ಆ್ಯಷಸ್ ಟೆಸ್ಟ್: ನಿಗದಿಯಂತೆ ನಡೆಯುವುದು ಅನುಮಾನ!
Team Udayavani, Oct 5, 2021, 11:23 AM IST
ಲಂಡನ್: ಈ ಬಾರಿ ಆಸ್ಟ್ರೇಲಿಯದಲ್ಲಿ ಆ್ಯಷಸ್ ಟೆಸ್ಟ್ ಸರಣಿ ನಿಗದಿಯಂತೆ ನಡೆಯುವುದು ಅನುಮಾನವಾಗಿದೆ. ಆಸ್ಟ್ರೇಲಿಯದಲ್ಲಿ ಕೋವಿಡ್ ಕಾರಣ ಈಗಲೂ ನಿರ್ಬಂಧಗಳು ಮುಂದುವರಿದಿರುವುದರಿಂದ ಈ ಶಂಕೆ ಶುರುವಾಗಿದೆ. ಸ್ವತಃ ಇಂಗ್ಲೆಂಡ್ ಆಟಗಾರರೇ ಆಸ್ಟ್ರೇಲಿಯಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ.
ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈ ವಾರಾಂತ್ಯದಲ್ಲಿ ಸಭೆ ಸೇರಲಿದೆ. ಅಲ್ಲಿ ರೋಚಕ ಆ್ಯಷಸ್ನ ಭವಿಷ್ಯ ನಿರ್ಧಾರವಾಗಲಿದೆ. ಪರಿಸ್ಥಿತಿ ಪೂರಕವಾಗಿದ್ದರೆ ಇಂಗ್ಲೆಂಡ್ ಆಸ್ಟ್ರೇಲಿಯಕ್ಕೆ ತೆರಳಲಿದೆ. ಇಲ್ಲವಾದರೆ ರದ್ದಾಗುವ ಸಾಧ್ಯತೆಯೇ ದಟ್ಟವಾಗಿದೆ.
ಇದನ್ನೂ ಓದಿ:ಪೆಂಡೋರಾ ತನಿಖಾ ವರದಿ:ಅನಿಲ್ ಹೆಸರಲ್ಲಿ 9,600 ಕೋ.ರೂ. ಆಸ್ತಿ, ತೆಂಡೂಲ್ಕರ್ ಗೌಪ್ಯ ಕಂಪೆನಿ
ಕೊರೊನಾ ಕಾರಣ ಜೈವಿಕ ಸುರಕ್ಷಾ ವಲಯದಲ್ಲಿ ದೀರ್ಘಕಾಲ ಇರಬೇಕಾಗುತ್ತದೆ. ಅದು ಈಗಾಗಲೇ ಆಟಗಾರರಿಗೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯನ್ನು ನಿರ್ಮಿಸಿದೆ. ಇನ್ನೂ ನಿರ್ಬಂಧ ಮುಂದುವರಿದರೆ, ಕ್ರಿಕೆಟ್ ಮಂಡಳಿಗಳೇ ಕೂಟಗಳನ್ನು ರದ್ದು ಮಾಡ ಬೇಕಾಗುವ ಪರಿಸ್ಥಿತಿ ಎದುರಿಸಲಿವೆ