ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ


Team Udayavani, Oct 11, 2021, 6:14 PM IST

Untitled-1

ಬೈಲಹೊಂಗಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,  ತಾಲೂಕಿನ ನೇಸರಗಿ ಗ್ರಾಮದ  ಬೆಳಗಾವಿ- ಬಾಗಲಕೋಟ ರಾಜ್ಯ ಹೆದ್ದಾರಿ  ಮೇಲೆ 3 ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ,ಹಸಿರು ಸೇನೆ, ಕಿತ್ತೂರ ಹಾಗೂ ನೇಸರಗಿ ಬ್ಲಾಕ್ ಕಾಂಗ್ರೆಸ್ ಮತ್ತು ದಲಿತ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಅಪಾರ ಮಳೆಯಿಂದ ಹಾಳಾದ ರೈತನ ಬೆಳೆ ಈಗ ಬಂದ ಅಲ್ಪ ಸ್ವಲ್ಪ ಬೆಳೆಗೆ ಮೊದಲು ಇದ್ದ 10,000 ರೂ. ದರ ಈಗ ಕುಸಿತ ಕಂಡು 5200 ರೂ. ಆಗಿ ರೈತರ ಬಾಳು ತೀರಾ ಸಂಕಷ್ಟಕ್ಕೆ ತಲುಪಿದ್ದು ಇದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಕಾರಣ  ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಮಾತನಾಡಿ, ಕೇಂದ್ರದ ಕೃಷಿ ವಿರೋಧಿ ಕಾಯ್ದೆಗಳ ವಿರುದ್ಧ ಲಕ್ಷಾಂತರ ರೈತರು ದೆಹಲಿ ಗಡಿಯಲ್ಲಿ 7 ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಹೋರಾಟದಲ್ಲಿ ಸುಮಾರು 200ರೈತರು ಮೃತಪಟ್ಟಿದ್ದಾರೆ. ಈ ಬಗ್ಗೆ ಗಮನ ಹರಿಸದ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ.

ಬಂಡವಾಳಶಾಹಿಗಳು, ಕಾರ್ಪೊರೇಟ್ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಈ ಜನ ವಿರೋಧಿ ನಡೆಯಿಂದ ಇಡೀ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲಾ ರೈತ ಸಂಘದ ಹಾಗೂ ಹಸಿರು ಸೇನೆ ಕಾರ್ಯಾದ್ಯಕ್ಷ ರವಿ ಸಿದ್ದಮ್ಮನವರ ಮಾತನಾಡಿ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕು.ನೇಸರಗಿ ಹೋಬಳಿಯಲ್ಲಿ ಟಾಕಿ ಕಂಪನಿಯ ಗಜ್ಜರಿ ಕಳಪೆ ಬೀಜದಿಂದ  ಫಸಲು ಉತ್ತಮ ರೀತಿಯಲ್ಲಿ ಬಂದಿಲ್ಲ. ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.

ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಬೈಲಹೊಂಗಲ ತಾಲೂಕ ರೈತ ಸಂಘದ ಅದ್ಯಕ್ಷ ಮಹಾಂತೇಶ ಹಿರೇಮಠ, ನ್ಯಾಯವಾದಿ ಎಂ.ವಾಯ್. ಸೋಮಣ್ಣವರ ಮಾತನಾಡಿ, ಬ್ರಿಟಿಷ್ ಆಡಳಿತಕ್ಕಿಂತ ಕೆಟ್ಟದಾಗಿ ರೈತರನ್ನು ಮತ್ತು ಜನರನ್ನು ತುಳಿಯುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗುತ್ತಿದ್ದು ಅದನ್ನು ಬಿಟ್ಟು ಸಾಮಾನ್ಯ ಜನರ ,ರೈತ ಪರ ಯೋಜನೆಗಳನ್ನು ತರಬೇಕೆಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ದ್ವನಿ)ರಾಜ್ಯಾದ್ಯಕ್ಷ ಸುರೇಶ ರಾಯಪ್ಪಗೋಳ, ಜೈಭೀಮ ಸಂಘರ್ಷ ಸಮಿತಿ(ಅಂಬೇಡ್ಕರ ವಾಣಿ) ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಮಾತನಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ದ ರೈತರ ಬಾರುಕೋಲು ಚಳುವಳಿ ಪ್ರಾರಂಭಿಸಬೇಕಾಗುತ್ತದೆ ಎಂದರು.

