೆ ಪ್ರಯೋಜನಕಾರಿಯಲ್ಲದೆ, ವ್ಯಾಪಾರಗಳಿಗೆ, ಮೂಲಸೌಕರ್ಯಗಳನ್ನು ಒದಗಿಸುವ ಮತ್ತು ರಕ್ಷಣಾ ಅಪ್ಲಿಕೇಶನ್‌ ಗಳಿಗೆ ಪರಿವರ್ತಕ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ನಾಡಿನ ಅಭಿವೃದ್ಧಿಗೆ ಪೂರ್ಣಾವಧಿ ಅಧಿಕಾರ ನೀಡಿ :  ಎಚ್‌.ಡಿ.ಕುಮಾರಸ್ವಾಮಿ

4G ಗಿಂತಲೂ ಹೆಚ್ಚಿನ ಡೇಟಾ ವೇಗವನ್ನು 5G ನೀಡಲಿದೆ. ಅದರೊಂದಿಗೆ, ಇತರ ಪ್ರಯೋಜನಗಳೂ ಇವೆ. 5G ಹೆಚ್ಚಿನ ಬ್ಯಾಂಡ್‌ವಿಡ್ತ್ ಅನ್ನು ಹೊಂದಿರುತ್ತದೆ. ಇದರರ್ಥ, ಇದು ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯ ಡಿವೈಸ್‌ಗಳೊಂದಿಗೆ ಸಮಾನ ವೇಗದಲ್ಲಿ ಡೇಟಾ ಹಂಚಿಕೊಳ್ಳುತ್ತದೆ. ಅಂದರೆ ನೀವು ಯಾವುದೇ ಜನನಿಬಿಡ ಪ್ರದೇಶದಲ್ಲಿ ಇದ್ದರೂ ಡೇಟಾ ವೇಗ ಕುಂಠಿತಗೊಳ್ಳುವ ತೊಂದರೆ ಬರುವುದಿಲ್ಲ.

5G ಸುಪ್ತತೆಯನ್ನು (ಸೆಲ್ ಫೋನ್ ಅಥವಾ ಯಾವುದೇ ಸಂಪರ್ಕಿತ ಸಾಧನ ಸರ್ವರ್‌ನಿಂದ ಯಾವುದೇ ವಿಷಯವನ್ನು ವಿನಂತಿ ಮಾಡಲು ಮತ್ತು ಅವರಿಂದ ಪ್ರತಿಕ್ರಿಯೆಯನ್ನು ಪಡೆಯಲು ತೆಗೆದುಕೊಳ್ಳುವ ಸಮಯ) ಸಹ ಕಡಿಮೆ ಮಾಡುತ್ತದೆ. ಅದಲ್ಲದೆ, ಇದು ವಿವಿಧ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ವೇಗ ಹಾಗೂ ಸುಲಭವಾಗಿ ಸಂವಹನವನ್ನು ಮಾಡುತ್ತದೆ (ಉದಾ: ಅಮೆಜಾನ್ ವೆಬ್ ಸೇವೆಗಳು ಮತ್ತು ಮೈಕ್ರೋಸಾಫ್ಟ್ ಅಜೂರ್)

5G ಸಿಗ್ನಲ್‌ಗಳು ಹೊಸ ರೇಡಿಯೋ ತರಂಗಾಂತರಗಳ ಮೇಲೆ ಚಲಿಸುತ್ತವೆ. ಇದಕ್ಕಾಗಿ, ಸೆಲ್ ಟವರ್‌ಗಳಲ್ಲಿ ರೇಡಿಯೋಗಳು ಮತ್ತು ಇತರ ಉಪಕರಣಗಳನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ವೈಯರ್‌ಲೆಸ್ ಕ್ಯಾರಿಯರ್ ಹೊಂದಿರುವ ಸ್ವತ್ತುಗಳ ಪ್ರಕಾರವನ್ನು ಅವಲಂಬಿಸಿಕೊಂಡು, 5G ನೆಟ್ವರ್ಕ್ಅನ್ನು ನಿರ್ಮಿಸಲು ಮೂರು ವಿಭಿನ್ನ ವಿಧಾನಗಳಿವೆ:

