ನಡಾಲ್ಗೆ ಕೋವಿಡ್: ಆಸ್ಟ್ರೇಲಿಯನ್ ಓಪನ್ಗೆ ಅನುಮಾನ
Team Udayavani, Dec 20, 2021, 11:00 PM IST
ಮ್ಯಾಡ್ರಿಡ್: ಸ್ಪೇನಿನ ಟೆನಿಸಿಗ ರಫಾಯೆಲ್ ನಡಾಲ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಅಬುಧಾಬಿಯಲ್ಲಿ ಪ್ರದರ್ಶನ ಪಂದ್ಯವೊಂದನ್ನು ಆಡಿದ ಬಳಿಕ ಧನಾತ್ಮಕ ಫಲಿತಾಂಶ ಕಾಣಿಸಿಕೊಂಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದರಿಂದ ಅವರು ಮುಂದಿನ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವುದು ಅನುಮಾನವೆನಿಸಿದೆ. 4 ತಿಂಗಳ ಬಳಿಕ ನಡಾಲ್ ಕಣಕ್ಕಿಳಿದಿದ್ದರು.
ಶುಕ್ರವಾರ ಅಬುಧಾಬಿಯಲ್ಲಿ ಇವರ ಎದುರಾಳಿಯಾಗಿ ಕಾಣಿಸಿಕೊಂಡವರು ಆ್ಯಂಡಿ ಮರ್ರೆ. ಇದನ್ನು ನೇರ ಸೆಟ್ಗಳಲ್ಲಿ ಸೋತು ಸ್ಪೇನ್ಗೆ ವಿಮಾನ ಏರಿದ್ದರು. ಅಬುಧಾಬಿಯಿಂದ ಸ್ಪೇನ್ಗೆ ಮರಳಿದ ಬಳಿಕ ನಡಾಲ್ ಪಿಸಿಆರ್ ಟೆಸ್ಟ್ಗೆ ಒಳಗಾಗಿದ್ದರು. ಇದರ ಫಲಿತಾಂಶ ಪಾಸಿಟಿವ್ ಬಂದಿದ್ದು, ಅವರೀಗ ಪ್ರತ್ಯೇಕವಾಗಿದ್ದಾರೆ. ಪ್ರತೀ ಎರಡು ದಿನಗಳಿಗೊಮ್ಮೆ ನಾನು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೆ. ಎಲ್ಲದರ ಫಲಿತಾಂಶವೂ ನೆಗೆಟಿವ್ ಬಂದಿತ್ತು. ಆದರೆ ಶನಿವಾರ ನಡೆಸಲಾದ ಕೋವಿಡ್ ಟೆಸ್ಟ್ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ನಡಾಲ್ ಹೇಳಿದ್ದಾರೆ.
ಇದನ್ನೂ ಓದಿ:ಹಿಂದಿ ವಿರೋಧಿಸುವವರು, ಉರ್ದು ಬರೆದರೆ ಪ್ರಶ್ನಿಸಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?