ಬೈಲಹೊಂಗಲ ಉಪವಿಭಾಗಾದಿಕಾರಿ ಶಶಿಧರ ಬಗಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಮಾತನಾಡಿ, ಈ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದೆಂದು ಹೇಳಿದರು. ಮೂರು ಘಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ರಾಮದುರ್ಗ,ಮಲ್ಲಿಕಾರ್ಜುನ ಹುಂಬಿ, ಪ್ರಕಾಶ ನಾಯ್ಕ, ಸಮರ್ಥ ಪಾಟೀಲ, ನಾನಾಸಾಹೇಬ ಪಾಟೀಲ, ಚಂದ್ರಯ್ಯ ಚರಂತಿಮಠ, ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡರ, ದೀಪಕಗೌಡ ಪಾಟೀಲ, ಪ್ರಕಾಶ ಮುಂಗರವಾಡಿ, ಸಂಕನಗೌಡ ಪಾಟೀಲ, ರಾಜೇಂದ್ರ ಇನಾಮದಾರ, ಆಕಾಶ ಪಾಟೀಲ, ಪ್ರಕಾಶ ತೋಟಗಿ, ವಾಸು ಹಮ್ಮನವರ, ಸುರೇಶ ಅಗಸಿಮನಿ, ಮುದಕಪ್ಪ ಮರಡಿ, ಮಹಾಂತೇಶ ಗುಜನಾಳ, ಬಸಣೆಪ್ಪ ಹುದ್ದಾರ, ಬಾಬು ಮರಿಗೌಡರ, ಸೋಮಪ್ಪ ಕೊಳದೂರ, ನಾಮದೇವ ಸಿದ್ದಮ್ಮನವನರ, ಸೋಮಪ್ಪ ಕೊಳದೂರ, ಸಾಗರ ದೇಸಾಯಿ, ಮಹಾಂತೇಶ ಗೌಡರ, ಹನಮಂತ ಕಿವಡ, ಚಂದ್ರಯ್ಯ ಚರಂತಿಮಠ, ರಾಜು ಕಡಕೋಳ, ಮಂಜು ಹೊಸಮನಿ, ಕಾಸಿಮ ಜಮಾದಾರ, ಲಕ್ಷ್ಮಿ ತಳವಾರ, ಮನೋಜ ಕೆಳಗೇರಿ, ಅಬ್ಬಾಶ ಪೀರಜಾದೆ, ಸುರೇಶ ಕೆಳಗೇರಿ, ಅಡಿವೆಪ್ಪಾ ಮೋದಗಿ, ಯಲ್ಲಪ್ಪ ತಿಗಡಿ, ಬಸಪ್ಪ ಕೊಳವಿ, ಸಂತೋಷ ಉಳವಿ, ಕಾಶಿನಾಥ ಹಡಪದ, ಯಲ್ಲಪ್ಪ ತಳವಾರ, ಸಿದ್ದಪ್ಪ ಕುಮರಿ, ಗಜಾನನ ಹೊಸಕೋಟಿ, ಅಯುಬ ಗಣಾಚಾರಿ, ಅಣ್ಣಪ್ಪ ಕಡಕೋಳ , ಹಂಪಣ್ಣ ಕೌಜಲಗಿ, ನಾಗೇಶ ಬಾಗೇವಾಡಿ, ರಮೇಶ ಮೂಲಿಮನಿ, ವಿನಾಯಕ ಮಾಸ್ತಮರ್ಡಿ, ಸೊಯಲ್ ಮೋಖಾಸಿ ಸೇರಿದಂತೆ ಅನೇಕ ರೈತ ಮಹಿಳೆಯರು,  ರೈತರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.