  • ಲೋ-ಬ್ಯಾಂಡ್ ನೆಟ್ ವರ್ಕ್ (ವಿಶಾಲ ವ್ಯಾಪ್ತಿ ಪ್ರದೇಶ ಆದರೆ 4G ಗಿಂತ ಕೇವಲ 20% ವೇಗ)
  • ಹೈ-ಬ್ಯಾಂಡ್ ನೆಟ್ ವರ್ಕ್ (ಸೂಪರ್ ಫಾಸ್ಟ್ ವೇಗ ಆದರೆ ಕಠಿಣ ಪ್ರದೇಶಗಳ ಮೇಲೆ ವೇಗವನ್ನು ಕಾಪಾಡಿಕೊಳ್ಳುವುದಿಲ್ಲ)
  • ಮಿಡ್-ಬ್ಯಾಂಡ್ ನೆಟ್‌ ವರ್ಕ್ (ವೇಗ ಮತ್ತು ವ್ಯಾಪ್ತಿಯನ್ನು ಸಮತೋಲನಗೊಳಿಸುತ್ತದೆ).

ಸೂಪರ್‌ ಫಾಸ್ಟ್ 5 ಜಿ ನೆಟ್‌ವರ್ಕ್ ಗಳನ್ನು ನಿರ್ಮಿಸುವ ವಾಹಕಗಳು ಟನ್‌ ಗಳಷ್ಟು ಸಣ್ಣ ಸೆಲ್ ಸೈಟ್‌ ಗಳನ್ನು ಸ್ಥಾಪಿಸಬೇಕು (ಪಿಜ್ಜಾ ಬಾಕ್ಸ್‌ ಗಳ ಗಾತ್ರದಷ್ಟು), ವಿದ್ಯುತ್ ಕಂಬಗಳಿಗೆ, ಗೋಡೆಗಳು ಅಥವಾ ಗೋಪುರಗಳಿಗೆ, ಸಾಮಾನ್ಯವಾಗಿ ಒಂದಕ್ಕೊಂದು ಸಣ್ಣ ಅಂತರದಲ್ಲಿ. ಅದೇ ಕಾರಣಕ್ಕಾಗಿ, ಈ ಸೂಪರ್‌ ಫಾಸ್ಟ್ ನೆಟ್‌ ವರ್ಕ್‌ ಗಳನ್ನು ಹೆಚ್ಚಾಗಿ ನಗರದಿಂದ ನಗರಕ್ಕೆ ನಿಯೋಜಿಸಲಾಗುತ್ತದೆ.

ವೈರ್‌ ಲೆಸ್ ಇಂಡಸ್ಟ್ರೀಸ್ ಟ್ರೇಡ್ ಗ್ರೂಪ್ ಜಿ ಎಸ್‌ ಎಮ್‌ ಎ ಪ್ರಕಾರ, ಅತ್ಯಂತ ವೇಗದ 5G ನೆಟ್ ವರ್ಕ್ ಗಳು 4G LTE ವೇಗಕ್ಕಿಂತ ಕನಿಷ್ಠ 10 ಪಟ್ಟು. ಕೆಲವು ಐಟಿ ತಜ್ಞರು 5G ವೇಗ 100 ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳುತ್ತಾರೆ. ಎರಡು ಗಂಟೆಯ ಚಲನಚಿತ್ರವನ್ನು 10 ಸೆಕೆಂಡುಗಳಿಗಿಂತ ಕಡಿಮೆ ಸಮಯದಲ್ಲಿ ಡೌನ್‌ ಲೋಡ್ ಮಾಡುವಷ್ಟು ವೇಗದಲ್ಲಿರಲಿದೆ. ಇತ್ತ, ಅದೇ ಸಿನಿಮಾವನ್ನು 4G ಯಲ್ಲಿ ಡೌನ್‌ ಲೋಡ್ ಮಾಡಲು 7 ನಿಮಿಷ ಬೇಕಾಗುತ್ತದೆ. ಒಟ್ಟಾರೆ, ನಿಜವಾದ ಡೌನ್‌ ಲೋಡ್ ವೇಗವು ಸ್ಥಳ ಮತ್ತು ನೆಟ್‌ ವರ್ಕ್ ಟ್ರಾಫಿಕ್ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

