ಮನೆಕಳವು ಮಾಡುತ್ತಿದ್ದ ದಂಪತಿ ಸೆರೆ

ಬಾಡಿಗೆ ಮನೆ ಹುಡುಕುವ ನೆಪದಲಿ ಮನೆಗಳವು | ಆರೋಪಿ ದಂಪತಿಯಿಂದ ಸುಲಿಗೆ ಪ್ರಕರಣ ಪತ್ತೆ

Team Udayavani, Oct 6, 2021, 11:00 AM IST

theft by jodi

ಬೆಂಗಳೂರು: ಬಾಡಿಗೆಗೆ ಮನೆ ಹುಡುಕುವ ನೆಪದಲ್ಲಿ ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಬೆರಳಚ್ಚು ಆಧರಿಸಿ ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥನಗರ ನಿವಾಸಿ ಬಾಬು(41) ಮತ್ತು ಆತನ ಪತ್ನಿ ಜಯಂತಿ(32) ಬಂಧಿತರು. ಆರೋಪಿಗಳಿಂದ 8.5 ಲಕ್ಷ ರೂ. ಮೌಲ್ಯದ 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇದೇ ವೇಳೆ ಆರೋಪಿಗಳ ಬಂಧನದಿಂದ ಆರ್‌.ಟಿ.ನಗರ, ಅನ್ನಪೂರ್ಣೇಶ್ವರಿ ನಗರ, ಡಿ.ಜೆ.ಹಳ್ಳಿ, ಅಶೋಕ ನಗರ, ವಿವೇಕ ನಗರ, ವಿಧಾನ ಸೌಧ, ಕೆ.ಆರ್‌.ಪುರ.ಬೆಳ್ಳಂದೂರು, ಕೊತ್ತನೂರು, ಮಡಿವಾಳ ಸೇರಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಮನೆಕಳವು, ಕನ್ನಗಳವು ಮತ್ತು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:- ಪ್ರಧಾನಿ ಮೋದಿ ಕೃಪೆಯಿಂದ ನಮ್ಮ ಸಂಕಲ್ಪ ಯಶಸ್ವಿಯಾಗುತ್ತಿದೆ : ಪ್ರಭು ಚೌಹ್ವಾಣ್

ಆರೋಪಿ ಬಾಬು ಆಟೋ ಚಾಲಕನಾಗಿದ್ದು, ಸ್ಥಳೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆ. ಜಯಂತಿ ಮನೆಯಲ್ಲೇ ಇರುತ್ತಿದ್ದಳು. ಆರೋಪಿಗಳು 4-5 ವರ್ಷಗಳಿಂದ ಮನೆ ಕಳವು ಮಾಡುವುದನ್ನೇ ವೃತ್ತಿ ಯನ್ನಾಗಿಸಿಕೊಂಡಿದ್ದಾರೆ. 6 ತಿಂಗಳ ಹಿಂದಷ್ಟೇ ಕೆ.ಆರ್‌. ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದರು. ಇದೀಗ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಅದೇ ವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಸೆ.16ರಂದು ದಂಪತಿ ಮಂಜುನಾಥ ಲೇಔಟ್‌ನ ಸತ್ಯನಾರಾಯಣ ಅಪಾರ್ಟ್‌ಮೆಂಟ್‌ ನಿವಾಸಿ ವಿಜಯಲಕ್ಷಿ$¾à ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ವಿಜಯಲಕ್ಷಿ$¾à ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯ ಬೀಗ ಹಾಕಿ, ಕಿಟಕಿ ಪಕ್ಕದಲ್ಲೇ ಕೀ ಇಟ್ಟು ಹೋಗಿದ್ದರು. ಸಂಜೆ ನಾಲ್ಕು ಗಂಟೆಗೆ ವಾಪಸ್‌ ಬಂದು ನೋಡಿದಾಗ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಕಳುವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಸಿಸಿ ಕ್ಯಾಮೆರಾ ಮತ್ತು ಬೆರಳಚ್ಚು ಮೂಲಕ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಿಟಕಿ ಪಕ್ಕ ಬೀಗದ ಕೀ – ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಪ್ರತಿ ರಸ್ತೆಗಳನ್ನು ಸುತ್ತುತ್ತಿದ್ದ ದಂಪತಿ, ಈ ವೇಳೆ ಬೀಗ ಹಾಕಿ ಕಿಟಕಿ ಪಕ್ಕ ಅಥವಾ ಇತರೆಡೆ ಕೀ ಇಟ್ಟು ಹೋಗುವ ಮನೆಗಳನ್ನು ಗುರುತಿಸುತ್ತಿದ್ದರು. ನಂತರ ಒಂದೆರಡು ದಿನಗಳ ಬಳಿಕ ಆ ಮನೆ ಬಳಿ ದಂಪತಿ ಹೋಗುತ್ತಿದ್ದರು. ಬಾಬು ಮನೆ ಹೊರ ಭಾಗದಲ್ಲಿ ನಿಂತು ಸಾರ್ವಜನಿಕರ ಮೇಲೆ ನಿಗಾ ವಹಿಸಿದ್ದ.  ಜಯಂತಿ ಮನೆಯೊಳಗೆ ಹೋಗಿ ಕಳ್ಳತನ ಮಾಡುತ್ತಿದ್ದಳು. ಬಳಿಕ ಇಬ್ಬರು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಸುಳಿವು ಕೊಟ್ಟ ಬೆರಳಚ್ಚು- ಆರ್‌.ಟಿ.ನಗರದಲ್ಲೂ ಅದೇ ತಂತ್ರದಿಂದ ಕಳ್ಳತನ ಮಾಡಿದ್ದರು. ಪೊಲೀಸರು ಸ್ಥಳ ಮಹಜರು ಮಾಡುವಾಗ ಆರೋಪಿಗಳ ಬೆರಳಚ್ಚು ಸಿಕ್ಕಿತ್ತು. ನಂತರ ನಗರದ ವಿವಿಧ ಠಾಣೆಗಳಿಗೆ ಕಳುಹಿಸಿ ಪರಿಶೀಲಿಸಿದಾಗ 2019ರಲ್ಲಿ ಮÇÉೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಸಂಗ್ರಹಿಸಿದ್ದ ಬೆರಳಚ್ಚಿಗೆ ಹೊಲಿಕೆ ಆಗುತ್ತಿತ್ತು. ಬಳಿಕ ದಂಪತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಸಂಗ್ರಹಿಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ರೌಡಿಶೀಟರ್‌ ಸಹಚರರ ಬಂಧನ ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದರೋಡೆಗೆ ಸಂಚು ರೂಪಿಸಿದ ಆರೋಪದ ಮೇಲೆ ರೌಡಿಶೀಟರ್‌ ನಾಗರಾಜ್‌ ಅಲಿಯಾಸ್‌ ವಿಲ್ಸನ್‌ ಗಾರ್ಡನ್‌ ನಾಗನ ಆರು ಮಂದಿ ಸಹಚರರು ಸೇರಿ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್‌ಗಾರ್ಡನ್‌ ಠಾಣಾ ವ್ಯಾಪ್ತಿಯ ಬಿಟಿಎಸ್‌ ಸರ್ವೀಸ್‌ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಮುಂದಾಗಿದ್ದರು.

