ನಗರಸಭೆ ಕಟ್ಟಡ ಕಾಮಗಾರಿ ಅರೆಬರೆ

ಕೆಲವೊಮ್ಮೆ ಮಳೆ ಜೋರಾಗಿ ಬಂದರೆ ಕಡತಗಳೆಲ್ಲ ತೋಯ್ದು ಹೋಗುವಂಥ ಸ್ಥಿತಿಯಲ್ಲಿವೆ.

Team Udayavani, Oct 4, 2021, 6:22 PM IST

ನಗರಸಭೆ ಕಟ್ಟಡ ಕಾಮಗಾರಿ ಅರೆಬರೆ

ರಾಯಚೂರು: ನಗರಸಭೆ ಕಟ್ಟಡ ಕಾಮಗಾರಿ ಬಹುತೇಕ ಅರೆಬರೆಯಾಗಿದ್ದು, ಅದರಲ್ಲೇ ಈಗ ಎಲ್ಲ ಕಚೇರಿ ಕೆಲಸಗಳು ನಡೆಯುತ್ತಿದೆ. ಕಟ್ಟಡ ಕಾಮಗಾರಿ ಬಾಕಿ ಉಳಿದಿದ್ದು, ಅದನ್ನು ಶೀಘ್ರ ಮುಗಿಸಬೇಕೆನ್ನುವ ಇಚ್ಛಾಶಕ್ತಿ ಚುನಾಯಿತ ಜನಪ್ರತಿನಿಧಿಗಳಲ್ಲಿ ಕಾಣಿಸದಿರುವುದು ವಿಪರ್ಯಾಸ.

ತಮ್ಮ ವಾರ್ಡ್‌ಗೆ ಬರಬೇಕಾದ ಅನುದಾನ ಬಗ್ಗೆ ಪ್ರಶ್ನಿಸುವ ಸದಸ್ಯರು ಕಟ್ಟಡದ ದುಃಸ್ಥಿತಿ ಬಗ್ಗೆ ಒಮ್ಮೆಯೂ ಚಕಾರ ಎತ್ತುತ್ತಿಲ್ಲ. ಇಡೀ ನಗರದ ಕೇಂದ್ರಾಡಳಿತ ಪ್ರದೇಶವೇ ಅವ್ಯವಸ್ಥೆ ಆಗರವಾದರೂ ಕ್ಯಾರೇ ಎನ್ನುವವರಿಲ್ಲ. ನಗರಸಭೆ ಕಟ್ಟಡ ಕಾಮಗಾರಿ ಒಂದು ಹಂತದವರೆಗೆ ಪೂರ್ಣಗೊಂಡಿದ್ದು, ಬಹುತೇಕ ಕಡೆ ಅಂತಿಮ ಸ್ಪರ್ಶ ನೀಡಿಲ್ಲ. ತಮಗೆ ಬೇಕಿರುವ ಕಚೇರಿಗಳಲ್ಲಿ ಮಾತ್ರ ಸುಸಜ್ಜಿತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಿರುವ ವಿಭಾಗಗಳಲ್ಲೇ ಕಾಮಗಾರಿ ಮುಗಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದಾಖಲೆ ಇಡಲು ಸುಸಜ್ಜಿತ ವ್ಯವಸ್ಥೆ ಇಲ್ಲದಂಥ ಪರಿಸ್ಥಿತಿ ನಗರಸಭೆಗೆ ಒದಗಿಸುವುದು ದುರಂತವೇ ಸರಿ.

ಕಡತಗಳಿಗಿಲ್ಲ ರಕ್ಷಣೆ: ಒಂದು ಸರ್ಕಾರಿ ಕಚೇರಿಯ ಜೀವಾಳವೇ ದಾಖಲೆಗಳು. ಆದರೆ ನಗರಸಭೆಯಲ್ಲಿ ಆ ದಾಖಲೆಗಳಿಗೆ ಬೆಲೆಯಿಲ್ಲ ಎನ್ನುವಂತಹ ಸ್ಥಿತಿ ಇದೆ. ಸುಸಜ್ಜಿತ ಸಂಗ್ರಹಾಲಯ ಇಲ್ಲದ ಕಾರಣಕ್ಕೆ ಬಹುತೇಕ ಕಡತಗಳನ್ನು ಗಂಟು ಮೂಟೆ ಕಟ್ಟಿ ಬಹಿರಂಗವಾಗಿಯೇ ಇಡಲಾಗಿದೆ. ದಾಖಲೆಗಳ ಅಲ್ಮೆರಾಗಳನ್ನು ಹೊರಗಡೆಯೇ ಇಟ್ಟಿದ್ದು, ಕೆಲವುಗಳಿಗೆ ಬೀಗವೂ ಇಲ್ಲ. ಕೆಲವೊಮ್ಮೆ ಮಳೆ ಜೋರಾಗಿ ಬಂದರೆ ಕಡತಗಳೆಲ್ಲ ತೋಯ್ದು ಹೋಗುವಂಥ ಸ್ಥಿತಿಯಲ್ಲಿವೆ.