5G ನೆಟ್‌ ವರ್ಕ್‌ ನ ಪ್ರಯೋಜನಗಳನ್ನು ಪಡೆಯಲು, ಗ್ರಾಹಕರು 5G ಬೆಂಬಲಿಸುವ ಸಾಧನಗಳನ್ನು ಹೊಂದಿರಬೇಕು. ಸ್ಯಾಮ್‌ ಸಂಗ್, ಮೊಟೊರೊಲಾ, ಹುವಾವೇ, ಎಲ್‌ಜಿ, ಒನ್‌ ಪ್ಲಸ್ ಮತ್ತು ಇತರ ಹಲವಾರು ತಯಾರಕ ಸಂಸ್ಥೆಗಳು 5G ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಕೆಲವು ಕಂಪನಿಗಳು, ತಯಾರಕರು 5G ನೆಟ್‌ವರ್ಕ್ಗಳನ್ನು ಸ್ಥಾಪಿಸಲು ಕ್ಯಾರಿಯರ್‌ಗಳೊಂದಿಗೆ ಕೆಲಸ ಮಾಡುತ್ತಿವೆ.

ಸಂಪೂರ್ಣ 5G ತಂತ್ರಜ್ಞಾನ ಅಳವಡಿಸಲು ಹಲವು ವರ್ಷಗಳೇ ಬೇಕಾಗಬಹುದು. ಒಂದು ಅಂದಾಜಿನ ಪ್ರಕಾರ, 2025ರ ವೇಳೆಗೆ ಸುಮಾರು ಅರ್ಧದಷ್ಟು ಮೊಬೈಲ್ ಡಿವೈಸ್‌ ಗಳು 5G ಆಗಿರುತ್ತದೆ(ಉಳಿದವು 4G ಅಥವಾ 3Gಯಲ್ಲೇ ಇರಲಿದೆ). ಎಲ್ಲಾ ತಂತ್ರಜ್ಞಾನದಂತೆ, 5Gಯಲ್ಲೂ ಕೆಲವೊಂದಿಷ್ಟು ನ್ಯೂನತೆಗಳನ್ನು ಕಾಣಬಹುದು. ಪ್ರಸ್ತುತ ಅದು ಸ್ಪಷ್ಟವಾಗಿ ಇರದಿದ್ದರೂ, ಹೆಚ್ಚಿನ ಸಾಧನಗಳು ಕೈ ಜೋಡಿಸಿದಾಗ, ಹಿನ್ನಡೆಗಳು ಕಾಣಬಹುದು. ಸೆಲ್ಫ್ ಡ್ರೈವಿಂಗ್ ಕಾರುಗಳು ಮತ್ತು ಹೆಲ್ತ್‌ಕೇರ್ ಸಿಸ್ಟಂಗಳನ್ನು 5G ನೆಟ್‌ ವರ್ಕ್‌ ನ ಮೇಲೆ ನಿರ್ಮಿಸಲಾಗುವುದರಿಂದ, ಅದರ ಸುರಕ್ಷತೆ ಬಗ್ಗೆ ಹಲವರಲ್ಲಿ ಆತಂಕವಿದೆ.

-ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕೆಂದರೆ ಜೈಲಿಗೆ ಹೋಗಬೇಕು: ಸಿ.ಟಿ.ರವಿ ವ್ಯಂಗ್ಯ

ಟಾಪ್ ನ್ಯೂಸ್

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.