‘ಹ್ಯಾಪಿಲಿ ಮ್ಯಾರೀಡ್‌’ ಸ್ಟೋರಿ: ಪೃಥ್ವಿ ಅಂಬಾರ್‌-ಮಾನ್ವಿತಾ ಕಾಮತ್‌ ಜೋಡಿಯ ಹೊಸ ಚಿತ್ರ

Team Udayavani, Sep 2, 2021, 3:36 PM IST

‘ಹ್ಯಾಪಿಲಿ ಮ್ಯಾರೀಡ್‌’ ಸ್ಟೋರಿ: ಪೃಥ್ವಿ ಅಂಬಾರ್‌-ಮಾನ್ವಿತಾ ಕಾಮತ್‌ ಜೋಡಿಯ ಹೊಸ ಚಿತ್ರ

“ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ಹಾಗೂ “ಟಗರು’ ಪುಟ್ಟಿ ಮಾನ್ವಿತಾ ಕಾಮತ್‌ ಮೊದಲ ಬಾರಿಗೆ ತೆರೆಮೇಲೆ ಹೊಸ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ “ಹ್ಯಾಪಿಲಿ ಮ್ಯಾರೀಡ್‌’ ಎಂದು ಹೆಸರಿಡಲಾಗಿದೆ.

ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅಭಿನಯದ “ಲೈಫ್ ಈಸ್‌ ಬ್ಯುಟಿಫ‌ುಲ್’ ಚಿತ್ರಕ್ಕೆ ನಿರ್ದೇಶನ ಮಾಡಿರುವ ಅರುಣ್‌ ಕುಮಾರ್‌. ಎಂ ಮತ್ತು ಸಬು ಅಲೋಷಿಯಸ್‌ ಜಂಟಿಯಾಗಿ ನಿರ್ದೇಶನ ಮಾಡುತ್ತಿರುವ “ಹ್ಯಾಪಿಲಿ ಮ್ಯಾರೀಡ್‌’ ಚಿತ್ರಕ್ಕೆ “ಫ್ರೈಡೇ ಫಿಲಂಸ್‌’ ಬ್ಯಾನರ್‌ನಲ್ಲಿ ಲೋಹಿತ್‌ ಹೆಚ್‌. ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

“ಸಿಲ್ವರ್‌ಟ್ರೈಲ್‌ ಇಂಟರ್‌ನ್ಯಾಶನಲ್‌’ ಮತ್ತು “ಟಿನಿ ಹ್ಯಾಂಡ್ಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ “ಹ್ಯಾಪಿಲಿ ಮ್ಯಾರೀಡ್‌’ಗೆ ಬಿ. ಜಿ ಅರುಣ್‌, ಜೋಸ್‌ಕುಟ್ಟಿ ಮದತ್ತಿಲ್‌ ಮತ್ತು ರಂಜಿತ್‌ ಮನಂಬರಕ್ಕಟ್‌ ಸಹ ನಿರ್ಮಾಣವಿದೆ.

ಇದನ್ನೂ ಓದಿ:ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಫೋಟೋ ಗ್ಯಾಲರಿ

ಅತಿಯಾಗಿ ಪ್ರೀತಿಸಿ ಮದುವೆಯಾದ ಪ್ರೇಮಿಗಳ ಧೋರಣೆ ಮತ್ತು ಗುಣಗಳಿಂದ ಸಂಬಂಧಗಳು ಹೇಗೆ ಒಡೆದು ಹೋಗುತ್ತದೆ ಎನ್ನುವುದರ ಸುತ್ತ ಚಿತ್ರ ಸಾಗಲಿದ್ದು, ಲವ್‌ಕಂ ಫ್ಯಾಮಿಲಿ ಥ್ರಿಲ್ಲರ್‌ ಶೈಲಿಯಲ್ಲಿ “ಹ್ಯಾಪಿಲಿ ಮ್ಯಾರೀಡ್‌’ ಚಿತ್ರ ತೆರೆಗೆ ಬರುತ್ತಿದೆ. ಇದರ ಜೊತೆಗೆ ಬರುವ ಒಂದಷ್ಟು ವಿಭಿನ್ನ ಪಾತ್ರಗಳು ಚಿತ್ರದಕಥೆಗೆ ತಿರುವು ನೀಡಲಿದ್ದು, ಮನುಷ್ಯನಲ್ಲಿರುವ ಒಳಿತು-ಕೆಡುಕುಗಳನ್ನು ತೆರೆದಿಡುತ್ತಾ ಸಾಗುತ್ತದೆ.