ಈ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ. ನಾಗನ ಆರು ಮಂದಿ ಸಹಚರರನ್ನು ಬಂಧಿಸಲಾಗಿದೆ. ಅವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ವಿಲ್ಸನ್‌ಗಾರ್ಡನ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಮತ್ತೂಂದು ಪ್ರಕರಣದಲ್ಲಿ ಆಡುಗೋಡಿ ಠಾಣಾ ವ್ಯಾಪ್ತಿಯ ಬಿ.ಜಿ.ರಸ್ತೆ ಅರಿಹಂತ್‌ ಸ್ಟೋನ್ಸ್‌ ಮುಂಭಾಗ ಒಂಟಿಯಾಗಿ ಓಡಾಡುವ ಸಾರ್ವಜನಿಕರ ದರೋಡೆಗೆ ಮುಂದಾಗಿದ್ದರು. ಈ ಮಾಹಿತಿ ಮೇರೆಗೆ  ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಎಸಿಬಿ ಬಲೆಗೆ ಎಫ್ಡಿಎ ಬೆಂಗಳೂರು: ಬಿಬಿಎಂಪಿಯ ವಸತಿ ಗೃಹಗಳಿಗೆ ಸರಬರಾಜು ಮಾಡಿರುವ ಪಿಠೊಪಕರಣಗಳ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು 15,000 ಲಂಚ ಪಡೆಯುತ್ತಿದ್ದ ಪಾಲಿಕೆಯ ಪ್ರಥಮ ದರ್ಜೆ ಸಹಾಯಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾನೆ. ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಚ್‌. ರಾಜು ಎಂಬಾತನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಶೇಷಾದ್ರಿಪುರಂ ನಿವಾಸಿಯೊಬ್ಬರೂ ಮಹಾನಗರ ಪಾಲಿಕೆಯ ಕಚೇರಿಗಳಿಗೆ ಮತ್ತು ವಸತಿ ಗೃಹಗಳಿಗೆ ಪೀಠೊಪಕರಣಗಳನ್ನು ಸರಬರಾಜು ಗುತ್ತಿಗೆ ಪಡೆದಿದ್ದರು. 2021ರ ಮೇ ಸಾಲಿನಲ್ಲಿ ತಾವರೆಕೆರೆ ಮುಖ್ಯರಸ್ತೆಯ ಪಾಲಿಕೆ ವಸತಿ ಗೃಹಗಳಿಗೆ ಸರಬರಾಜು ಮಾಡಿರುವ ಪೀಠೊಪಕರಣದ ಬಾಕಿ ಉಳಿದಿರುವ ಹಣ ಬಿಡುಗಡೆಗೆ ಕೋರಿದ್ದರು.

ಈ ಬಿಲ್‌ ಅನುಮೋದಿಸಲು ಪಾಲಿಕೆ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಚ್‌. ರಾಜು 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರ ಎಸಿಬಿ ಅಧಿಕಾರಿಗಳಿಗೆ ದೂರು ದಾಖಲಿಸಿದ್ದರು. ಲಂಚವನ್ನು ರಾಜು ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರಾಜುವನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

10-uv-fusion

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ

LokSabha Election; ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು

Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು

9-uv-fusion

Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-uv-fusion

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ

LokSabha Election; ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು

Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-uv-fusion

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ

LokSabha Election; ಪ್ರಹ್ಲಾದ ಜೋಶಿಯವರಿಂದ ಲಿಂಗಾಯತರ ತುಳಿಯುವ ಹುನ್ನಾರ: ವಿನಯ ಕುಲಕರ್ಣಿ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು

Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.