ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ
Team Udayavani, Dec 4, 2021, 10:30 PM IST
ವಾಷಿಂಗ್ಟನ್: ಭಾರತದಿಂದ ಅಕ್ರಮವಾಗಿ ಅಮೆರಿಕಕ್ಕೆ ತೆರಳಿರುವ ಆರೋಪದಲ್ಲಿ ಮೂವರು ಭಾರತೀಯರನ್ನು ಅಮೆರಿಕದ ವರ್ಜಿನ್ ದ್ವೀಪದಲ್ಲಿ ಬಂಧಿಸಲಾಗಿದೆ.
ಈ ಮೂವರು ಈ ಹಿಂದೆಯೂ ಒಮ್ಮೆ ಇದೇ ಆರೋಪದಲ್ಲಿ ಸಿಲುಕಿದ್ದು, ಗಡಿಪಾರಾಗಿದ್ದಾಗಿ ವರದಿಯಾಗಿದೆ. ಕೃಷ್ಣಬೆನ್ ಪಟೇಲ್(25), ನಿಕುಂಜ್ ಕುಮಾರ್ ಪಟೇಲ್(27) ಮತ್ತು ಅಶೋಕ್ ಕುಮಾರ್ ಪಟೇಲ್(39) ಬಂಧಿತರು.
ಅವರು ವರ್ಜಿನ್ ದ್ವೀಪದಿಂದ ಫೋರ್ಟ್ ಲಾಡರ್ಡೇಲ್ಗೆ ವಿಮಾನ ಪ್ರಯಾಣ ಮಾಡಲು ಹೊರಟಿದ್ದಾಗ ಸಿಕ್ಕಿಬಿದ್ದಿದ್ದಾರೆ. ನ.24ರಂದು ಬಂಧಿತರಾಗಿರುವ ಅವರನ್ನು ಡಿ.2ರಂದು ನ್ಯಾಯಾಲಯದ ಮುಂದೆ ಪ್ರಾರ್ಥಮಿಕ ವಿಚಾರಣೆಗೆ ಹಾಜರುಪಡಿಸಲಾಗಿದೆ. ಆರೋಪ ಸಾಬೀತಾದರೆ ಅವರಿಗೆ 10 ವರ್ಷಗಳ ಜೈಲುಶಿಕ್ಷೆಯಾಗಲಿದೆ ಎನ್ನಲಾಗಿದೆ.
ಈ ಮೂವರನ್ನು ಅಕ್ರಮವಾಗಿ ಒಳನುಸುಳುವಿಕೆ ಆರೋಪದಲ್ಲಿ 2014ರಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