ಭೂಸೇನೆಗೆ 118 ಯುದ್ಧ ಟ್ಯಾಂಕ್ ಖರೀದಿ; ಯುದ್ಧ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಕ್ರಮ
Team Udayavani, Sep 23, 2021, 9:30 PM IST
ನವದೆಹಲಿ: ಭೂಸೇನೆಗೆ 7,523 ಕೋಟಿ ರೂ. ವೆಚ್ಚದಲ್ಲಿ 118 ಯುದ್ಧ ಟ್ಯಾಂಕ್ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ಇದರಿಂದಾಗಿ ಭೂಸೇನೆಯ ಶಕ್ತಿ ಮತ್ತಷ್ಟು ವೃದ್ಧಿಯಾಗಲಿದೆ.
ಚೆನ್ನೈನ ಆವಡಿಯಲ್ಲಿರುವ ಹೆವಿ ವೆಹಿಕಲ್ ಫ್ಯಾಕ್ಟರಿ (ಎಚ್ವಿಎಫ್)ಯಲ್ಲಿ ಅರ್ಜುನ ಎಂಕೆ-1ಎ ಯುದ್ಧ ಟ್ಯಾಂಕ್ಗಳನ್ನು ಉತ್ಪಾದಿಸಲಾಗುತ್ತದೆ. ಹೊಸ ಮಾದರಿಯ ಟ್ಯಾಂಕ್, ಸದ್ಯ ಸೇನೆಯಲ್ಲಿ ಕಾರ್ಯವೆಸಗುತ್ತಿರುವ ಅರ್ಜುನ ಟ್ಯಾಂಕ್ನ ಸುಧಾರಿತ ಆವೃತ್ತಿಯಾಗಿದೆ. ಅದರ ಗುಂಡು ಹಾರಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಜತೆಗೆ ಬಾಳಿ ಕೆ, ಚಲನಾ ಸಾಮರ್ಥ್ಯ ಸೇರಿದಂತೆ 72 ಹೊಸ ಅಂಶಗಳನ್ನು ಅದರಲ್ಲಿ ಸೇರ್ಪಡೆ ಮಾಡಲಾಗಿದೆ.
ಇದನ್ನೂ ಓದಿ:ನ್ಯಾಯಾಧೀಶರ ಸಾವು ಉದ್ದೇಶಪೂರ್ವಕ ಕೊಲೆ! ಧನಬಾದ್ ಕೇಸ್ನಲ್ಲಿ ಸಿಬಿಐ ನಿಲುವು
“ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಹೊಸ ಮಾದರಿಯ ಅರ್ಜುನ ಟ್ಯಾಂಕ್ಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ಈ ಮೂಲಕ ಆತ್ಮನಿರ್ಭರ ಭಾರತ ಕಲ್ಪನೆ ಸಾಕಾರಗೊಳಿಸುವತ್ತ ಹೆಜ್ಜೆ ಇರಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಹೇಳಿದೆ.