ಸದ್ಯಕ್ಕೆ ಮಕ್ಕಳಿಗೆ ಲಸಿಕೆ ನೀಡಿಕೆ ಇಲ್ಲ?
Team Udayavani, Nov 14, 2021, 10:45 PM IST
ನವದೆಹಲಿ: ಝೈಡಸ್ ಕ್ಯಾಡಿಲಾ ಸಿದ್ಧಪಡಿಸಿರುವ ಝೈಕೋವ್-ಡಿ ಲಸಿಕೆಯನ್ನು ಸದ್ಯ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ದೇಶದ ಸೂಜಿರಹಿತ ಮೊದಲ ಲಸಿಕೆಯನ್ನು ಮಕ್ಕಳಿಗೆ ನೀಡಲು ಈಗಾಗಲೇ ಶಿಫಾರಸು ಮತ್ತು ಅಂಗೀಕಾರ ಲಭಿಸಿದ್ದರೂ, ವಯಸ್ಕರಿಗೆ ಲಸಿಕೆ ಹಾಕುವುದಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಒಂದು ಕೋಟಿ ಡೋಸ್ ಲಸಿಕೆ ಖರೀದಿಗೆ ಕ್ರಮ ಕೈಗೊಂಡಿದೆ.
ಇದನ್ನೂ ಓದಿ : ಸೋನು ಸೂದ್ ತಂಗಿ ಮಾಳ್ವಿಕಾ ರಾಜಕೀಯ ಎಂಟ್ರಿ : ಮೋಗಾ ಕ್ಷೇತ್ರದಲ್ಲೇ ಕಣಕ್ಕಿಳಿಯುವ ಸಾಧ್ಯತೆ