ಯುಎಸ್ ಗ್ರ್ಯಾನ್ ಸ್ಲ್ಯಾಮ್ ನಿಂದ ಹಿಂದೆ ಸರಿದ ಸೆರೆನಾ
Team Udayavani, Aug 25, 2021, 9:15 PM IST
ನ್ಯೂಯಾರ್ಕ್: ಅಮೆರಿಕದ ಸೆರೆನಾ ವಿಲಿಯಮ್ಸ್ ತವರಿನ ಯುಎಸ್ ಓಪನ್ ಗ್ರ್ಯಾನ್ಸ್ಲ್ಯಾಮ್ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.
ಬಲಗಾಲಿನ ಮಂಡಿಯ ಸ್ನಾಯು ಸೆಳೆತದಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಸೆರೆನಾ ಅವರ ಈ ನಿರ್ಧಾರ ತವರಿನ ಟೆನಿಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈಗಾಗಲೇ ರೋಜರ್ ಫೆಡರರ್, ರಫಾಯೆಲ್ ನಡಾಲ್ ಕೂಡ ವರ್ಷಾಂತ್ಯದ ಈ ಕೂಟದಿಂದ ದೂರ ಸರಿದಿದ್ದು, ಕೂಟದ ಆಕರ್ಷಣೆ ಅಷ್ಟರಮಟ್ಟಿಗೆ ಕಡಿಮೆ ಆಗಲಿದೆ.
ಮುಂದಿನ ತಿಂಗಳು 40ನೇ ವರ್ಷಕ್ಕೆ ಕಾಲಿಡಲಿರುವ ಸೆರೆನಾ ವಿಲಿಯಮ್ಸ್ಗೆ ಕಳೆದ ವಿಂಬಲ್ಡನ್ ಟೂರ್ನಿಯ ವೇಳೆಯೇ ಈ ಸಮಸ್ಯೆ ತಲೆದೋರಿತ್ತು. 23 ಗ್ರ್ಯಾನ್ಸ್ಲ್ಯಾಮ್ ಗೆದ್ದಿರುವ ಸೆರೆನಾ, ಇನ್ನೊಂದು ಪ್ರಶಸ್ತಿ ಜಯಿಸಿದರೆ ಮಾರ್ಗರೆಟ್ ಕೋರ್ಟ್ ಅವರ ಸಾರ್ವಕಾಲಿಕ 24 ಗ್ರ್ಯಾನ್ಸ್ಲ್ಯಾಮ್ಗಳ ದಾಖಲೆಯನ್ನು ಸರಿದೂಗಿಸುತ್ತಿದ್ದರು. ಗುರುವಾರ ಯುಎಸ್ ಓಪನ್ ಡ್ರಾ ನಡೆಯಲಿದ್ದು, ಆ. 30ರಂದು ಪಂದ್ಯಾವಳಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