ಅನುದಾನದ್ದೇ ಸಮಸ್ಯೆ: ನಗರಸಭೆಗೆ ಪ್ರತಿ ವರ್ಷ ಕೋಟ್ಯಂತರ ರೂ. ಸಂಗ್ರಹವಾಗುವ ಕರದಿಂದ ಸಿಬ್ಬಂದಿಗೆ ವೇತನ, ಕಚೇರಿ ನಿರ್ವಹಣೆಗೆ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಉಳಿಯುವುದೇ ಇಲ್ಲ ಎನ್ನುವುದು ಅಧಿಕಾರಿಗಳ ವಿವರಣೆ. ಇದರಿಂದ ಅನೇಕ ವರ್ಷಗಳಿಂದ ಕಚೇರಿ ಕೆಲಸ ಕಾರ್ಯಗಳು ಅರೆಬರೆಯಾಗಿವೆ. ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಅನುದಾನ ಯಾವೆಲ್ಲ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬ ಶಂಕೆ ಜನರನ್ನು ಕಾಡುವಂತಾಗಿದೆ.

ಸುಣ್ಣ-ಬಣ್ಣವೂ ಇಲ್ಲ
ಕಟ್ಟಡ ಕಾಮಗಾರಿ ಮುಗಿಯುವುದಿರಲಿ ಈಗಾಗಲೇ ಮುಗಿದ ಕೆಲಸಗಳಿಗೂ ಸರಿಯಾದ ಸುಣ್ಣ-ಬಣ್ಣ ಕಾಣದಿರುವುದು ವಿಪರ್ಯಾಸವೇ ಸರಿ. ಸಿವಿಲ್‌ ಕೆಲಸ ಬಹುತೇಕ ಅಂತಿಮಗೊಂಡಿದೆ. ಕೊನೆ ಸುತ್ತಿನ ಕಾಮಗಾರಿ ಸುಣ್ಣ ಬಣ್ಣ ಬಳಿದರೆ ಒಂದು ಸುಂದರ ರೂಪವಾದರೂ ಸಿಗುತ್ತದೆ. ಇಲ್ಲಿ ಮಾತ್ರ ಯಥಾ ರೀತಿಯಲ್ಲೇ ಬಳಸಲಾಗುತ್ತಿದೆ. ಕಂಬಗಳಿಗೆ ಕೊನೆ ಸುತ್ತಿನ ಗಿಲಾವ್‌ ಮಾಡದ ಕಾರಣ ಸಿಮೆಂಟ್‌ ಕಳಚಿ ಬೀಳುತ್ತಿದೆ. ಮೆಟ್ಟಿಲುಗಳಿಗೆ ತಡೆಗೋಡೆ ಕೂಡ
ನಿರ್ಮಿಸಿಲ್ಲ. ಯಾರಾದರೂ ವಯಸ್ಸಾದವರು ಮೇಲೆ ಏರುವಾಗ ಆಯ ತಪ್ಪಿದರೆ ಅನಾಹುತ ಖಚಿತ ಎನ್ನುವಂತಿದೆ ಸ್ಥಿತಿ.

ನಗರಸಭೆ ಕಟ್ಟಡದಲ್ಲಿ ಇನ್ನೂ ಕೆಲ ಕಾಮಗಾರಿಗಳು ಬಾಕಿ ಉಳಿದಿರುವುದು ನಿಜ. ನಮಗೆ ಬರುವ ತೆರಿಗೆ ಹಣದಲ್ಲಿ ಸಿಬ್ಬಂದಿಗೆ ವೇತನ, ಕಚೇರಿ ನಿರ್ವಹಣೆಗೆ ಬಳಸಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಸಿಗುವ ಅನುದಾನದಲ್ಲಿ ಎಲ್ಲ ಕೆಲಸಗಳನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ. ದಾಖಲೆಗಳ ಸಂಗ್ರಹಕ್ಕೆ ಪ್ರತ್ಯೇಕ ದಾಖಲೆ ಅಭಿಲೇಖಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಎಲ್ಲ ಕಡತಗಳನ್ನು ಅಲ್ಲಿಯೇ ಸಂಗ್ರಹಿಸಲಾಗುವುದು.
ಮುನಿಸ್ವಾಮಿ,
ನಗರಸಭೆ ಪೌರಾಯುಕ್ತ, ರಾಯಚೂರು

ಸಿದ್ದಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

DKSHI (2)

Pen drive case; ಮುಗಿಸೋದೇ ಕುಮಾರಸ್ವಾಮಿ ಕೆಲಸ: ಡಿ.ಕೆ.ಶಿವಕುಮಾರ್ ಆಕ್ರೋಶ

2–sscl-result

SSLC Result: ಮೇ.9 ರಂದು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

Sindhanur; ಒಂದೇ ದಿನ ‌ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

DKSHI (2)

Pen drive case; ಮುಗಿಸೋದೇ ಕುಮಾರಸ್ವಾಮಿ ಕೆಲಸ: ಡಿ.ಕೆ.ಶಿವಕುಮಾರ್ ಆಕ್ರೋಶ

ಬಡವರಿಗೆ ಆರ್ಥಿಕ ಬಲ ತುಂಬಿದ ಗ್ಯಾರಂಟಿ: ಗಡ್ಡದೇವರಮಠ

ಬಡವರಿಗೆ ಆರ್ಥಿಕ ಬಲ ತುಂಬಿದ ಗ್ಯಾರಂಟಿ: ಗಡ್ಡದೇವರಮಠ

2–sscl-result

SSLC Result: ಮೇ.9 ರಂದು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.