ಲೀಗ್ ಪಂದ್ಯಗಳಿಗೆ ಇಂದು ತೆರೆ: ಏಕಕಾಲಕ್ಕೆ ಎರಡು ಪಂದ್ಯ
Team Udayavani, Oct 8, 2021, 6:45 AM IST
ಅಬುಧಾಬಿ/ದುಬೈ: ಪ್ಲೇಆಫ್ ಪ್ರವೇಶಿಸಲಿರುವ ನಾಲ್ಕನೇ ತಂಡ ಯಾವುದು ಎಂಬ ಕುತೂಹಲದೊಂದಿಗೆ 2021ನೇ ಐಪಿಎಲ್ ಪಂದ್ಯಾವಳಿಯ ಲೀಗ್ ಮುಖಾಮುಖಿಗೆ ಶುಕ್ರವಾರ ತೆರೆ ಬೀಳಲಿದೆ.
ಮುಂಬೈ-ಹೈದರಾಬಾದ್ ಹಾಗೂ ಬೆಂಗಳೂರು-ಡೆಲ್ಲಿ ಮುಖಾಮುಖಿ ಆಗಲಿವೆ. ಈ ಪಂದ್ಯಗಳು ಮೂಲ ವೇಳಾಪಟ್ಟಿಗೆ ವ್ಯತಿರಿಕ್ತವಾಗಿ ಏಕಕಾಲಕ್ಕೆ ಆರಂಭವಾಗಲಿವೆ. ಐಪಿಎಲ್ ಇತಿಹಾಸದಲ್ಲಿ ಎರಡು ಪಂದ್ಯಗಳು ಒಂದೇ ವೇಳೆಗೆ ಮೊದಲ್ಗೊಳ್ಳುತ್ತಿರುವುದು ಇದೇ ಮೊದಲು. ಇಲ್ಲಿನ 4 ತಂಡಗಳಲ್ಲಿ ಮುಂಬೈಗೆ ಮಾತ್ರ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಪ್ಲೇಆಫ್ ಪ್ರವೇಶಿಸಬೇಕಾದರೆ ಅದು ಹೈದರಾಬಾದ್ ವಿರುದ್ಧ ನಾನಾ ಲೆಕ್ಕಾಚಾರದೊಂದಿಗೆ ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ಒತ್ತಡವಿದೆ.
ಆರ್ಸಿಬಿ-ಡೆಲ್ಲಿ ಈಗಾಗಲೇ ಮುಂದಿನ ಸುತ್ತು ಪ್ರವೇಶಿಸಿ ನಿರಾಳವಾಗಿವೆ. ಕೊಹ್ಲಿ ಪಡೆಯ ದ್ವಿತೀಯ ಸ್ಥಾನದ ಕನಸನ್ನು ಬುಧವಾರ ರಾತ್ರಿ ಹೈದರಾಬಾದ್ ಛಿದ್ರಗೊಳಿಸಿದ್ದರಿಂದ ಉಳಿದೊಂದು ಕುತೂಹಲವೂ ಹೊರಟು ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು