“ವ್ಯಾಕ್ಸಿನೇಶನ್‌ ವಿತರಣೆಯಲ್ಲಿ ಸಾಧನೆ, ಆರ್ಥಿಕ ಪ್ರಗತಿ’

ಮಣಿಪಾಲ: ನಾಲ್ವರು ಗಣ್ಯರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ

Team Udayavani, Jan 15, 2022, 6:40 AM IST

“ವ್ಯಾಕ್ಸಿನೇಶನ್‌ ವಿತರಣೆಯಲ್ಲಿ ಸಾಧನೆ, ಆರ್ಥಿಕ ಪ್ರಗತಿ’

ಮಣಿಪಾಲ: ಕೋವಿಡ್‌ 19 ಹೊಡೆತದ ಹೊರತಾಗಿಯೂ ಲಸಿಕೆ ನೀಡಿಕೆಯಲ್ಲಿ ಅಚ್ಚರಿಯ ಸಾಧನೆಯನ್ನು ಬೆಟ್ಟು ಮಾಡಿರುವ ಟಾಟಾ ಸನ್ಸ್‌ ಪ್ರೈ.ಲಿ. ನಿರ್ದೇಶಕ ಭಾಸ್ಕರ ಭಟ್‌, ಆರ್ಥಿಕ ಪ್ರಗತಿ ಶ್ಲಾಘನೀಯ ಹಾದಿಯಲ್ಲಿದೆ ಎಂದಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ (ಎಜಿಇ), ಮಾಹೆ, ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ (ಎಂಇಎಂಜಿ) ಇಂಡಿಯ ಪ್ರೈ.ಲಿ., ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. (ಎಂಎಂಎನ್‌ಎಲ್‌) ಜಂಟಿಯಾಗಿ ಕೊಡಮಾಡಿದ 2022ರ ಹೊಸ ವರ್ಷದ ಪ್ರಶಸ್ತಿಯನ್ನು ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ಶುಕ್ರವಾರ ಸ್ವೀಕರಿಸಿ ಅವರು ಮಾತನಾಡಿದರು.

ಸ್ಟಾಕ್‌ ಮಾರ್ಕೆಟ್‌, ತೆರಿಗೆ ಸಂಗ್ರಹ, ಸ್ಟಾರ್ಟಪ್‌ ಮೂಲಕ ಹೊಸ ಹಣದ ಹರಿವುಗಳನ್ನು ಕಂಡಾಗ ಆರ್ಥಿಕ ಪ್ರಗತಿ ಉತ್ತಮವಾಗಿದೆ ಎಂದು ತಿಳಿದು ಬರುತ್ತದೆ. ದೊಡ್ಡ ಜನಸಂಖ್ಯೆಯ ಆಶೋತ್ತರ, ಕೌಶಲಯುಕ್ತ ಮಾನವ ಸಂಪನ್ಮೂಲ, ಪ್ರಜಾಸತ್ತಾತ್ಮಕ ಸಂಸ್ಥಾಪನೆಗಳು, ವೈವಿಧ್ಯ, “ಏನನ್ನಾದರೂ ಮಾಡ ಬಲ್ಲೆವು’ ಎಂಬ ಯುವ ಸಮೂಹ ದೇಶದ ಶಕ್ತಿ ಎಂದು ಭಟ್‌ ಅಭಿಪ್ರಾಯಪಟ್ಟರು.

ಕಟೀಲಮ್ಮನ ಅನುಗ್ರಹ
ನಾನು ಕಟೀಲಿನಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೆ ಗುಣ ಮಟ್ಟದ ಆರೋಗ್ಯ ಸೇವೆ ಒದಗಿಸುವ ಆಶಾವಾದ ಹೊಂದಿದ್ದೆ. ಅದರ ನಿರ್ವಹಣೆಗೆ ಮಾಹೆ ಒಪ್ಪಿ ಕೊಂಡಾಗಲೇ ಮಣಿಪಾಲ ಸಮೂಹ ಸಂಸ್ಥೆಯ ಪ್ರಶಸ್ತಿಯನ್ನು ಪಡೆದುಕೊಂಡಂತೆ. ಇದೆಲ್ಲವೂ ಸಾಧ್ಯ ವಾದದ್ದು ಕಟೀಲಮ್ಮನ ಅನುಗ್ರಹದಿಂದ ಎಂದು ಮುಂಬಯಿ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಸುರೇಶ್‌ ರಾವ್‌ ಹೇಳಿದರು.

ಕೋವಿಡ್‌ 19 ಕಾಲಘಟ್ಟದಲ್ಲಿಯೂ ಆಸ್ಪತ್ರೆಯ ಲಾಭವನ್ನು ಜನರು ಪಡೆದುಕೊಂಡರು. ಕಟೀಲಿನ ಯೋಜನೆಗಾ ಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಹೀಗೆ ಆಸ್ಪತ್ರೆಯುಪ್ರತಿಷ್ಠಿತ ಗೌರವವನ್ನು ಪಡೆದುಕೊಂಡಂತಾಯಿತು ಎಂದು ತಿಳಿಸಿದರು.

ಯುವಪೀಳಿಗೆ ಹೊಣೆ
ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಬೆಳೆಸಿ ಉಳಿಸುವಲ್ಲಿ ಯುವ ಪೀಳಿಗೆಗೆ ಹೊಣೆಗಾರಿಕೆ ಇದೆ. ಪ್ರತಿಭಾನ್ವಿತ ಯುವ ಕಲಾವಿದರಿದ್ದು ಅವರು ಈ ಹೊಣೆಯನ್ನು ವಹಿಸಿಕೊ ಳ್ಳುತ್ತಾರೆಂಬ ಭರವಸೆ ನನಗಿದೆ ಎಂದು ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಹೇಳಿದರು.

ರಾಜ್ಯ ಸರಕಾರವು ಯಕ್ಷಗಾನವನ್ನು ರಾಜ್ಯ ಕಲೆಯಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಭಾಸ್ಕರ ಭಟ್‌ ಅವರನ್ನು ಎಂಎಂಎನ್‌ಎಲ್‌ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ, ಎಜಿಇ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಡಾ| ಪ್ರಜ್ಞಾ ರಾವ್‌ ಅವರನ್ನು ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ತೀರ್ಥಹಳ್ಳಿ ಗೋಪಾಲ ಆಚಾರ್ಯರನ್ನು ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಸಚಿವ ಡಾ|ನಾರಾಯಣ ಸಭಾಹಿತ್‌, ಡಾ| ಸುರೇಶ್‌ ರಾವ್‌ ಅವರನ್ನು ಟಿ. ಸತೀಶ್‌ ಯು. ಪೈ,
ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಗೌರವಿಸಿದರು.

ಡಾ| ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿ ದರು. ಭಂಡಾರ್‌ಕಾರ್ ಕಾಲೇಜು ಪ್ರಾಂಶುಪಾಲ ಪ್ರೊ| ಎನ್‌. ನಾರಾಯಣ ಶೆಟ್ಟಿ ವಂದಿಸಿದರು. ಎಂಸಿಎಚ್‌ಪಿ ಸ. ಪ್ರಾಧ್ಯಾಪಕಿ ಡಾ| ನಿವೇದಿತಾ ಎಸ್‌. ಪ್ರಭು ನಿರ್ವಹಿಸಿದರು. ಎಂಇಎಂಜಿ ಅಧ್ಯಕ್ಷ, ಎಜಿಇ ಕುಲಸಚಿವ ಡಾ| ರಂಜನ್‌ ಪೈ ಆನ್‌ಲೈನ್‌ನಲ್ಲಿ ಪಾಲ್ಗೊಂಡರು.

ಶ್ರೇಷ್ಠ ಖಾಸಗಿ ವಿಶ್ವವಿದ್ಯಾನಿಲಯ
ಮಣಿಪಾಲ ಸಂಸ್ಥೆಯು ಬೋಧನೆಯ ಆಧುನೀಕರಣವನ್ನು ಕಲಿಸಿದೆ. ಭಾರತದ ಶ್ರೇಷ್ಠ ಖಾಸಗಿ ವಿ.ವಿ.ಯಾಗಿ ನಾವು ವೈದ್ಯಕೀಯ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಸಾಧಿಸುವ ಹಾದಿಯಲ್ಲಿದ್ದೇವೆ ಎಂದು ಮಾಹೆ ಬೆಂಗಳೂರು ಕ್ಯಾಂಪಸ್‌ ಸಹಕುಲಪತಿ ಡಾ| ಪ್ರಜ್ಞಾ ರಾವ್‌ ಹೇಳಿದರು.

ಮಣಿಪಾಲ ಸಂಸ್ಥೆಗಳು ಜ್ಞಾನವನ್ನು ಸೃಷ್ಟಿಸುತ್ತಿವೆ, ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸುತ್ತಿವೆ. ನಾನು ಮಣಿಪಾಲ ಕುಟುಂಬದ ಭಾಗವಾಗಿರಲು ಹೆಮ್ಮೆಪಡುತ್ತೇನೆ. “ಪ್ರಜ್ಞಾನಂ ಬ್ರಹ್ಮ’ ಎಂಬ ನಮ್ಮ ಸಂಸ್ಥೆಯ ಧ್ಯೇಯವಾಕ್ಯದಂತೆ ಜೀವನದಿಂದ ಸ್ಫೂರ್ತಿ ಪಡೆಯುವಲ್ಲಿ ನಂಬಿಕೆ ಇದೆ. ಸಮಗ್ರತೆ, ಪಾರದರ್ಶಕತೆ, ಗುಣಮಟ್ಟ, ಸಮೂಹ ಕಾರ್ಯ, ಪ್ರೀತಿಯ ಕಾರ್ಯಾನುಷ್ಠಾನ, ಎಲ್ಲಕ್ಕಿಂತ ಮಿಗಿಲಾಗಿ ಮಾನವತೆಯ ಸ್ಪರ್ಶದೊಂದಿಗೆ ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರು ಮುನ್ನಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಚಿತ್ರಗಳು: ಆಸ್ಟ್ರೋ ಮೋಹನ್‌

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.