ಭಾರತದ ಅಂತಾರಾಷ್ಟ್ರೀಯ ಗಡಿ ಪ್ರದೇಶಕ್ಕೆ ಚೀನಾದಿಂದ ಹೊಸ ಕಮಾಂಡರ್
Team Udayavani, Sep 7, 2021, 7:07 PM IST
ಬೀಜಿಂಗ್: ಭಾರತದ ಜತೆಗೆ ಇರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿನ ಸೇನೆಯ ಉಸ್ತುವಾರಿಗಾಗಿ ಚೀನಾ ಹೊಸ ಕಮಾಂಡರ್ ಒಬ್ಬರನ್ನು ನೇಮಕ ಮಾಡಿದೆ.
ಭಾರತದ ಗಡಿಗುಂಟ ಹೊಂದಿರುವ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ನ ಮುಖ್ಯಸ್ಥರನ್ನಾಗಿ ಜ.ವಾಂಗ್ ಹೈಜಿಯಾಂಗ್ ಎಂಬವರನ್ನು ನೇಮಕ ಮಾಡಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆದೇಶ ಹೊರಡಿಸಿದ್ದಾರೆ.
ಜ. ವಾಂಗ್ ಮತ್ತು ಇತರ ನಾಲ್ವರು ಸೇನಾಧಿಕಾರಿಗಳಿಗೆ ಪದೋನ್ನತಿ ನೀಡುವ ಮೂಲಕ ಹೊಸ ಹುದ್ದೆಯನ್ನೂ ನೀಡುವ ಬಗ್ಗೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾದ ಕೇಂದ್ರ ಸೇನಾ ಆಯೋಗ ತೀರ್ಮಾನಿಸಿದೆ.
ಕಳೆದ ವರ್ಷದ ಮೇನಲ್ಲಿ ಪೂರ್ವ ಲಡಾಖ್ನಲ್ಲಿ ಉಂಟಾಗಿದ್ದ ಸಂಘರ್ಷದ ಬಳಿಕ ನೇಮಕಗೊಳ್ಳುತ್ತಿರುವ ನಾಲ್ಕನೇ ಕಮಾಂಡರ್ ವಾಂಗ್.
ಇದನ್ನೂ ಓದಿ :ಗಣಪತಿ ಮೂರ್ತಿ ತಯಾರಿಸುವ ಮುಸ್ಲಿಂ ಕುಟುಂಬ: ಕೋಮು ಸೌಹಾರ್ದ ಸಂದೇಶ ಸಾರುವ ಅಲ್ಲಾಬಕ್ಷ