ಉಳ್ಳಾಲ : ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದ ಬಾಲಕ ಪವಾಡಸದೃಶ ಪಾರು
Team Udayavani, Sep 20, 2021, 1:55 PM IST
ಉಳ್ಳಾಲ : ಕಾರಿನಡಿಗೆ ಬಿದ್ದ ಬಾಲಕನೋರ್ವ ಪವಾಡಸದೃಶವಾಗಿ ಪಾರಾದ ಘಟನೆ ಬಂಟ್ವಾಳದ ಇರಾ ಬಳಿ ನಡೆದಿದೆ. ಘಟನೆ ಕುರಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೈಸೂರು ಮೂಲದ ಇಂಜಿನಿಯರ್ ಆಗಿರುವ ಶಿವಾನಂದ್ ಎಂಬವರ ಪುತ್ರ ಮನೋಜ್ (12) ಗಾಯಾಳು ಬಾಲಕ.
ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ಕಾರು ಆತನ ಮೇಲೆ ಹರಿದಿದೆ. ಕಾರಿನಡಿಗೆ ಬಾಲಕ ಬಿದ್ದು ಎಡಕಾಲು ಮುರಿತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.
ಇದನ್ನೂ ಓದಿ :ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