ಮನೋ ವೈಜ್ಞಾನಿಕ ಆಟದಲ್ಲಿ ಮುಂದೇನು ಎನ್ನುವಂತ ಸನ್ನಿವೇಶಗಳು ನೋಡುಗನಿಗೆಕುತೂಹಲ ಹುಟ್ಟಿಸುತ್ತದೆ. ಒಂದು ಮಾಮೂಲಿ ಜಗಳ ತಾರಕಕ್ಕೆ ಹೋದಾಗ ಏನಾಗುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ ಎಂದು ಕಥಾಹಂದರದ ವಿವರಣೆ ನೀಡುತ್ತದೆ ಚಿತ್ರತಂಡ.

ಇನ್ನು “ಹ್ಯಾಪಿಲಿ ಮ್ಯಾರೀಡ್‌’ ಚಿತ್ರದಲ್ಲಿ ಪೃಥ್ವಿ ಅಂಬಾರ್‌ ಹಾಗೂ ಮಾನ್ವಿತಾ ಕಾಮತ್‌ ಅವರೊಂದಿಗೆ ಧರ್ಮಣ್ಣ ಕಡೂರ್‌, ಶ್ರೀಜಿತ್‌ ರವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಶುರು ಮಾಡಿರುವ ಚಿತ್ರತಂಡ, ಬೆಂಗಳೂರು ಸುತ್ತಮುತ್ತ ಸುಮಾರು ಎರಡು ವಾರಗಳ ಚಿತ್ರೀಕರಣ ಮುಗಿಸಿದೆ. ಉಳಿದಂತೆ “ಹ್ಯಾಪಿಲಿ ಮ್ಯಾರೀಡ್‌’ ಚಿತ್ರದಲ್ಲಿ ಹಾಡುಗಳಿಗೆ ಅವಕಾಶ ಇರುವುದಿಲ್ಲವಂತೆ.

ಚಿತ್ರಕ್ಕೆ ಜಿತಿನ್‌ ದಾಸ್‌ ಛಾಯಾಗ್ರಹಣ, ಎಂ.ಜೆ ವಿನಯನ್‌ ಸಂಕಲನವಿದೆ. ಇತ್ತೀಚೆಗೆ “ಹ್ಯಾಪಿಲಿ ಮ್ಯಾರೀಡ್‌’ ಚಿತ್ರದ ಮೊದಲ ಮೋಶನ್‌ ಪೋಸ್ಟರ್‌ ಅನ್ನು ಕ್ರೇಜಿಸ್ಟಾರ್‌ ರವಿಚಂದ್ರನ್‌ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಟಾಪ್ ನ್ಯೂಸ್

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

SSLC Exam Result; Here is the district wise result list

SSLC Exam Result; ಇಲ್ಲಿದೆ ಜಿಲ್ಲಾವಾರು ಫಲಿತಾಂಶ ಪಟ್ಟಿ

5-koratagere

Koratagere: ಹಲಸಿನ ಮರದಿಂದ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

sslc

SSLC ಫಲಿತಾಂಶ ಪ್ರಕಟ; ಶೇ. 73.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ; ಉಡುಪಿ ಜಿಲ್ಲೆ ಪ್ರಥಮ

ದಿಢೀರ್ ರಜೆ ಹಾಕಿದ ಸಿಬ್ಬಂದಿ… 30 ಉದ್ಯೋಗಿಗಳನ್ನು ವಜಾಗೊಳಿಸಿದ Air India Express

Mass Sick Leave… 30 ಸಿಬ್ಬಂದಿಗಳನ್ನು ವಜಾಗೊಳಿಸಿದ Air India Express

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

Sandalwood: ಈತ ಊರ ಬೆಳೆಸೋ ಜಂಟಲ್‌ಮ್ಯಾನ್‌; ರಾಮನ ಅವತಾರ ಬಗ್ಗೆ ರಿಷಿ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

SSLC Exam Result; Here is the district wise result list

SSLC Exam Result; ಇಲ್ಲಿದೆ ಜಿಲ್ಲಾವಾರು ಫಲಿತಾಂಶ ಪಟ್ಟಿ

5-koratagere

Koratagere: ಹಲಸಿನ ಮರದಿಂದ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

Gangavathi: ಬಿರುಗಾಳಿ ಮಳೆಗೆ ಬಾಳೆ ತೋಟ ಸೇರಿ ಅಪಾರ ಪ್ರಮಾಣದ ಹಾನಿ

sslc

SSLC ಫಲಿತಾಂಶ ಪ್ರಕಟ; ಶೇ. 73.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ; ಉಡುಪಿ ಜಿಲ್ಲೆ ಪ್ರಥಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.