1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್ಗೆ ಪ್ರತಿಷ್ಠಿತ ಪ್ರಶಸ್ತಿ
Team Udayavani, Dec 4, 2021, 11:00 PM IST
ವಾಷಿಂಗ್ಟನ್: ಬರ್ಕ್ಲೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಭಾರತೀಯ-ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವ ಅವರು ಅಮೆರಿಕನ್ ಮ್ಯಾಥಮ್ಯಾಟಿಕಲ್ ಸೊಸೈಟಿ(ಎ ಎಂಎಸ್) ನೀಡುವ “ಸಿಪ್ರಿಯನ್ ಫೊಯಾಸ್ ಪ್ರೈಜ್’ಗೆ ಭಾಜನರಾಗಿದ್ದಾರೆ.
ಇವರ ಜೊತೆಗೆ ಇನ್ನಿಬ್ಬರು ಗಣಿತ ಶಾಸ್ತ್ರಜ್ಞರಾದ ಆ್ಯಡಂ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್ಮ್ಯಾನ್ ಅವರಿಗೂ ಈ ಪ್ರಶಸ್ತಿ ಸಂದಿದೆ. 1959ರ ರಿಚರ್ಡ್ ಕ್ಯಾಡಿಸನ್ ಮತ್ತು ಇಸಾಡೋರ್ ಸಿಂಗರ್ ಅವರ “ಆಪರೇಟರ್ ಥಿಯರಿ’ಯ “ಪೇವಿಂಗ್ ಪ್ರಾಬ್ಲಿಂ’ಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಮೂವರು ಗಣಿತಜ್ಞರು ಯಶಸ್ವಿಯಾಗಿದ್ದಾರೆ. ಈ ಪ್ರಸಿದ್ಧ 1959ರ ಗಣಿತ ಸಮಸ್ಯೆಗೆ “ದಿ ಕ್ಯಾಡಿಸನ್-ಸಿಂಗರ್ ಪ್ರಾಬ್ಲಿಂ’ ಎಂದು ಕರೆಯಲಾಗುತ್ತದೆ. ಶ್ರೀವಾಸ್ತವ, ಮಾರ್ಕಸ್ ಮತ್ತು ಡೇನಿಯಲ್ ಅವರ ಪ್ರಬಂಧವು ಈ ಸಮಸ್ಯೆಗೆ ಪರಿಹಾರ ಸೂಚಿಸಿದೆ ಎಂದು ಎಎಂಎಸ್ ಹೇಳಿದೆ.
ಮುಂದಿನ ವರ್ಷದ ಜನವರಿ 5ರಂದು ಸೀಟಲ್ನಲ್ಲಿ ನಡೆಯುವ ಜಂಟಿ ಗಣಿತ ಸಭೆಯಲ್ಲಿ(ಇದು ಜಗತ್ತಿನ ಅತಿ ದೊಡ್ಡ ಗಣಿತ ಸಮ್ಮೇಳನ) ಪ್ರೊಫೆಸರ್ ನಿಖಿಲ್ ಶ್ರೀವಾಸ್ತವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದು ಶ್ರೀವಾಸ್ತವ ಅವರು ಪಡೆಯುತ್ತಿರುವ 3ನೇ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಈ ಹಿಂದೆ 2014ರಲ್ಲಿ ಜಾರ್ಜ್ ಪೊಲ್ಯ ಪ್ರೈಜ್ ಮತ್ತು 2021ರಲ್ಲಿ ಹೆಲ್ಡ್ ಪ್ರೈಜ್ ಕೂಡ ಇವರನ್ನು ಅರಸಿ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